ಸಾರಾಂಶ
ರಾಣೆಬೆನ್ನೂರು: ಆಕಸ್ಮಿಕವಾಗಿ ಸಂಭವಿಸಬಹುದಾದ ಅಗ್ನಿ ಅವಘಡದಿಂದ ಯಾರೂ ಸಹ ಭಯಭೀತರಾಗದೆ ಮುಂದಾಗಬಹುದಾದ ಅನಾಹುತ ತಪ್ಪಿಸಲು ಮುಂಜಾಗ್ರತಾ ಕ್ರಮ ಅನುಸರಿಸಲು ಮುಂದಾಗಬೇಕು ಎಂದು ಸ್ಥಳೀಯ ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿ ಎಸ್.ಎಸ್. ಶಿವಳ್ಳಿ ಹೇಳಿದರು.
ಶುಕ್ರವಾರ ನಗರದ ಹೊರವಲಯದ ಕೆ.ವಿ.ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ಅಗ್ನಿ ಅವಘಡಗಳ ಅರಿವು ಮತ್ತು ಅಗ್ನಿ ತಡೆಗಟ್ಟುವ ದಿನದ ಕುರಿತು ಏರ್ಪಡಿಸಲಾಗಿದ್ದ ಕಾರ್ಯಕ್ರಮಕ್ಕೆ ಪ್ರಾತ್ಯಕ್ಷಿತೆಯ ಮೂಲಕ ಚಾಲನೆ ನೀಡಿ ಮಾತನಾಡಿದರು.ಮನ, ಶಾಲಾ, ಕಾಲೇಜು, ಸಭೆ, ಸಮಾರಂಭ ಇನ್ನೀತರ ಕಾರ್ಯಕ್ರಮಗಳಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿದಾಗ ಮುಂಜಾಗ್ರತಾ ಕ್ರಮವಾಗಿ ಧೈರ್ಯವಾಗಿ ಬೆಂಕಿ ಆರಿಸುವ ಸಾಮಾನ್ಯ ಜ್ಞಾನ ಎಲ್ಲರಲ್ಲೂ ಬರಬೇಕು ಎಂದರು.
ಬೆಂಗಳೂರಿನಲ್ಲಿ ಆಕಸ್ಮಿಕವಾಗಿ ಅಗ್ನಿ ಅಪಘಾತದಲ್ಲಿ ಒಂಬತ್ತು ಜನರು ದುರ್ಮರಣ ಹೊಂದಿದ ಪ್ರಯುಕ್ತ ರಾಜ್ಯ ಸರ್ಕಾರವು ಅವರ ಸ್ಮರಣೆಗಾಗಿ ಪ್ರತಿ ವರ್ಷ ಫೆ. 23ರಂದು ಅಗ್ನಿ ತಡೆಯುವ ದಿನವನ್ನಾಗಿ ಆಚರಿಸಲು ಆದೇಶ ಮಾಡಿತು ಎಂದರು.ಇದೇ ಸಂದರ್ಭದಲ್ಲಿ ಅಗ್ನಿ ಶಾಮಕ ಠಾಣೆಯ ಪ್ರಮುಖ ಆಂಜನೇಯ ಗೋರಣ್ಣನವರ್ ಅವರು ಗ್ಯಾಸ್ ಲಿಕೇಜ್, ಆಕಸ್ಮಿಕ ಬೆಂಕಿ,ಎಲೆಕ್ಟ್ರೀಕಲ್ ಶಾಟ೯ ಸಕ್ರ್ಯೂಟನಿಂದಾಗುವ ಅಗ್ನಿ ಅವಘಡಗಳನ್ನು ಹೇಗೆ ನಿಯಂತ್ರಿಸಬೇಕು ಎಂಬುದರ ಬಗ್ಗೆ ವಿವಿಧ ಉಪಕರಣಗಳಿಂದ ಪ್ರಾತ್ಯಕ್ಷಿತೆಯ ಮೂಲಕ ವಿವರಿಸಿದರು.
ಬೆಂಕಿ ಹೇಗೆ ತಡೆಗಟ್ಟಬೇಕು, ಠಾಣೆಗೆ ಹೇಗೆ ಮಾಹಿತಿ ನೀಡಬೇಕು ಎಂಬುದರ ಬಗ್ಗೆ ವಿವರಣೆ ನೀಡಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಬೆಂಕಿ ಅನಾಹುತದಲ್ಲಿ ಬಲಿದಾನವಾದ ಮೃತರ ಆತ್ಮಕ್ಕೆ ಶಾಂತಿ ದೊರೆಯಲೆಂದು ಒಂದು ನಿಮಿಷ ಮೌನಾಚರಣೆ ಸಲ್ಲಿಸಲಾಯಿತು.ಸಂಸ್ಥೆಯ ಅಧ್ಯಕ್ಷ ಅಭಿಲಾಶ್ ಬ್ಯಾಡಗಿ, ಕಾಲೇಜಿನ ಪ್ರಾಂಶುಪಾಲ ಶ್ರೀಕಾಂತ್ ಪಾಟೀಲ್, ಉಪನ್ಯಾಸಕ ಚಿದಂಬರ್ ನಾಡಿಗೇರ, ರವಿ ಎಚ್ ಟಿ, ಅಣ್ಣಪ್ಪ ಡಿ, ಲತಾ ಎಚ್ ಕೆ, ಸಾನು ಐಶ್ವರ್ಯ, ಪೂಜಾ ಬೆನಕನಕೊಂಡ, ದೇವರಾಜ್ ಬಿ, ಭಾವನಾ, ಫಯಾಜ್, ಡಿಎಸ್ ಪ್ರಿಯಾಂಕ, ಸಲ್ಮಾ ಕಯಾಮ್, ಎಸ್ ನವೀನ್, ಪ್ರಕಾಶ್ ನಾಗರಜ್ಜಿ, ಟಿ ಅನಿತಾ ಸೇರಿದಂತೆ ಅಗ್ನಿಶಾಮಕ ಠಾಣೆಯ ಹಾಗೂ ಕಾಲೇಜಿನ ಸಿಬ್ಬಂದಿಗಳು ಇದ್ದರು.