ಸಾರಾಂಶ
ಕನ್ನಡ ಪ್ರಭ ವಾರ್ತೆ ಕೊಲ್ಹಾರ
ಮಕ್ಕಳಲ್ಲಿ ಅಡಗಿರುವ ಸೂಕ್ತ ಪ್ರತಿಭೆಗಳನ್ನು ಗುರ್ತಿಸಲು ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ ಬಹಳ ಅವಶ್ಯಕವಾಗಿದೆ ಎಂದು ಶ್ರೀ ಸಂಗಮೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಎಸ್.ಬಿ ಪತಂಗಿ ಹೇಳಿದರು.ಪಟ್ಟಣದಲ್ಲಿ ಗುರುವಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವಿಜಯಪುರ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯ ಅಧಿಕಾರಿಗಳ ಕಾರ್ಯಾಲಯ ಬಸವನ ಬಾಗೇವಾಡಿ, ಸಮೂಹ ಸಂಪನ್ಮೂಲ ಕೇಂದ್ರ ಕೊಲ್ಹಾರ ಹಾಗೂ ಶ್ರೀ ಸಂಗಮೇಶ್ವರ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಸಹಯೋಗದಲ್ಲಿ ಕೋಲ್ಹಾರ್ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡಿದರು.
ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಅಶೋಕ ಗಿಡ್ಡಪ್ಪಗೋಳ ಮಾತನಾಡಿ, ಮಕ್ಕಳ ಪ್ರತಿಭೆ ಗುರುತಿಸಲು ಪಾಲಕರ ಮತ್ತು ಶಿಕ್ಷಕರ ಜವಾಬ್ದಾರಿ ಬಹಳಷ್ಟಿದೆ. ನಿರ್ಣಾಯಕರು ಉತ್ತಮ ಪ್ರತಿಭೆ ಇರುವ ಮಕ್ಕಳನ್ನು ಗುರುತಿಸಿ ಮುಂದೆ ತಾಲೂಕು ಮಟ್ಟಕ್ಕೆ ಕಳುಹಿಸಬೇಕು ಎಂದರು. ಪ್ರಾಸ್ತಾವಿಕವಾಗಿ ಸಮೂಹ ಸಂಪನ್ಮೂಲ ವ್ಯಕ್ತಿ ಸಂಗಮೇಶ ಜಂಗಮ ಶೆಟ್ಟಿ ಮಾತನಾಡಿ, ಈ ಕಾರ್ಯಕ್ರಮ ಮಕ್ಕಳ ಬೌದ್ಧಿಕ ವಿಕಾಸಕ್ಕೆ ಪೂರಕವಾದ ವಾತಾವರಣ ನಿರ್ಮಾಣ ಮಾಡಲು ಈ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ ಬಹಳ ಮಹತ್ವದ್ದು ಎಂದು ಹೇಳಿದರು. ಈ ವೇಳೆ ಶಿಕ್ಷಣ ಸಂಯೋಜಕ ವಿ ಎಚ್ ಪುರೋಹಿತ ಮಾತನಾಡಿದರು.ಕಲೋತ್ಸವ ಕಾರ್ಯಕ್ರಮದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಂದ ಸುಮಾರು 350ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಂಠಪಾಠ, ಧಾರ್ಮಿಕ ಪಠಣ, ಕ್ಲೇ ಮಾಡಲಿಂಗ್, ಛದ್ಮವೇಷ, ಮಿಮಿಕ್ರಿ,ರಸಪ್ರಶ್ನೆ, ಜಾನಪದ ನೃತ್ಯ, ಆಶು ಭಾಷಣ ಹೀಗೆ ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಕಿತ್ತೂರು ಚೆನ್ನಮ್ಮಳ ವೇಷ ಧರಿಸಿ ಸಂಗಮೇಶ್ವರ ಪ್ರಾಥಮಿಕ ಶಾಲೆಯ ವಿಧ್ಯಾರ್ಥಿನಿ ಪ್ರಜ್ಞಾ ನೆಟೆಕಟ್ಟಿ ನೈಜ ಕುದುರೆ ಏರಿ ಬಂದು ಕಲೆ ಪ್ರದರ್ಶಿಸಿದ್ದು ವಿಶೇಷವಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಬಿ ಯು ಗಿಡ್ಡಪ್ಪಗೋಳ ವಹಿಸಿದ್ದರು .ಉಧ್ಘಾಟನೆಯನ್ನು ಪಟ್ಟಣ ಪಂಚಾಯತಿ ಅಧ್ಯಕ್ಷ ಹಾಗೂ ಸಂಸ್ಥೆಯ ನಿರ್ದೇಶಕ ಸಿ ಎಸ್ ಗಿಡ್ಡಪ್ಪಗೋಳ ನೆರವೇರಿಸಿದರು. ಅತಿಥಿಗಳಾಗಿ ಸಂಸ್ಥೆಯ ನಿರ್ದೇಶಕ ಟಿ ಟಿ ಹಗೇದಾಳ, ಶಿವಾನಂದ ಶೀಲವಂತ, ಶಿಕ್ಷಕರ ಸಂಘಟನೆಯ ಅಧ್ಯಕ್ಷರಾದ ಎಲ್ ಆರ್ ಕೆಲವಡಿ, ಟಿ ಪಿ ದಳವಾಯಿ, ಕೆ ಎಸ್ ಬಾಲಗೊಂಡ, ಕೃಷ್ಣಾ ರಜಪೂತ, ಎನ್ ಎ ಬನಸೋಡೆ, ಶೋಭಾ ಬಾಟಿ, ಶಿಕ್ಷಕರಾದ ಶ್ರೀಕಾಂತ ಪಾರಗೊಂಡ, ಗಂಗಾಧರ ಗುಡ್ಯಾಳ, ಜಗದೀಶ ಕಾಂಬಳೆ, ರಾಜಶೇಖರ ಉಮರಾಣಿ, ಯಲ್ಲಪ್ಪ ಶಿರೋಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಶಿಕ್ಷಕಿ ಸಿ ಎಚ್ ಗೌಡರ ಸ್ವಾಗತಿಸಿದರು. ಶಿಕ್ಷಕ ಜಿ ಪಿ ಕುಲಕರ್ಣಿ ನಿರೂಪಿಸಿದರು. ಶಿಕ್ಷಕ ಬಿ ಜೆ ಹಿಕ್ಕನಗುತ್ತಿ ವಂದಿಸಿದರು.ಚನ್ನಮ್ಮನ ವೇಷ ಧರಿಸಿ ಆಗಮಿಸಿದ ಪುಠಾಣಿ
ಪಟ್ಟಣದ ಶ್ರೀ ಸಂಗಮೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಕೊಲ್ಹಾರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಶಾಲೆಯ ವಿಧ್ಯಾರ್ಥಿನಿ ಪ್ರಜ್ಞಾ ನೆಟೆಕಟ್ಟಿ ಕಿತ್ತೂರು ರಾಣಿ ಚನ್ನಮ್ಮನವರ ಛದ್ಮವೇಷ ಧರಿಸಿ ನೈಜವಾಗಿ ಕುದುರೆ ಮೇಲೆ ಕುಳಿತು ಪ್ರತಿಭಾ ಕಾರಂಜಿ ಕಾರ್ಯಕ್ರಮಕ್ಕೆ ಆಗಮಿಸಿದ್ದು ವಿಶೇಷವಾಗಿತ್ತು.;Resize=(128,128))
;Resize=(128,128))
;Resize=(128,128))