ಸಾರಾಂಶ
ಶಾಲೆಗಳು ದೇವಾಲಯಳಿದ್ದಂತೆ, ದೇವಾಲಯಗಳ ಹುಂಡಿಗೆ ಕಾಣಿಕೆ ಹಾಕುವ ಬದಲು ನಿಮ್ಮೂರಿನ ಶಾಲೆಗಳಿಗೆ ಕಾಳಜಿ ವಹಿಸಿ ದೇಣಿಗೆ ನೀಡಿದರೆ ಅದೇ ದೇಶ ಸೇವೆ ಮತ್ತು ಈಶ ಸೇವೆಯಾಗುತ್ತದೆ ಎಂದು ಶಾಸಕ ಸಿದ್ದು ಸವದಿ ಹೇಳಿದರು.
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಶಾಲೆಗಳು ದೇವಾಲಯಳಿದ್ದಂತೆ, ದೇವಾಲಯಗಳ ಹುಂಡಿಗೆ ಕಾಣಿಕೆ ಹಾಕುವ ಬದಲು ನಿಮ್ಮೂರಿನ ಶಾಲೆಗಳಿಗೆ ಕಾಳಜಿ ವಹಿಸಿ ದೇಣಿಗೆ ನೀಡಿದರೆ ಅದೇ ದೇಶ ಸೇವೆ ಮತ್ತು ಈಶ ಸೇವೆಯಾಗುತ್ತದೆ ಎಂದು ಶಾಸಕ ಸಿದ್ದು ಸವದಿ ಹೇಳಿದರು.ಸಮೀಪದ ಸೈದಾಪುರದ ಬಸವೇಶ್ವರ ಶಿಕ್ಷಣ ಸಂಸ್ಥೆಯ ಎಕ್ಸಲೆಂಟ್ ಹಿರಿಯ ಪ್ರಾಥಮಿಕ ಶಾಲೆಯ ಮೊಗ್ಗಿನ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂದು ಮಕ್ಕಳಲ್ಲಿ ಕಲಿಕಾ ಸಾಮರ್ಥ್ಯ ಹೆಚ್ಚಿದೆ, ಆದ್ದರಿಂದ ಸ್ಪರ್ಧೆಯೂ ಹೆಚ್ಚಿದೆ, ಪಾಲಕರಿಗೂ ಶಿಕ್ಷಣದ ಮಹತ್ವ ತಿಳಿದಿದೆ. ಕೂಲಿಮಾಡಿದರೂ ಮಕ್ಕಳನ್ನು ಶಾಲೆಗೆ ಕಳಿಸುತ್ತಿರುವುದು ರಾಷ್ಟ್ರದ ಹಿತದೃಷ್ಟಿಯಿಂದ ಉತ್ತಮ, ಸಂಸ್ಥಾಪಕ ಶಿವಲಿಂಗ ಪೋಳ ಅವರ ಶ್ರಮ ಸಾರ್ಥಕವಾಗಲಿ ಎಂದು ಹೇಳಿದರು
ಕಪರಟ್ಟಿ ಕಳ್ಳಿಗುದ್ದಿಯ ಶ್ರೀ ಮಹಾದೇವಾಶ್ರಮದ ಬಸವರಾಜ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಸಂಸ್ಕಾರವಿಲ್ಲದ ಶಿಕ್ಷಣ ವ್ಯರ್ಥ, ತಂದೆ, ತಾಯಿ, ಗುರುವನ್ನು ಗೌರವಿಸುವ ಶಿಕ್ಷಣ ನೀಡಿದರೆ ಭಾರತ ವಿಶ್ವಗುರುವಾಗಲು ಸಾಧ್ಯ ಎಂದರು.ಸಸ್ಥೆಯ ಅಧ್ಯಕ್ಷ ಶಿವಲಿಂಗ ಪೋಳ ಅಧ್ಯಕ್ಷತೆ ವಹಿಸಿ, ಗ್ರಾಪಂ ಅಧ್ಯಕ್ಷ ಮಹಾಲಿಂಗಪ್ಪ ಸನದಿ, ಜಿಪಂ ಮಾಜಿ ಅಧ್ಯಕ್ಷ ಮಹಾಂತೇಶ ಹಿಟ್ಟಿನಮಠ, ಬಸವರಾಜ ಮಾನೆ, ಸುಹಾಸ ಇಂಗಳೆ, ಎಸ್.ಟಿ.ಪೋಳ ಮಾತನಾಡಿದರು. ನಾರನಗೌಡ ಉತ್ತಂಗಿ ಉಪನ್ಯಾಸ ನೀಡಿದರು.
ಪಿಕೆಪಿಎಸ್ ಅಧ್ಯಕ್ಷ ಬಸವಣ್ಣೆಪ್ಪ ಬ್ಯಾಳಿ, ಬಸವರಾಜ ನಾಗನೂರ, ವಿನಯ ಹೆಗ್ಗಳಗಿ, ಶಿವಪ್ಪ ಬಾಯಪ್ಪಗೋಳ, ಪಿಯೂ? ಓಸ್ವಾಲ, ಆನಂದ ಬನಹಟ್ಟಿ, ಮುತ್ತನಾಯಕ ನಾಯಕ, ಬಸಪ್ಪ ಉಳ್ಳಾಗಡ್ಡಿ, ಮಲ್ಲನಗೌಡ ಪಾಟೀಲ,ಆರ್.ಕೆ.ನದಾಫ್, ಮಹಾಲಿಂಗಪ್ಪ ಬಾಯಪ್ಪಗೋಳ, ಶಿವಪ್ಪ ಹೋಳ್ಕರ್, ಪುಂಡಲೀಕ ಕೌಜಲಗಿ, ಸಿದ್ಧಾರೂಢ ಕೌಜಲಗಿ, ಕವಿತಾ ಕಾಂಬಳೆ, ತುಳಸವ್ವ ಲಮಾಣ, ರಾಮು ಪೋಳ ಇತರರಿದ್ದರು.ಶಿಕ್ಷಕಿ ವಾಲಿಕಾರ ವರದಿ ವಾಚಿಸಿ, ಮುಖ್ಯೋಪಾಧ್ಯಾಯ ಎಸ್.ಎಂ.ಚವ್ಹಾಣ, ಶಿಕ್ಷಕಿ ಅಶ್ವಿನಿ ಸ್ವಾಗತಿಸಿ, ನಿರೂಪಿಸಿದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.
;Resize=(128,128))
;Resize=(128,128))
;Resize=(128,128))
;Resize=(128,128))