ಕಾಲುಬಾಯಿ ರೋಗ ತಡೆಗೆ ಮುಂಜಾಗ್ರತಾ ಕ್ರಮ ವಹಿಸಿ

| Published : Oct 07 2023, 02:17 AM IST

ಕಾಲುಬಾಯಿ ರೋಗ ತಡೆಗೆ ಮುಂಜಾಗ್ರತಾ ಕ್ರಮ ವಹಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಹೊಸಕೋಟೆ: ಹಸುಗಳ ಕಾಲು ಬಾಯಿ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ರಾಸುಗಳಿಗೆ ಲಸಿಕೆ ಹಾಕಿಸಬೇಕು. ರೋಗಬಂದ ರಾಸುಗಳನ್ನು ಆರೋಗ್ಯಕರ ದನಗಳಿಂದ ಬೇರ್ಪಡಿಸಿ, ಕೂಡಲೇ ಪಶು ವೈದ್ಯರಿಂದ ಚಿಕಿತ್ಸೆ ನೀಡಬೇಕು ಎಂದು ತಾಲೂಕು ಮುಖ್ಯ ಪಶುವೈದ್ಯಾಧಿಕಾರಿ ಸಿ.ಎನ್.ನಾರಾಯಣಸ್ವಾಮಿ ತಿಳಿಸಿದರು.
ಹೊಸಕೋಟೆ: ಹಸುಗಳ ಕಾಲು ಬಾಯಿ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ರಾಸುಗಳಿಗೆ ಲಸಿಕೆ ಹಾಕಿಸಬೇಕು. ರೋಗಬಂದ ರಾಸುಗಳನ್ನು ಆರೋಗ್ಯಕರ ದನಗಳಿಂದ ಬೇರ್ಪಡಿಸಿ, ಕೂಡಲೇ ಪಶು ವೈದ್ಯರಿಂದ ಚಿಕಿತ್ಸೆ ನೀಡಬೇಕು ಎಂದು ತಾಲೂಕು ಮುಖ್ಯ ಪಶುವೈದ್ಯಾಧಿಕಾರಿ ಸಿ.ಎನ್.ನಾರಾಯಣಸ್ವಾಮಿ ತಿಳಿಸಿದರು. ತಾಲೂಕಿನ ನಡವತ್ತಿ ಗ್ರಾಮದ ಪಶು ಚಿಕಿತ್ಸಾಲಯ ವ್ಯಾಪ್ತಿಯ ನಡವತ್ತಿ, ಅಪ್ಪಾಜಿಪುರ ಹಾಗು ಕೆ.ಮಲ್ಲಸಂದ್ರ ಗ್ರಾಮಗಳಲ್ಲಿ ಹಮ್ಮಿಕೊಂಡಿದ್ದ ಜಾನುವಾರುಗಳಿಗೆ ಕಾಲು ಬಾಯಿ ಜ್ವರದ ಲಸಿಕಾ ಅಭಿಯಾನದಲ್ಲಿ ಮಾತನಾಡಿದ ಅವರು, ಕಾಲು, ಬಾಯಿ ರೋಗಕ್ಕೆ ತುತ್ತಾದ ರಾಸುವಿನ ಬಾಯಿಂದ ಜಲ್ಲುಸೋರಲು ಆರಂಭವಾಗುತ್ತದೆ. ರಾಸುವಿನ ಬಾಯಲ್ಲಿ ಸಣ್ಣ ಗುಳ್ಳೆಗಳು ಆಗುವ ಮೂಲಕ ಬಾಯಿ ಹುಣ್ಣಾಗಲಿದೆ. ಇದರಿಂದ ಹುಲ್ಲು ತಿನ್ನಲು ಸಾಧ್ಯವಾಗದೇ ರಾಸು ನಿಶಕ್ತಿಯಾಗುತ್ತದೆ. ರಾಸುವಿನ ಕೆಚ್ಚಲು ಗಾಯಗಳಾಗಿ ನಡೆಯಲು ಕಷ್ಟವಾಗುತ್ತದೆ. ಈ ಎಲ್ಲಾ ಲಕ್ಷಣಗಳು ಆರಂಭವಾಗುತ್ತಿದ್ದಂತೆ ಸೂಕ್ತ ಸಮಯಕ್ಕೆ ಚಿಕಿತ್ಸೆ ಇಲ್ಲದಿದ್ದರೆ ರಾಸು ಮೃತಪಡುವ ಅಪಾಯವೇ ಹೆಚ್ಚಾಗಿರುತ್ತದೆ ಎಂದು ರೈತರಿಗೆ ಜಾಗೃತಿ ಮೂಡಿಸಿದರು. ಈ ಸಂದರ್ಭದಲ್ಲಿ ಪಶು ವೈದ್ಯಾಧಿಕಾರಿ ಡಾ.ಲೋಕೇಶ್, ಹೊಸಕೋಟೆ ಹಾಲು ಡೇರಿ ಘಟಕದ ಸಹಾಯಕ ವ್ಯವಸ್ಥಾಪಕರು ಶ್ರೀರಾಮ್, ನಡವತ್ತಿ ಡೇರಿ ಉಪಾಧ್ಯಕ್ಷ ಸಂಪಂಗಿ, ಪಶು ಪಾಲನಾ ಇಲಾಖೆಯ ಲಸಿಕಾ ಸಿಬ್ಬಂದಿ ಬೋಜಣ್ಣ, ಚಂದ್ರಕಲಾ, ಶಿವಕುಮಾರ, ರಾಮಚಂದ್ರ, ಕರಿಹನುಮಯ್ಯ, ಮುರಳಿ, ಚಿಕ್ಕಪ್ಪಯ್ಯ, ಡೇರಿ ಸಿಇಒ ಪ್ರಭು, ಸಹಾಯಕರಾದ ವಸಂತ್, ನಾರಾಯಣರಾವ್, ಸುನೀಲ್, ಅರುಣ್ ಇತರರು ಹಾಜರಾಗಿದ್ದರು. ಫೋಟೋ – 6 ಹೆಚ್‌ಎಸ್‌ಕೆ 3 ಹೊಸಕೋಟೆ ತಾಲೂಕು ನಡವತ್ತಿ ಡೇರಿ ಆವರಣದಲ್ಲಿ ಕಾಲು ಬಾಯಿ ಲಸಿಕಾ ಕಾರ್ಯಕ್ರಮಕ್ಕೆ ತಾಲೂಕು ಪಶು ಆಸ್ಪತ್ರೆ ಆಡಳಿತ ಅಧಿಕಾರಿ ಡಾ.ನಾರಾಯಣಸ್ವಾಮಿ ಚಾಲನೆ ನೀಡಿದರು.