ತಕ್ಷಶಿಲಾ ಇಂಟರ್‌ ನ್ಯಾಷನಲ್ ಸ್ಕೂಲ್ ಆರಂಭ

| Published : May 12 2024, 01:21 AM IST

ಸಾರಾಂಶ

ನಮ್ಮ ಮಕ್ಕಳು ಬೇರೆಡೆ ಹೋಗುವುದನ್ನು ತಪ್ಪಿಸಿ, ಇಲ್ಲಿಯೇ ಗುಣಮಟ್ಟದ ಶಿಕ್ಷಣ ಒದಗಿಸಲು ನಗರದ ಹಸನಾಪುರ ಆಂಜನೇಯ ದೇವಸ್ಥಾನ ಹತ್ತಿರದ ತಕ್ಷಶಿಲಾ ಇಂಟರ್‌ನ್ಯಾಷನಲ್ ಸ್ಕೂಲ್ ಆರಂಭಿಸುತ್ತಿದ್ದೇವೆ

ಕನ್ನಡಪ್ರಭ ವಾರ್ತೆ ಸುರಪುರ

ಸ್ಥಳೀಯ ಮಟ್ಟದ ವಿದ್ಯಾರ್ಥಿಗಳು ಸಿಬಿಎಸ್‌ಐ ಮಾದರಿ ಶಿಕ್ಷಣ ಪಡೆಯಲು ಬೇರೆಡೆ ಹೋಗುತ್ತಿದ್ದಾರೆ. ನಮ್ಮ ಮಕ್ಕಳು ಬೇರೆಡೆ ಹೋಗುವುದನ್ನು ತಪ್ಪಿಸಿ, ಇಲ್ಲಿಯೇ ಗುಣಮಟ್ಟದ ಶಿಕ್ಷಣ ಒದಗಿಸಲು ನಗರದ ಹಸನಾಪುರ ಆಂಜನೇಯ ದೇವಸ್ಥಾನ ಹತ್ತಿರದ ತಕ್ಷಶಿಲಾ ಇಂಟರ್‌ನ್ಯಾಷನಲ್ ಸ್ಕೂಲ್ ಆರಂಭಿಸುತ್ತಿದ್ದೇವೆ ಎಂದು ವರದರಾಜ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಅಧ್ಯಕ್ಷೆ ಅಂಬಿಕಾ ಡಾ. ಮುಕುಂದ ಯನಗುಂಟಿಕರ್ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇರಳದ ನುರಿತ ಮತ್ತು ಅನುಭವಿ ಶಿಕ್ಷಕರಿಂದ ಮಕ್ಕಳಿಗೆ 21ನೇ ಶತಮಾನದ ಕೌಶಲ್ಯಗಳ ರೀತಿ ಶಿಕ್ಷಣ ಒದಗಿಸಲಾಗುತ್ತದೆ. ಸ್ಮಾರ್ಟ್ ಕ್ಲಾಸ್, ಕಂಪ್ಯೂಟರ್ ಶಿಕ್ಷಣ ಮಕ್ಕಳ ವೈಯಕ್ತಿಕ ಪ್ರತಿಭೆ ಬೆಳೆಸುವುದು ನಮ್ಮ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ ಎಂದರು.

ಮೇ 12ರಂದು ಶಿಕ್ಷಣ ತಜ್ಞ ಗುರುರಾಜ ಕರಜಗಿ ಉಪನ್ಯಾಸ ನೀಡುವರು. ಹೊಸದುರ್ಗ ಭಗೀರಥ ಪೀಠಾಧಿಪತಿ ಡಾ. ಪುರುಷೋತ್ತಮಾನಂದಪುರಿ ಸ್ವಾಮೀಜಿ, ತಿಂಥಣಿ ಕನಕ ಗುರು ಪೀಠಾಧಿಪತಿ ಸಿದ್ಧರಾಮಾನಂದಪುರಿ ಸ್ವಾಮೀಜಿ, ಗೋಲಪಲ್ಲಿ ವಾಲ್ಮೀಕಿ ಆಶ್ರಮದ ವರದಾನೇಶ್ವರ ಸ್ವಾಮೀಜಿ, ವೀರಘಟ್ಟದ ಅಡವಿಲಿಂಗ ಮಹಾರಾಜ, ಲಕ್ಷ್ಮಿಪುರ ಶ್ರೀಗಿರಿ ಮಠದ ಡಾ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು, ಅಗತೀರ್ಥ ರೇವಣಸಿದ್ದೇಶ್ವರ ಶಾಂತಮಯ ಸ್ವಾಮೀಜಿ ಸಾನಿಧ್ಯ ವಹಿಸುವರು ಎಂದು ತಿಳಿಸಿದರು.

ಅಂಬಿಕಾ ಡಾ. ಮುಕುಂದ ಯನಗುಂಟಿ ಅಧ್ಯಕ್ಷತೆ ವಹಿಸುವರು. ಉಪನಿರ್ದೇಶಕ ಮಂಜುನಾಥ, ಬಿಇಒ ಯಲ್ಲಪ್ಪ ಕಾಡ್ಲೂರ ಭಾಗವಹಿಸಲಿದ್ದಾರೆ ಎಂದರು.

ಪ್ರಮುಖರಾದ ಗೌರಿಶಂಕರ ಯನಗುಂಟಿ, ಶಂಕರ ಬಡಿಗೇರ, ಬಸವರಾಜ ರುಕ್ಮಾಪೂರ, ರಂಗಣ್ಣ ದೇವಿಕೇರಾ, ನಿಂಗಣ್ಣ ಕನ್ನೆಳ್ಳಿ, ರಾಜು ಶಾಹಪೂರಕರ್, ರಂಗನಾಥ ಬಿರಾದಾರ್ ಇತರರಿದ್ದರು.