ಉತ್ತಮ ಆಹಾರ ಪದ್ಧತಿಯನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳುವುದರ ಜತೆಗೆ ದಿನ ನಿತ್ಯವು ಒಂದಿಲ್ಲಾ ಒಂದು ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಆರೋಗ್ಯ ರಕ್ಷಣೆ ಮಾಡಿಕೊಳ್ಳಬೇಕು ಎಂದು ವಿಧಾನಸಭೆ ಉಪಸಭಾಧ್ಯಕ್ಷ, ಶಾಸಕ ರುದ್ರಪ್ಪ ಲಮಾಣಿ ಹೇಳಿದರು.
ಹಾವೇರಿ: ಉತ್ತಮ ಆಹಾರ ಪದ್ಧತಿಯನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳುವುದರ ಜತೆಗೆ ದಿನ ನಿತ್ಯವು ಒಂದಿಲ್ಲಾ ಒಂದು ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಆರೋಗ್ಯ ರಕ್ಷಣೆ ಮಾಡಿಕೊಳ್ಳಬೇಕು ಎಂದು ವಿಧಾನಸಭೆ ಉಪಸಭಾಧ್ಯಕ್ಷ, ಶಾಸಕ ರುದ್ರಪ್ಪ ಲಮಾಣಿ ಹೇಳಿದರು.ಶಾಸಕ ರುದ್ರಪ್ಪ ಲಮಾಣಿ ಜನ್ಮದಿನದ ಪ್ರಯುಕ್ತ ನಗರದ ಜಿಲ್ಲಾ ಕ್ರೀಡಾಂಗಣ ಬಳಿ ಭಾನುವಾರ ದರ್ಶನ್‌ಕುಮಾರ್ ಲಮಾಣಿ ಅಭಿಮಾನಿ ಬಳಗದಿಂದ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣೆ, ಸ್ವಯಂಪ್ರೇರಿತ ರಕ್ತದಾನ ಶಿಬಿರ ಹಾಗೂ ಉಚಿತ ನೇತ್ರ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಪ್ರಸ್ತುತ ದಿನಗಳಲ್ಲಿ ಬದಲಾದ ಆಹಾರ ಪದ್ಧತಿಯಿಂದ ಜನತೆಯು ಹಲವಾರು ಕಾಯಿಲೆಯಿಂದ ಬಳಲುತ್ತಿದ್ದಾರೆ. ಸಾಮಾನ್ಯ ಜನತೆಗೆ ಇಂತಹ ಉಚಿತ ಆರೋಗ್ಯ ತಪಾಸಣೆಯ ಶಿಬಿರಗಳು ಹೆಚ್ಚು, ಹೆಚ್ಚು ನಡೆಯಬೇಕಾಗಿದೆ ಎಂದು ತಿಳಿಸಿದರು. ಇದೇ ವೇಳೆ ಶಾಸಕ ರುದ್ರಪ್ಪ ಲಮಾಣಿ ಅವರು ಅಭಿಮಾನಿಗಳೊಂದಿಗೆ ಕೇಕ್ ಕತ್ತರಿಸಿ ಸಂತಸಪಟ್ಟರು. ಅಭಿಮಾನಿಗಳು ಶಾಸಕರಿಗೆ ಹೂ ಗುಚ್ಛ ನೀಡಿ ಶುಭಾಶಯ ಕೋರಿದರು.ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ದರ್ಶನ ಲಮಾಣಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್‌ಎಫ್‌ಎನ್ ಗಾಜಿಗೌಡ್ರ, ಶಂಕರ ಮೆಹರವಾಡೆ, ದಾಸಪ್ಪ ಕರ್ಜಗಿ, ರಾಘವೇಂದ್ರ ಬಾಸೂರ, ಮಲ್ಲಿಕಾರ್ಜುನ ಬೂದಗಟ್ಟಿ, ಸಂಜಯಗಾಂಧಿ ಸಂಜೀವಣ್ಣವರ, ಸುಭಾಷ್ ಚವ್ಹಾಣ, ಡಾ. ಸಂಜಯ ಡಾಂಗೆ, ಜಮೀರ್ ಜಿಗರಿ, ಅತಾವುಲ್ಲಾ ಖಾಜಿ, ಸುಧೀರ ಲಮಾಣಿ, ನಾಗರಾಜ ಜೋರಾಪುರಿ, ಶಾಂತಕ್ಕ ಶಿರೂರ, ಮಮತಾ ಜಾಬಿನ್, ಪ್ರಮೋದ್ ನವಲೆ, ಸಂಜನಾ ಲಮಾಣಿ, ಈರಣ್ಣ ಚೌಡಣ್ಣನವರ, ನಾಗರಾಜ ಬಡೆಮ್ಮನವರ, ವಿನಯ್ ಪಾಲನಕರ, ನೂರಅಹ್ಮದ ಕರ್ಜಗಿ, ಬಸವರಾಜ ಜಾಬೀನ್, ಶ್ರೀಧರ ದೊಡ್ಡಮನಿ, ಅಶೋಕಸಿಂಗ ರಜಪೂತ, ಉಮರ್ ಇನಾಮದಾರ, ಉಮೀದ ನದಾಫ, ರಾಧಾ ಸವಣೂರ, ಬಸವರಾಜ ಮಾಳಗಿ, ಮಹಾಲಿಂಗಯ್ಯ ಪಾಟೀಲ ಸೇರಿದಂತೆ ಅನೇಕರು ಹಾಜರಿದ್ದರು.