ಡೆಂಘೀ ತಡೆಗಟ್ಟಲು ಅಗತ್ಯಕ್ರಮ ಕೈಗೊಳ್ಳಿ: ಬಂಗಾರೇಮ್ಮ

| Published : Jul 10 2024, 12:37 AM IST

ಸಾರಾಂಶ

ಡೆಂಘೀ ಜ್ವರ ಈ ಬಾರಿ ರಾಜ್ಯದ ಜನತೆಗೆ ಅತೀ ಹೆಚ್ಚು ಬಾಧಿಸುತ್ತಿದೆ. ಇದನ್ನು ತಡೆಗಟ್ಟಲು ಸರ್ಕಾರ ಕೂಡಲೇ ಅಗತ್ಯಕ್ರಮ ಕೈಗೊಳ್ಳುವಂತೆ ಹುಣಶ್ಯಾಳ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷೆ ಬಂಗಾರೇಮ್ಮ ಮಾನಪ್ಪ ದೊಡಮನಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ

ಡೆಂಘೀ ಜ್ವರ ಈ ಬಾರಿ ರಾಜ್ಯದ ಜನತೆಗೆ ಅತೀ ಹೆಚ್ಚು ಬಾಧಿಸುತ್ತಿದೆ. ಇದನ್ನು ತಡೆಗಟ್ಟಲು ಸರ್ಕಾರ ಕೂಡಲೇ ಅಗತ್ಯಕ್ರಮ ಕೈಗೊಳ್ಳುವಂತೆ ಹುಣಶ್ಯಾಳ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷೆ ಬಂಗಾರೇಮ್ಮ ಮಾನಪ್ಪ ದೊಡಮನಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.

ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಮಂಗಳವಾರ ಮನವಿಪತ್ರ ಸಲ್ಲಿಸಿ ಮಾತನಾಡಿದ ಅವರು, ತಾಲೂಕಿನ ಗ್ರಾಮೀಣ ಭಾಗದ ಜನತೆಯ ಆರೋಗ್ಯಕ್ಕೆ ತೀವ್ರ ತೊಂದರೆ ಉಂಟಾಗುತ್ತಿದೆ. ಈ ನಿಟ್ಟಿನಲ್ಲಿ ಆರೋಗ್ಯ ಉಪಕ್ರಮಗಳನ್ನು ಹೆಚ್ಚಿಸಬೇಕು, ಹಲವೆಡೆ ಹಳ್ಳಿಗಳಲ್ಲಿ ವೈದ್ಯರ ಕೊರತೆಯಿಂದ ಮುಚ್ಚಿರುವ ಪ್ರಾಥಮಿಕ ಆರೋಗ್ಯ, ಉಪ ಆರೋಗ್ಯ ಕೇಂದ್ರಗಳನ್ನು ಕೂಡಲೇ ಪುನಃ ಆರಂಭಿಸಿ, ಅಗತ್ಯ ವೈದ್ಯಾಧಿಕಾರಿ, ಸಿಬ್ಬಂದಿಯನ್ನು ನಿಯೋಜಿಸಿ ಆರೋಗ್ಯ ಸೇವೆಗಳನ್ನು ಒದಗಿಸಲು ಅಗತ್ಯಗತ್ಯವಾಗಿ ಕ್ರಮಕೈಗೊಳ್ಳಬೇಕು ಎಂದು ತಿಳಿಸಿದರು.ತಹಸೀಲ್ದಾರ್‌ ಪ್ರಕಾಶ ಸಿಂದಗಿ ಮನವಿ ಸ್ವೀಕರಿಸಿ ಮಾತನಾಡಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಮಲ್ಲಮ್ಮ ಕೂಂಡಗುಳ, ಶರಣಮ್ಮ, ರಮೇಶ್ ಚಲುವಾದಿ, ಆಕಾಶ ಬಿರಾದಾರ, ಪ್ರಜ್ವಲ್ ಮಲ್ಲಾರಿ, ಶಿವಾನಂದ ಖಾಚಾಪುರ ಇತರ ಗ್ರಾಮಗಳ ಗ್ರಾಮಸ್ಥರು ಉಪಸ್ಥಿತರಿದ್ದರು.