ವಿಶ್ವಕರ್ಮರ ಕಲಾ ನೈಪುಣ್ಯಕ್ಕೆ ಶಿಲ್ಪಕಲೆಗಳೇ ಸಾಕ್ಷಿ

| Published : Sep 18 2025, 01:10 AM IST

ಸಾರಾಂಶ

ಮನುಷ್ಯನ ಪ್ರತಿಯೊಂದು ಕ್ಷೇತ್ರದಲ್ಲೂ ವಿಶ್ವಕರ್ಮ ಸಮುದಾಯದ ಕೊಡುಗೆಗಳಿವೆ

ಕನ್ನಡಪ್ರಭ ವಾರ್ತೆ ಪಿರಿಯಾಪಟ್ಟಣವಿಶ್ವಕರ್ಮ ನಿಲ್ಲದ ಸಮಾಜವನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ, ಮನುಷ್ಯನ ಪ್ರತಿಯೊಂದು ಕ್ಷೇತ್ರದಲ್ಲೂ ಸಹ ವಿಶ್ವಕರ್ಮ ಸಮುದಾಯದ ಕೊಡುಗೆಗಳನ್ನು ಕಾಣಬಹುದಾಗಿದೆ ಎಂದು ತಾಲೂಕು ವಿಶ್ವಕರ್ಮ ಸಮುದಾಯದ ಅಧ್ಯಕ್ಷ ಮಹೇಶ್ ಆಚಾರ್ಯ ಹೇಳಿದರು.ಪಟ್ಟಣದ ತಾಲೂಕು ಆಡಳಿತದ ಭವನದಲ್ಲಿ ಆಯೋಜಿಸಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಮನುಷ್ಯನ ಪ್ರತಿಯೊಂದು ಕ್ಷೇತ್ರದಲ್ಲೂ ವಿಶ್ವಕರ್ಮ ಸಮುದಾಯದ ಕೊಡುಗೆಗಳಿವೆ ಶಿಲ್ಪಕಲೆಯಲ್ಲಿ ಪ್ರಸಿದ್ಧವಾಗಿರುವ ಎಲ್ಲೋರಾ, ಅಜಂತಾ, ಬೇಲೂರು, ಹಳೇಬೀಡು ಸೇರಿದಂತೆ ವಿಶ್ವದಾದ್ಯಂತ ವಿಶ್ವಕರ್ಮರ ಕಲಾ ನೈಪುಣ್ಯವನ್ನು ಕಾಣಬಹುದಾಗಿದೆ ಎಂದರು.ಲೋಕಪಾಲಯ್ಯ ಮಾತನಾಡಿ, ಹಿಂದೂ ಪುರಾಣಗಳಲ್ಲಿ ವಿಶ್ವಕರ್ಮನನ್ನು ಬ್ರಹ್ಮಾಂಡದ ಆಕಾಶವಾಸಿರ್ಪಿ ಎಂದು ಪೂಜಿಸಲಾಗುತ್ತದೆ, ಶಿವನ ತ್ರಿಶೂಲ ವಿಷ್ಣುವಿನ ಸುದರ್ಶನ ಚಕ್ರ, ರಾಜ ರಾವಣನ ಪುಷ್ಪಕ ವಿಮಾನ ಮತ್ತು ಇಂದ್ರನ ವಜ್ರ ಸೇರಿದಂತೆ ದೇವತೆಗಳಿಗೆ ವಿವಿಧ ಆಯುಧಗಳನ್ನು ರಚಿಸಲು ಮತ್ತು ನಿರ್ಮಿಸಲು ವಿಶ್ವಕರ್ಮರು ಪ್ರಸಿದ್ಧರಾಗಿದ್ದರು. ಭಗವಾನ್ ಕೃಷ್ಣನ ರಾಜ್ಯವಾದ ದ್ವಾರಕಾ ಮತ್ತು ಪಾಂಡವರಿಗಾಗಿ ಭವ್ಯವಾದ ಮಾಯ ಭವನವನ್ನು ನಿರ್ಮಿಸಿದ ಕೀರ್ತಿಯು ವಿಶ್ವಕರ್ಮಗೆ ಸಲ್ಲುತ್ತದೆ ಎಂದು ತಿಳಿಸಿದರು. ತಾಲೂಕು ಇಒ ಸುನಿಲ್ ಕುಮಾರ್ ಮಾತನಾಡಿದರು. ಪಶು ವೈದ್ಯಾಧಿಕಾರಿ ಸೋಮಯ್ಯ, ಸಮಾಜ ಕಲ್ಯಾಣ ಅಧಿಕಾರಿ ಚಂದ್ರಶೇಖರ್, ಶಿರಸ್ತೇದಾರ್ ಶಕೀಲಬಾನು, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕುಸುಮ, ಪುರಸಭೆ ಮುಖ್ಯಾಧಿಕಾರಿ ಮಧು, ಸಂಘದ ಗೌರವಾಧ್ಯಕ್ಷ ಅಣ್ಣಯ್ಯಚಾರ್, ಉಪಾಧ್ಯಕ್ಷ ತಿರುನೀಲಕಂಠ, ಪ್ರಧಾನ ಕಾರ್ಯದರ್ಶಿ ಜಗದೀಶ್, ಖಜಾಂಚಿ ಯೋಗೇಶ್, ತಾಲೂಕು ವಿಶ್ವಕರ್ಮ ಮಹಿಳಾ ಸಂಘದ ಅಧ್ಯಕ್ಷೆ ಭಾಗ್ಯ ಮಹದೇವ್, ಪುರಸಭೆ ಸದಸ್ಯ ರವಿ, ತಾಲೂಕು ಮಟ್ಟದ ಅಧಿಕಾರಿಗಳು, ತಾಲೂಕು ಆಡಳಿತ ಕಚೇರಿಯ ಸಿಬ್ಬಂದಿ, ಸಮುದಾಯದ ಮುಖಂಡರು ಇದ್ದರು.