ಸಾರಾಂಶ
ಜಿಲ್ಲೆಯಲ್ಲಿ ಅತಿಹೆಚ್ಚು ಹೆರಿಗೆ ಆಗುತ್ತಿರುವುದರಿಂದ ಈಗಾಗಲೇ ರಕ್ತ ಕೊರತೆ ಇರುವುದರಿಂದ ಬ್ಲಡ್ ಬ್ಯಾಂಕ್‌ನ್ನು ಆದಷ್ಟು ಬೇಗ ಕೊರತೆ ನೀಗಿಸಲಾಗುವುದು.
ಹನುಮಸಾಗರ: ಆಸ್ಪತ್ರೆಗೆ ಬಂದ ರೋಗಿಗಳನ್ನು ಮಾತೃ ಹೃದಯದಿಂದ ನೋಡಿಕೊಳ್ಳಬೇಕೆಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.
ಸಮೀಪದ ಹನುಮನಾಳ ಗ್ರಾಮದಲ್ಲಿ ಶನಿವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಎನ್.ಎಚ್.ಎಂ. ಯೋಜನೆ ಅಡಿಯಲ್ಲಿ ಸಮುದಾಯ ಆರೋಗ್ಯ ಕೇಂದ್ರದ ನೂತನ ಕಟ್ಟಡದ ಉದ್ಘಾಟಿಸಿ ಮಾತನಾಡಿದರು.ಜಿಲ್ಲೆಯಲ್ಲಿ ಅತಿಹೆಚ್ಚು ಹೆರಿಗೆ ಆಗುತ್ತಿರುವುದರಿಂದ ಈಗಾಗಲೇ ರಕ್ತ ಕೊರತೆ ಇರುವುದರಿಂದ ಬ್ಲಡ್ ಬ್ಯಾಂಕ್‌ನ್ನು ಆದಷ್ಟು ಬೇಗ ಕೊರತೆ ನೀಗಿಸಲಾಗುವುದು. ₹2.30 ಕೋಟಿ ಅನುದಾನ ಯೋಜನೆ ಕಟ್ಟಡ ಕಟ್ಟುವುದರೊಂದಿಗೆ ಅದಕ್ಕೆ ಬೇಕಾದ ಮಾನವ ಸಂಪನ್ಮೂಲ ಆದಷ್ಟು ಬೇಗ ಒದಗಿಸಲಾಗುವುದು. ನಮ್ಮ ತಾಲೂಕಿಗೆ ಅತಿಹೆಚ್ಚು ಅನುದಾನವನ್ನು ಆಸ್ಪತ್ರೆಗೆ ಕೊಡಲಾಗಿದೆ. ಆದಷ್ಟು ಬೇಗ ಆಸ್ಪತ್ರೆಗೆ ಸಿಬ್ಬಂದಿ ಒದಗಿಸಿಲಾಗುವುದು ಎಂದರು.ತಾಲೂಕು ವೈದ್ಯಾಧಿಕಾರಿ ಆನಂದ ಗೂಟುರ ಪ್ರಾಸ್ತಾವಿಕ ಮಾತನಾಡಿದರು.ಮಾಜಿ ಜಿಪಂ ಸದಸ್ಯ ಈರಣ್ಣ ಬದಾಮಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಟಿ. ಲಿಂಗರಾಜ, ಭೂದಾನಿಗಳಾದ ಕೆ.ಆರ್. ಕುಲಕರ್ಣಿ, ಸಿದ್ದಣ್ಣ ಪಟ್ಟೇದ ಸನ್ಮಾನಿಸಲಾಯಿತು.ಪ್ರಮುಖರಾದ ಗ್ರಾಪಂ ಅಧ್ಯಕ್ಷೆ ಸುಜಾತಾ ಚಿಕ್ಕನಾಳ, ಉಪಾಧ್ಯಕ್ಷೆ ಮಲ್ಲಮ್ಮ ಭಜಂತ್ರಿ, ಬಸವರಾಜ ಹಳ್ಳೂರ, ಶ್ರೀದೇವಿ ವಸ್ತ್ರದ, ಸಿದ್ದಪ್ಪ ಹೊಟ್ಟಿ, ನೀಲಪ್ಪ ಕುರುಬನಾಳ, ಪರಶುರಾಮಪ್ಪ ಬಾವಿ, ಈರಣ್ಣ ಗಜೇಂದ್ರಗಡ, ಮುಕುಂದರಾವ ಕುಲಕರ್ಣಿ, ಮಲ್ಲಮ್ಮ, ಈರಮ್ಮ, ರೇಖಾ ನಯನಾಪುರ, ಭೀಮವ್ವ ತುಂಬದ, ಲಕ್ಷ್ಮೀ ಗೌಡರ, ಕಳಕೇಶ ಗೌಡರ, ಸಂತೋಶ ಕಂಚೆರಿ, ಶೇಖಪ್ಪ ಕಂಬಳಿ, ಸಂಗಪ್ಪ ಹಳ್ಳೂರ, ಕೆ.ಎಸ್. ಹನಮಂತ, ಶರಣಪ್ಪ ಕುಂಬಾರ, ರೇಖಾ ಅರಳಿ, ಮಂಜುನಾಥ ಭೋವಿ, ಶಾಂತವ್ವ ಶಾಂತಗೇರಿ, ಧರ್ಮಪ್ಪ ತೊಂಡಿಹಾಳ, ಶರಣಪ ಅಣ್ಣಿಗೇರಿ, ಶಿವಾನಂದ ರಾಮಸ್ವಾಮಿ, ಚಂದ್ರು ವಡಿಗೇರಿ ಆಶಾ ಕಾರ್ಯಕರ್ತರು ಇದ್ದರು.