(ಲೀಡ್‌ ಪ್ಯಾಕೇಜ್) ಜಿಲ್ಲೆ ಮರುನಾಮಕರಣಕ್ಕೆ ಸಮಾಧಾನ ಇಲ್ಲ: ನಿಖಿಲ್

| Published : Jul 10 2024, 12:37 AM IST

(ಲೀಡ್‌ ಪ್ಯಾಕೇಜ್) ಜಿಲ್ಲೆ ಮರುನಾಮಕರಣಕ್ಕೆ ಸಮಾಧಾನ ಇಲ್ಲ: ನಿಖಿಲ್
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಗಳೂರನ್ನು ಹಂಗ್ ಮಾಡುತ್ತೇವೆ, ಹಿಂಗ್ ಮಾಡುತ್ತೇವೆ ಅಂದರಲ್ಲ ಅದೆಲ್ಲ ಏನಾಯಿತು. ಯಾವ ರೀತಿ ಬೆಂಗಳೂರು ಅಭಿವೃದ್ಧಿ ಹೆಸರಿನಲ್ಲಿ ಹಣ ದೋಚುತ್ತಿದ್ದಾರೆ. ಜನಸಾಮಾನ್ಯರ ಹೊಟ್ಟೆ ಮೇಲೆ ಹೊಡೆಯುತ್ತಿದ್ದಾರೆ ಎಂಬುದು ಗೊತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ರಾಮನಗರದಲ್ಲಿ ಕಿಡಿಕಾರಿದರು.

ರಾಮನಗರ: ಬೆಂಗಳೂರನ್ನು ಹಂಗ್ ಮಾಡುತ್ತೇವೆ, ಹಿಂಗ್ ಮಾಡುತ್ತೇವೆ ಅಂದರಲ್ಲ ಅದೆಲ್ಲ ಏನಾಯಿತು. ಯಾವ ರೀತಿ ಬೆಂಗಳೂರು ಅಭಿವೃದ್ಧಿ ಹೆಸರಿನಲ್ಲಿ ಹಣ ದೋಚುತ್ತಿದ್ದಾರೆ. ಜನಸಾಮಾನ್ಯರ ಹೊಟ್ಟೆ ಮೇಲೆ ಹೊಡೆಯುತ್ತಿದ್ದಾರೆ ಎಂಬುದು ಗೊತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕಿಡಿಕಾರಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2007ರಲ್ಲಿ ಕುಮಾರಣ್ಣ ರಾಮನಗರ ಜಿಲ್ಲೆಯಾಗಿ ಘೋಷಣೆ ಮಾಡಿದರು. ಅದು ಇತಿಹಾಸ. ಅದರ ನಂತರ ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಿವೆ. ಈಗ ರಾಮನಗರ ಜಿಲ್ಲೆಯ ಮರು ನಾಮಕರಣ ವಿಚಾರವಾಗಿ ಜಿಲ್ಲೆಯ ಜನತೆಗೆ ಸಮಾಧಾನ ಇಲ್ಲ. ಇದರ ಬಗ್ಗೆ ಮುಂದೆ ಚರ್ಚೆ ಮಾಡುತ್ತೇವೆ ಎಂದರು.

ರಾಮನ ಹೆಸರು ಇರುವ ಕಾರಣಕ್ಕೆ ರಾಮನಗರ ಜಿಲ್ಲೆ ಹೆಸರು ಬದಲಾವಣೆ ಮಾಡುತ್ತಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಕಾಂಗ್ರೆಸ್‌ನವರೇ ಹೇಳಬೇಕು. ನಾನು ಅದರ ಬಗ್ಗೆ ಚರ್ಚೆ ಮಾಡುವುದಿಲ್ಲ. ಜಾತಿ ಸಮುದಾಯದ ಮಧ್ಯೆ ಒಡಕು ತರುವ ಸಂಘರ್ಷದ ಮಾತುಗಳನ್ನು ನಾನು ಆಡುವುದಿಲ್ಲ. ಇವತ್ತು ಕೂಡ ನಾವು ಜತ್ಯಾತೀತರು ಎಂದು ಹೇಳಿದರು.ಬಾಕ್ಸ್‌.............

ಕೇಂದ್ರ ನಾಯಕರಿಂದ ಮೈತ್ರಿ ಅಭ್ಯರ್ಥಿ ಘೋಷಣೆ

ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಒಬ್ಬ ಆಕಾಂಕ್ಷಿಯೆಂದು ಹೇಳಿಕೆ ಕೊಟ್ಟಿರುವುದರಲ್ಲಿ ತಪ್ಪೇನಿಲ್ಲ. ಕುಮಾರಣ್ಣ ಆಗಲಿ ನಾವುಗಳಾಗಲಿ ಇಂಥವರೇ ಅಭ್ಯರ್ಥಿ ಎಂದು ಘೋಷಣೆ ಮಾಡಲು ಸಾಧ್ಯವಿಲ್ಲ. ಕ್ಷೇತ್ರದ ಜನತೆಯ ಭಾವನೆಗಳೇನು ಎಲ್ಲವನ್ನೂ ಕ್ರೂಢೀಕರಿಸಿ ಕೇಂದ್ರ ನಾಯಕರಿಗೆ ಕಳುಹಿಸಿದ ಮೇಲೆ ಸೂಕ್ತ ಮೈತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡುತ್ತಾರೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.

ಚನ್ನಪಟ್ಟಣ ಕ್ಷೇತ್ರದಲ್ಲಿ 1994ರಲ್ಲಿ ಎಂ.ವರದೆಗೌಡ ಸ್ಪರ್ಧಿಸಿ ಶಾಸಕರಾದರು. ಸಿಂ.ಲಿಂ.ನಾಗರಾಜು ಅವರಿಗೆ 55 ಸಾವಿರ ಮತಗಳು ಬಂದಿತ್ತು. ಆಮೇಲೆ ಅನಿತಾ ಕುಮಾರಸ್ವಾಮಿ 70 ಸಾವಿರ ಮತಗಳನ್ನು ಪಡೆದಿದ್ದರು. ಈ ಇತಿಹಾಸ ನೋಡಿದರೆ ಜೆಡಿಎಸ್‌ಗೆ ಸಾಂಪ್ರದಾಯಿಕ ಮತಗಳಿರುವುದು ಸ್ಪಷ್ಟವಾಗಿದೆ. ಈ ಕಾರಣದಿಂದಾಗಿ ಪಕ್ಷದ ಕಾರ್ಯಕರ್ತರು ಒಂದಷ್ಟು ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಕ್ಷೇತ್ರದ ಜನರ ಭಾವನೆ ಏನೆಂಬುದನ್ನು ಕ್ರೂಢೀಕರಿಸಬೇಕಿದೆ. ಅಂತಿಮವಾಗಿ ಬಿಜೆಪಿ ಮತ್ತು ಜೆಡಿಎಸ್ ರಾಜ್ಯ ನಾಯಕರು ಕೇಂದ್ರ ನಾಯಕರೊಂದಿಗೆ ಚರ್ಚಿಸಿ ಗೊಂದಲಕ್ಕೆ ಎಡೆ ಮಾಡಿಕೊಡದೆ ಅಭ್ಯರ್ಥಿ ಆಯ್ಕೆ ಮಾಡುತ್ತಾರೆ ಎಂದು ತಿಳಿಸಿದರು.