ಮಾದರಿ ಶಿಕ್ಷಕರಿದ್ದರೆ ಮಾತ್ರ ಪ್ರತಿಭಾವಂತರನ್ನು ಗುರುತಿಸಲು ಸಾಧ್ಯ: ಯತಿರಾಜ್

| Published : Feb 18 2024, 01:33 AM IST

ಮಾದರಿ ಶಿಕ್ಷಕರಿದ್ದರೆ ಮಾತ್ರ ಪ್ರತಿಭಾವಂತರನ್ನು ಗುರುತಿಸಲು ಸಾಧ್ಯ: ಯತಿರಾಜ್
Share this Article
  • FB
  • TW
  • Linkdin
  • Email

ಸಾರಾಂಶ

ವಿಜಯಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಧ್ಯಾಪಕನಾಗಿ ನಾನು ವೃತ್ತಿ ಆರಂಭಿಸಿದೆ. ನಿವೃತ್ತಿಯಾದ ಮೇಲೆ ಸುಮ್ಮನೆ ಕುಳಿತುಕೊಳ್ಳದೇ ಪುಸ್ತಕ ಹೊರತಂದಿದ್ದೇನೆ. ಈ ‘ಧರ್ಮ ಪಥ’ ನ್ಯಾಯ ಮಾರ್ಗದತ್ತ ಓದುಗರನ್ನು ಪ್ರೇರೇಪಿಸುತ್ತದೆ.

ಕನ್ನಡಪ್ರಭ ವಾರ್ತೆ ಪಾಂಡಪುವರ

ಗ್ರಾಮೀಣ ಪ್ರದೇಶದಲ್ಲಿ ಎನ್.ಟಿ.ರಂಗನಾಥನ್ ರಂತಹ ಮಾದರಿ ಶಿಕ್ಷಕರಿದ್ದರೆ ಮಾತ್ರ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಅವರ ಸಾಧನೆಗೆ ಪ್ರೇರಕರಾಗುತ್ತಾರೆ ಎಂದು ಧಾರ್ಮಿಕ ದತ್ತಿ ಇಲಾಖೆ ಉಪ ಆಯುಕ್ತ ಯತಿರಾಜ್ ಸಂಪತ್‌ಕುಮಾರನ್ ತಿಳಿಸಿದರು.

ಪಟ್ಟಣದ ರೋಟರಿ ಶಿಕ್ಷಣ ಸಂಸ್ಥೆಯಲ್ಲಿ ಎನ್.ಟಿ.ರಂಗನಾಥನ್ ಅವರ ಧರ್ಮಪಥ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿ, ನಾನು ವಾಗ್ಮಿಯಲ್ಲ, ವಿಜ್ಞಾನಿಯೂ ಅಲ್ಲ. ನನಗೆ ವಿದ್ಯಾಭ್ಯಾಸ ನೀಡಿದ ಗುರುಗಳಾಗಿ ಎನ್.ಟಿ.ರಂಗನಾಥನ್ ಅವರ ಆಶೀರ್ವಾದದಿಂದ ಸರ್ಕಾರಿ ಹುದ್ದೆಯಲ್ಲಿದ್ದೇನೆ ಎಂದರು.

ವಿಜಯಾ ಪ್ರಥಮ ದರ್ಜೆ ಕಾಲೇಜು ಹಾಗೂ ಮೇಲುಕೋಟೆಯ ಯಧುಶೈಲ ಶಾಲೆಗಳನ್ನು ವಿಧ್ಯಾಭ್ಯಾಸ ಪಡೆದಿದ್ದು ನನ್ನ ಸುಕೃತ. ಅದರಲ್ಲೂ ಗ್ರಾಮೀಣ ಮಕ್ಕಳ ಭವಿಷ್ಯದ ಬದುಕನ್ನು ಹಸನಾಗಿಸಬೇಕೆಂಬ ರಂಗನಾಥನ್ ಅವರಂತಹ ವ್ಯಕ್ತಿತ್ವಗಳು ಹೆಚ್ಚಾಗಬೇಕೆಂದು ಆಶಿಸಿದರು.

ಲೇಖಕ, ಶಿಕ್ಷಣ ಸಂಸ್ಥೆ ನಿವೃತ್ತ ಅಧ್ಯಕ್ಷ ಎನ್.ಟಿ.ರಂಗನಾಥನ್, ವಿಜಯಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಧ್ಯಾಪಕನಾಗಿ ನಾನು ವೃತ್ತಿ ಆರಂಭಿಸಿದೆ. ನಿವೃತ್ತಿಯಾದ ಮೇಲೆ ಸುಮ್ಮನೆ ಕುಳಿತುಕೊಳ್ಳದೇ ಪುಸ್ತಕ ಹೊರತಂದಿದ್ದೇನೆ. ಈ ‘ಧರ್ಮ ಪಥ’ ನ್ಯಾಯ ಮಾರ್ಗದತ್ತ ಓದುಗರನ್ನು ಪ್ರೇರೇಪಿಸುತ್ತದೆಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿಧಾನಸೌಧದ ಡಿಪಿಎಆರ್ ಎನ್.ಮಹೇಶ್‌ಬಾಬು, ವಿಜಯ ಪ್ರಥಮ ದರ್ಜೆ ಕಾಲೇಜಿನ ನಿವೃತ ಪ್ರಾಂಶುಪಾಲ ಪ್ರೊ.ನಿ.ಗಿರಿಗೌಡ, ಲೇಖಕ ಹಾಗೂ ಕನ್ನಡ ಇಲಾಖೆ ಮುಖ್ಯಸ್ಥ ಮಹಾಜನ ಕಾಲೇಜು ಪ್ರೊ.ಎಚ್.ಆರ್.ತಿಮ್ಮೇಗೌಡ, ರೋಟರಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ತಿಮ್ಮೇಗೌಡ, ಮುಖ್ಯ ಶಿಕ್ಷಕ ನಾರಾಯಣಸ್ವಾಮಿ, ನಿರ್ದೇಶಕ ಅಶೋಕ್‌ಜೈನ್, ಪಿ.ರಮೇಶ್ ಮತ್ತಿತರರಿದ್ದರು.

ದರ್ಶನ್ ಹುಟ್ಟುಹಬ್ಬ ಮಕ್ಕಳಿಗೆ ನೋಟ್ ಬುಕ್ ವಿತರಣೆಕೆ.ಆರ್.ಪೇಟೆ:ತಾಲೂಕಿನ ಚನ್ನಾಪುರ ಗ್ರಾಮದಲ್ಲಿ ಚಿತ್ರ ದರ್ಶನ್ ಹುಟ್ಟುಹಬ್ಬದ ಅಂಗವಾಗಿ ಅಭಿಮಾನಿ ಬಳಗದಿಂದ ಅಂಗನವಾಡಿ ಹಾಗೂ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತವಾಗಿ ನೋಟ್ ಬುಕ್ ಗಳು, ಪೆನ್ಸಿಲ್, ರಬ್ಬರ್ ಹಾಗೂ ಕರ್ನಾಟಕದ ಮತ್ತು ಭಾರತದ ಭೂಪಟಗಳು ಸೇರಿದಂತೆ ಅನೇಕ ಲೇಖನ ಸಾಮಗ್ರಿಗಳನ್ನು ವಿತರಿಸಲಾಯಿತು.ಈ ವೇಳೆ ದರ್ಶನ್ ಅಭಿಮಾನಿಗಳಾದ ರವಿ, ಮಧು, ಶೇಖರ, ಮನು ಗ್ರಾಮದ ಮುಖಂಡ ಮಂಜಣ್ಣ, ಅಂಗನವಾಡಿ ಶಿಕ್ಷಕಿ ಪ್ರಮೀಳ, ಶಿಕ್ಷಕಿ ಸುಶ್ಮ ಸೇರಿದಂತೆ ಶಾಲಾ ಮಕ್ಕಳು ಹಾಜರಿದ್ದರು.