ಶೃಂಗೇರಿಯಲ್ಲಿ ತಾಲೂಕು ಮಟ್ಟದ ವಿಪ್ರ ಮಹಿಳಾ ಸಮಾವೇಶ: ಕವನ ಶಾಮಸುಂದರ್

| Published : Mar 18 2025, 12:34 AM IST

ಶೃಂಗೇರಿಯಲ್ಲಿ ತಾಲೂಕು ಮಟ್ಟದ ವಿಪ್ರ ಮಹಿಳಾ ಸಮಾವೇಶ: ಕವನ ಶಾಮಸುಂದರ್
Share this Article
  • FB
  • TW
  • Linkdin
  • Email

ಸಾರಾಂಶ

ಶೃಂಗೇರಿ,ತಾಲೂಕು ಬ್ರಾಹ್ಮಣ ಮಹಾಸಭಾ ಹಾಗೂ ತಾಲೂಕು ಬ್ರಾಹ್ಮಣ ಮಹಿಳಾ ಘಟಕ ಸಹಯೋಗದೊಂದಿಗೆ ಮಾ. 22 ಹಾಗೂ 23 ರಂದು ಶೃಂಗೇರಿಯಲ್ಲಿ ತಾಲೂಕು ಮಟ್ಟದ ವಿಪ್ರ ಮಹಿಳಾ ಸಮಾವೇಶ ಹಾಗೂ ಲಕ್ಷ ಗಾಯಿತ್ರಿ ಹೋಮ ನಡೆಯಲಿದೆ ಎಂದು ಶೃಂಗೇರಿ ತಾಲೂಕು ಬ್ರಾಹ್ಮಣ ಮಹಿಳಾ ಘಟಕದ ಅಧ್ಯಕ್ಷೆ ಕವನ ಶಾಮಸುಂದರ್ ಹೇಳಿದರು

ಕನ್ನಡಪ್ರಭ ವಾರ್ತೆ, ಶೃಂಗೇರಿ

ತಾಲೂಕು ಬ್ರಾಹ್ಮಣ ಮಹಾಸಭಾ ಹಾಗೂ ತಾಲೂಕು ಬ್ರಾಹ್ಮಣ ಮಹಿಳಾ ಘಟಕ ಸಹಯೋಗದೊಂದಿಗೆ ಮಾ. 22 ಹಾಗೂ 23 ರಂದು ಶೃಂಗೇರಿಯಲ್ಲಿ ತಾಲೂಕು ಮಟ್ಟದ ವಿಪ್ರ ಮಹಿಳಾ ಸಮಾವೇಶ ಹಾಗೂ ಲಕ್ಷ ಗಾಯಿತ್ರಿ ಹೋಮ ನಡೆಯಲಿದೆ ಎಂದು ಶೃಂಗೇರಿ ತಾಲೂಕು ಬ್ರಾಹ್ಮಣ ಮಹಿಳಾ ಘಟಕದ ಅಧ್ಯಕ್ಷೆ ಕವನ ಶಾಮಸುಂದರ್ ಹೇಳಿದರು.

ಪಟ್ಟಣದಲ್ಲಿ ತಾಲೂಕು ಬ್ರಾಹ್ಮಣ ಮಹಾಸಭಾ ಹಾಗೂ ತಾಲೂಕು ಬ್ರಾಹ್ಮಣ ಮಹಿಳಾ ಘಟಕ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾಹಿತಿ ನೀಡಿ, ಪಟ್ಟಣದ ರಾಜಾನಗರ ಶ್ರೀ ವಿದ್ಯಾಭಾರತೀ ಭವನದಲ್ಲಿ ಮಾ. 22 ರ ಶನಿವಾರ ಬೆಳಿಗ್ಗೆ 9.30ಕ್ಕೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಜಿಲ್ಲಾ ಸಂಚಾಲಕಿ ಶಾಂತಕುಮಾರಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕವನ ಶಾಮಸುಂದರ್ ಅಧ್ಯಕ್ಷತೆ ವಹಿಸುವರು. ಬೆಳಿಗ್ಗೆ 12ಕ್ಕೆ ಮೊದಲ ಗೋಷ್ಠಿಯಲ್ಲಿ ಮಹಿಳೆ ಮತ್ತು ಧಾರ್ಮಿಕ ಆಚರಣೆ ಕುರಿತು ಆಶ್ರಿತಾ ಸುಜಿತ್ ರಾವ್, ಮಹಿಳೆ ಮತ್ತು ಆರೋಗ್ಯ ಕುರಿತು ಡಾ.ಲಲಿತಾ ಭಾಸ್ಕರ್ ಉಪನ್ಯಾಸ ನೀಡಲಿದ್ದಾರೆ. ಮಧ್ಯಾಹ್ನ 2.30 ರಿಂದ 2ನೇ ಗೋಷ್ಠಿಯಲ್ಲಿ ಮಹಿಳೆ ಮತ್ತು ಉದ್ಯೋಗ ಎಂಬ ವಿಷಯವಾಗಿ ಡಾ.ಅರುಣಾ, ಮಹಿಳೆ ಮತ್ತು ಕೌಟುಂಬಿಕ ಸವಾಲುಗಳು ಕುರಿತು ರಾಜೇಶ್ವರಿ ಉಪನ್ಯಾಸ ನೀಡಲಿದ್ದಾರೆ. ಸಂಜೆ 4ರ ಸಮಾರಂಭದಲ್ಲಿ ಸಾಹಿತಿ ಭಾಗ್ಯ ನಂಜುಂಡ ಸ್ವಾಮಿ ಸಮಾರೋಪ ಭಾಷಣ ಮಾಡಲಿದ್ದಾರೆ. ನಂತರ ಬಹುಮಾನ ವಿತರಣೆ, ಮಾ. 23 ರ ಬೆಳಿಗ್ಗೆ ಲಕ್ಷ ಗಾಯಿತ್ರಿ ಹೋಮದ ಪೂರ್ಣಾಹುತಿ ನಡೆಯಲಿದೆ. ಶೃಂಗೇರಿ ಕೊಪ್ಪ ಎನ್ ಆರ್ ಪುರ ತಾಲೂಕು ಬ್ರಾಹ್ಮಣ ಮಹಾಸಭಾಗಳ ಪರವಾಗಿ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ.

ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರುಗಳ ಆಪ್ತಸಹಾಯಕ ಶಂ.ನ.ಕೃಷ್ಣಮೂರ್ತಿಯವರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಎಂ.ಎಂ ಪ್ರಭಾಕರ ಕಾರಂತ್ ಅಭಿನಂದನಾ ಭಾಷಣ ಮಾಡಲಿದ್ದಾರೆ. ಸಮಾವೇಶದ ದಿನ ಕರಕುಶಲ ವಸ್ತುಗಳು ಹಾಗೂ ಮಲೆನಾಡಿನ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಇರುತ್ತದೆ. ಶೃಂಗೇರಿ ಸ್ಥಳೀಯ ಮಹಿಳೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು. ಸಭೆಯಲ್ಲಿ ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಜಿ.ಎಂ. ಸತೀಶ್, ಕಾರ್ಯದರ್ಶಿ ಬಿ.ಎಲ್.ರವಿಕುಮಾರ್, ಬೆಟ್ಟಗದ್ದೆ ಸುದೀಂದ್ರ, ಮಹಿಳಾ ಘಟಕದ ಸುಧಾ ನಟಶೇಖರ್, ನಾಗವೇಣಿ, ಕಲಾ ರಮೇಶ್, ಸುಮಂಗಲಿ ಆನಂದಸ್ವಾಮಿ ಮತ್ತಿತರರು ಇದ್ದರು.

17 ಶ್ರೀ ಚಿತ್ರ 3-

ಶೃಂಗೇರಿ ಪಟ್ಟಣದದಲ್ಲಿ ತಾಲೂಕು ಬ್ರಾಹ್ಮಣ ಮಹಿಳಾ ಘಟಕ ಹಾಗೂ ಬ್ರಾಹ್ಮಣ ಮಹಾಸಭಾ ಆಯೋಜಿಸಿದ್ದ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಕವನ ಶಾಮಸುಂದರ್ ಮಾತನಾಡಿದರು.