ಸಚಿನ್ ಸಾವಿನ ಪ್ರಕರಣ ಸಿಬಿಐಗೆ ವಹಿಸಿ: ವಿಶ್ವಕರ್ಮ ಸಮಾಜ ತಾಲೂಕು ಘಟಕ

| Published : Jan 06 2025, 01:03 AM IST

ಸಚಿನ್ ಸಾವಿನ ಪ್ರಕರಣ ಸಿಬಿಐಗೆ ವಹಿಸಿ: ವಿಶ್ವಕರ್ಮ ಸಮಾಜ ತಾಲೂಕು ಘಟಕ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಭಾವಿ ಸಚಿವರ ಬೆಂಬಲಿಗರ ಕಿರುಕುಳಕ್ಕೆ ಬೇಸತ್ತು ಸ್ವಯಂ ಪ್ರೇರಿತವಾಗಿ ಡೆತ್ ನೋಟ್ ಬರೆದಿಟ್ಟು ಸಚಿನ್ ಪಂಚಾಳ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತನ ಸಾವಿಗೆ ಕಾರಣರಾದದವರನ್ನು ಬಂಧಿಸಬೇಕು ಎಂದು ವಿಶ್ವಕರ್ಮ ಸಮಾಜದ ತಾಲ್ಲೂಕು ಘಟಕ ಆಗ್ರಹಿಸಿದೆ.

ಕನ್ನಡಪ್ರಭ ವಾರ್ತೆ ಸಿಂಧನೂರು

ಬೀದರನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಗುತ್ತಿಗೆದಾರ ಸಚಿನ್ ಪಂಚಾಳ ಸಾವಿನ ಬಗ್ಗೆ ಸಿಬಿಐ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವಂತೆ ವಿಶ್ವಕರ್ಮ ಸಮಾಜದ ತಾಲ್ಲೂಕು ಘಟಕ ಮಿನಿವಿಧಾನಸೌಧ ಕಚೇರಿಯಲ್ಲಿ ತಹಶೀಲ್ದಾರ್ ಅರುಣ್ ಎಚ್.ದೇಸಾಯಿ ಅವರ ಮುಖಾಂತರ ಸಿಎಂಗೆ ಮನವಿ ಸಲ್ಲಿಸಿತು.ಪ್ರಭಾವಿ ಸಚಿವರ ಬೆಂಬಲಿಗರ ಕಿರುಕುಳಕ್ಕೆ ಬೇಸತ್ತು ಸ್ವಯಂ ಪ್ರೇರಿತವಾಗಿ ಡೆತ್ ನೋಟ್ ಬರೆದಿಟ್ಟು ಸಚಿನ್ ಪಂಚಾಳ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುಟುಂಬಕ್ಕೆ ಆಸರೆಯಾಗಿರುವ ಸಚಿನ್ ಪಂಚಾಳ ಅವರ ಕುಟುಂಬದವರ ಅನಾಥರಾಗಿದ್ದು, ಸರ್ಕಾರ ಕೂಡಲೇ ಸಾವಿಗೆ ಕಾರಣರಾದದವರನ್ನು ಬಂಧಿಸಬೇಕು.ಡೆತ್ ನೋಟ್ ನಲ್ಲಿ ಬರೆದಿರುವಂತಹ ಆರೋಪಿಗಳಿಗೆ ನೀಡಿರುವ ಹಣವನ್ನು ಸಚಿನ್ ಕುಟುಂಬಸ್ಥರಿಗೆ ಹಿಂತಿರುಗಿಸಿಕೊಟ್ಟು,ಸಚಿನ್ ಪಂಚಾಳ ಅವರ ಸಾವಿಗೆ ನ್ಯಾಯ ದೊರಕಿಸಿ ಅವರ ಕುಟುಂಬಕ್ಕೆ ಸರ್ಕಾರದ ವತಿಯಿಂದ 50 ಲಕ್ಷ ರು.ಗಳನ್ನು ಪರಿಹಾರವನ್ನು ಕೊಡಬೇಕೆಂದು ಹಾಗೂ ಆತ್ಮಹತ್ಯೆಯ ಸಾವಿನ ಬಗ್ಗೆ ತನಿಖೆ ಮಾಡಲು ಸಿಬಿಐಗೆ ಕೊಡಬೇಕು ಎಂದು ಒತ್ತಾಯಿಸಿದರು.ಈ ಸಂಧರ್ಭದಲ್ಲಿ ಶ್ರೀ ವೆಂಕಟೇಶ ಮಹಾಸ್ವಾಮಿಗಳು ಶ್ಯಾಡಲಗೇರಿ ಮಠ,ವಿಶ್ವಕರ್ಮ ತಾಲೂಕ ಅಧ್ಯಕ್ಷ ಮೌನೇಶ ತಿಡಿಗೋಳ,ಕಾಳಿಕಾದೇವಿ ಟ್ರಸ್ಟ್ ಅಧ್ಯಕ್ಷ ಮಂಜುನಾಥ ಬಡಿಗೇರ,ಸಮಾಜದ ಹಿರಿಯರಾದ ಅಯ್ಯಪ್ಪ ನಿವೃತ್ತ ಬಿ.ಇ.ಓ,ವೀರಭದ್ರಪ್ಪ ಹಂಚಿನಾಳ,ರವೀಂದ್ರ ಗದ್ರಟಗಿ,ಡಾ.ವೀರೇಶ ತಿಡಿಗೋಳ,ದೇವಪ್ಪ ದೇವರಗುಡಿ,ಚನ್ನಪ್ಪ ಕೆ ಹೊಸಹಳ್ಳಿ ಇನ್ನಿತರ ಸಮಾಜದ ಮುಖಂಡರು ಇದ್ದರು.