ಪ್ರತಿಭೆ ಅನಾವರಣಕ್ಕೆ ಪ್ರತಿಭ ಕಾರಂಜಿ ವೇದಿಕೆ: ಶಾಸಕ ಜಿಎಸ್ಪಿ

| Published : Dec 10 2023, 01:30 AM IST

ಪ್ರತಿಭೆ ಅನಾವರಣಕ್ಕೆ ಪ್ರತಿಭ ಕಾರಂಜಿ ವೇದಿಕೆ: ಶಾಸಕ ಜಿಎಸ್ಪಿ
Share this Article
  • FB
  • TW
  • Linkdin
  • Email

ಸಾರಾಂಶ

ರೋಣ ತಾಲೂಕಿನ ಇಟಗಿ ಗ್ರಾಮದ ಸರ್ಕಾರಿ ಆದರ್ಶ ಶಾಲೆಯಲ್ಲಿ ಜಿಪಂ, ತಾಪಂ ರೋಣ ಹಾಗೂ ಗ್ರಾಪಂ ಇಟಗಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯ ಅಧಿಕಾರಿಗಳ ಕಾರ್ಯಾಲಯ ಸಂಯುಕ್ತ ಆಶ್ರಯದಲ್ಲಿ 2023-24ನೇ ಸಾಲಿನ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟನೆ ಮತ್ತು ಐ.ಎಸ್. ಮಾದರ ಅವರ ಜೀವದ್ಯುತಿ ವಿಜ್ಞಾನ ನಾಟಕಗಳು ಪುಸ್ತಕ ಬಿಡುಗಡೆ ಸಮಾರಂಭ ನಡೆಯಿತು.

ರೋಣ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟನೆ

ರೋಣ; ವಿದ್ಯಾರ್ಥಿಗಳಲ್ಲಿ ಅಡಕವಾಗಿರುವ ಪ್ರತಿಭೆಯನ್ನು ಅನಾವರಣಗೊಳಿಸಲು ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿದ್ದು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದ ಆಶಯವನ್ನು ಯಶಸ್ವಿಗೊಳಿಸಲು ಶ್ರಮಿಸಲು ಮುಂದಾಗಿ, ಈ ಮೂಲಕ ಹೊಸ ಹೊಸ ಪ್ರತಿಭೆಗಳು ಹೊರಹೊಮ್ಮಬೇಕು ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.

ಅವರು ಶನಿವಾರ ತಾಲೂಕಿನ ಇಟಗಿ ಗ್ರಾಮದ ಸರ್ಕಾರಿ ಆದರ್ಶ ಶಾಲೆಯಲ್ಲಿ ಜಿಪಂ, ತಾಪಂ ರೋಣ ಹಾಗೂ ಗ್ರಾಪಂ ಇಟಗಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯ ಅಧಿಕಾರಿಗಳ ಕಾರ್ಯಾಲಯ ಇವರುಗಳ ಸಂಯುಕ್ತ ಆಶ್ರಯದಲ್ಲಿ 2023-24ನೇ ಸಾಲಿನ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟನೆ ಮತ್ತು ಐ.ಎಸ್. ಮಾದರ ಅವರ ಜೀವದ್ಯುತಿ ವಿಜ್ಞಾನ ನಾಟಕಗಳು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.

ಸರ್ಕಾರ ಶಾಲಾ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪ್ರತಿಭಾ ಕಾರಂಜಿ, ಮಕ್ಕಳ ಮೇಳ, ಕ್ರೀಡಾ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಹೀಗಾಗಿ ಮಕ್ಕಳು ತಮ್ಮಲ್ಲಿರುವ ಕಲೆ, ಜನಪದ ಹಾಗೂ ಸಾಹಿತ್ಯ ಪ್ರಕಾರದ ಪ್ರತಿಭೆಯನ್ನು ವೇದಿಕೆಯಲ್ಲಿ ಅನಾವರಣಗೊಳಿಸಲು ಉತ್ಸಾಹದಿಂದ ಪಾಲ್ಗೊಂಡಿರುವುದು ಖುಷಿ ತಂದಿದೆ. ವಿದ್ಯಾರ್ಥಿಗಳಲ್ಲಿ ಆಸಕ್ತಿ ಗುರುತಿಸಿ ಅವರಲ್ಲಿ ಹುದುಗಿರುವ ಪ್ರತಿಭೆಯನ್ನು ಹೊರ ತರಲು ಶಿಕ್ಷಕರ ಪಾತ್ರವು ಸಹ ಮಹತ್ವದ್ದು ಎಂದರು.ತಾಪಂ ಮಾಜಿ ಸದಸ್ಯ ಪ್ರಭು ಮೇಟಿ ಮಾತನಾಡಿ, ಪ್ರತಿ ವಿದ್ಯಾರ್ಥಿಯಲ್ಲಿ ಒಂದಲ್ಲೊಂದು ಸಾಂಸ್ಕೃತಿಕಪ್ರತಿಭೆ ಅಡಗಿರುತ್ತದೆ. ಅದನ್ನು ಗುರುತಿಸಿ ಸೂಕ್ತ ತರಬೇತಿ ಮೂಲಕ ಮಕ್ಕಳು ಸರ್ವಾಂಗೀಣ ಬೆಳವಣಿಗೆ ಸಾಧಿಸಲು ಅವಕಾಶ ಕಲ್ಪಿಸಬೇಕು. ಸೋಲು, ಗೆಲುವು ಲೆಕ್ಕಿಸದೇ ಸ್ಪರ್ಧೆಗಳಲ್ಲಿ ಭಾಗವಹಿಸುವ ಮನೋಭಾವ ಅತೀ ಮುಖ್ಯವಾಗಿದೆ ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರಪ್ಪ ಹುರಳಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಬಸವರಾಜ ಅಂಗಡಿ, ಕ್ಷೇತ್ರ ಸಮನ್ವಯಧಿಕಾರಿ ಎಂ.ಎ.ಫಣಿಬಂಧ, ಗ್ರಾಪಂ ಅಧ್ಯಕ್ಷೆ ವಿಜಯಲಕ್ಷ್ಮೀ ಕೊಡಗಾನೂರ, ಉಪಾಧ್ಯಕ್ಷ ಪ್ರಶಾಂತ ಕೊಮಾರ, ಸದಸ್ಯರಾದ ಭೀಮವ್ವ ಕಂಬಳಿ, ಮಂಜುಳಾ ಶಮಿಕೇರಿ, ಮಹಾದೇವಿ ಜಡದೇಲಿ, ಭೀಮವ್ವ ತಳವಾರ, ರೇಣುಕಾ ಅವಾರಿ, ದ್ರಾಕ್ಷಾಯಿಣಿ ಗೋದಿಗನೂರ, ಎಂ.ಎಸ್. ದೇಸಾಯಿ, ದುರಗಪ್ಪ ಮಾದರ, ಬಸಯ್ಯ ಹಿರೇಮಠ, ನಾಗರಾಜ ಸಜ್ಜನರ, ಎಸ್‌ .ಡಿ.ಎಂ.ಸಿ ಅಧ್ಯಕ್ಷ ಹೇಮಂತಗೌಡ ಮಾಲಿಪಾಟೀಲ, ಸಂಗಪ್ಪ ಹುದ್ದಾರ, ವ್ಹಿ.ಬಿ. ಸೋಮನಕಟ್ಟಿಮಠ, ಬಸಪ್ಪ ಹಾದಿಮನಿ, ಶರಣಪ್ಪ ಹುದ್ದಾರ, ಬಾಬುಸಾಬ ಗಡಾದ, ಮಂಜಪ್ಪ ಎಸ್.ಆರ್,ಎ.ಕೆ. ಒಂಟಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.