ಸಾರಾಂಶ
ಕಮಲನಗರ ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ನಡೆದ ರೈತರ ಜಾಗೃತ ಸಭೆಯಲ್ಲಿ ಸಹಾಯಕ ಕೃಷಿ ನಿರ್ದೆಶಕ ಧೂಳಪ್ಪಾ ಮಾತನಾಡಿದರು.
ರೈತರ ಜಾಗೃತ ಸಭೆಯಲ್ಲಿ ಸಹಾಯಕ ಕೃಷಿ ನಿರ್ದೇಶಕ ಧೂಳಪ್ಪಾ ಸಲಹೆಕನ್ನಡಪ್ರಭ ವಾರ್ತೆ ಕಮಲನಗರ
ಭಾರತ ಕೃಷಿ ಪ್ರಧಾನವಾದ ದೇಶ. ರೈತರು ಆರ್ಥಿಕವಾಗಿ ಸದೃಢವಾಗಲು ಕೃಷಿಯೊಂದಿಗೆ ಹೈನುಗಾರಿಕೆ, ರೇಷ್ಮೆ, ಮೀನು ಸಾಕಣೆ ಸೇರಿದಂತೆ ಕೃಷಿಯೇತರ ಚಟುವಟಿಕೆಯಲ್ಲಿ ತೊಡಗಿಕೊಳ್ಳಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಧೂಳಪ್ಪಾ ಹೇಳಿದರು.ತಾಲೂಕಿನ ಕಮಲನಗರ ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಸೋಮವಾರ ತಾಲೂಕು ರೈತ ಸಂಘ ಮತ್ತು ತಾಲೂಕು ಆಡಳಿತದ ಸಹಯೋಗದಲ್ಲಿ ಕೃಷಿ ಕ್ಷೇತ್ರಕ್ಕೆ ಸಂಭಂದಿಸಿದ ಇಲಾಖೆಗಳಾದ ತೋಟಗಾರಿಕೆ, ಅರಣ್ಯ, ಪಶು, ಮೀನುಗಾರಿಕೆ ಇಲಾಖೆಯ ತಾಲೂಕು ಅಧಿಕಾರಿಗಳು ತಮ್ಮ ಇಲಾಖೆಯ ಯೋಜನೆಗಳ ಕುರಿತು, ಇಲಾಖೆ ಸೌಲಭ್ಯಗಳ ಕುರಿತು ರೈತರಿಗೆ ಜಾಗೃತಿ ಸಭೆಯಲ್ಲಿ ಮಾತನಾಡಿ, ಬಿತ್ತನೆ ಬೀಜ, ಉತ್ತಮ ಇಳುವರಿಗೆ ಔಷಧಿ ಸಿಂಪಡಣೆ ಮಾಡಬೇಕು ಹಾಗೂ ಮೈಕ್ರೋ ಪೋಷಕಾಂಶಗಳ ಬಗ್ಗೆ ತಿಳಿಸಿದರು.
ತಾಲೂಕು ಪಶು ವೈದ್ಯಾಧಿಕಾರಿ ಸೋಮಶೇಖರ್ ಮಾತನಾಡಿ, ಹಸುಗಳು ಹೆಚ್ಚು ಹಾಲಿನ ಇಳುವರಿಗೆ ಆಸ್ಪತ್ರೆಯಲ್ಲಿ ಸಿಗುವ ಔಷಧಿಗಳ ಕುರಿತು ತಿಳಿಸಿದರು.ಕಮಲನಗರ ರೈತ ಸಂಘದ ಅಧ್ಯಕ್ಷ ಪ್ರವೀಣ್ ಕುಲಕರ್ಣಿ ಅವರು, ರೈತರು ಮುಂದಿನ ತಿಂಗಳು ನಡೆಯುವ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಿದರು.
ಈ ವೇಳೆ ಉತ್ತಮರಾವ ಮಾನೆ, ರಾಜಕುಮಾರ ಪೊಲೀಸ್ ಪಾಟೀಲ್, ವಿಠ್ಠಲರಾವ್ ಪಾಟೀಲ್, ಜಗನ್ನಾಥ ಸೋಲಾಪುರೆ, ಸೈಯದ್ ಮುಸಾ, ಮಡಿವಾಳಪ್ಪ ಕಾಡೋದೇ, ರಾಮರಾವ, ಪ್ರಶಾಂತ್ ಖಾನಾಪುರ ಅನೇಕರು ಇದ್ದರು.