ಸಾರಾಂಶ
ನುಗ್ಗೇಹಳ್ಳಿಯಲ್ಲಿನ ದರ್ಶನ್ ಬಾಲಕಿಯರ ಪ್ರೌಢಶಾಲೆಯಲ್ಲಿ  ಚಿತ್ರಕಲಾ ಶಿಕ್ಷಕಿಯಾಗಿ ೧೮ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಮಕ್ಕಳನ್ನು ಚಿತ್ರಕಲೆ, ಛದ್ಮವೇಷ ಹಾಗೂ ಕರಕುಶಲ ಕಲೆಯಲ್ಲಿ ತರಬೇತುಗೊಳಿಸಿ ಹಲವಾರು ಸಂಘ-ಸಂಸ್ಥೆಗಳು ಹಾಗೂ ಸರ್ಕಾರಿ, ಸೇರಿದಂತೆ ಶೈಕ್ಷಣಿಕ ಕಾರ್ಯಾಗಾರ ಮತ್ತು ಚಿತ್ರಕಲಾ ಸ್ಪರ್ಧೆಗಳಲ್ಲಿ ಭಾಗವಹಿಸುವಂತೆ ಮಾಡಿ ತಾಲೂಕು, ಜಿಲ್ಲೆ ಹಾಗೂ ರಾಜ್ಯಮಟ್ಟದಲ್ಲಿ ಬಹುಮಾನಗಳು ಬರುವಲ್ಲಿ ಕಾರಣವಾಗಿದ್ದಾರೆ. ವಿದ್ಯಾರ್ಥಿಗಳು ಮತ್ತು ಪೋಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇದರೊಂದಿಗೆ ಶೋಭಾರವರು ಹಲವಾರು ಸಂಘಸಂಸ್ಥೆಗಳ ಕಾರ್ಯಚಟುವಟಿಕೆಗಳಲ್ಲಿ ಮತ್ತು ಚಿತ್ರಕಲಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದು ಶಿಕ್ಷಣ ಇಲಾಖೆಗೆ ಗೌರವ ತಂದಿದ್ದಾರೆ.
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಪಟ್ಟಣದ ಮಾಧ್ಯಮಿಕ ಶಾಲಾ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ನಡೆದ ೭೦ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ತಾಲೂಕಿನ ನುಗ್ಗೇಹಳ್ಳಿಯ ಚಿತ್ರಕಲಾ ಶಿಕ್ಷಕಿ ಶೋಭಾ ಪ್ರಭಾಕರ್‌ರವರ ೧೮ ವರ್ಷಗಳ ಸುರ್ದಿಘ ಸೇವೆಯನ್ನು ಪರಿಗಣಿಸಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.ತಾಲೂಕಿನ ನುಗ್ಗೇಹಳ್ಳಿಯಲ್ಲಿನ ದರ್ಶನ್ ಬಾಲಕಿಯರ ಪ್ರೌಢಶಾಲೆಯಲ್ಲಿ ಚಿತ್ರಕಲಾ ಶಿಕ್ಷಕಿಯಾಗಿ ೧೮ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಮಕ್ಕಳನ್ನು ಚಿತ್ರಕಲೆ, ಛದ್ಮವೇಷ ಹಾಗೂ ಕರಕುಶಲ ಕಲೆಯಲ್ಲಿ ತರಬೇತುಗೊಳಿಸಿ ಹಲವಾರು ಸಂಘ-ಸಂಸ್ಥೆಗಳು ಹಾಗೂ ಸರ್ಕಾರಿ, ಸೇರಿದಂತೆ ಶೈಕ್ಷಣಿಕ ಕಾರ್ಯಾಗಾರ ಮತ್ತು ಚಿತ್ರಕಲಾ ಸ್ಪರ್ಧೆಗಳಲ್ಲಿ ಭಾಗವಹಿಸುವಂತೆ ಮಾಡಿ ತಾಲೂಕು, ಜಿಲ್ಲೆ ಹಾಗೂ ರಾಜ್ಯಮಟ್ಟದಲ್ಲಿ ಬಹುಮಾನಗಳು ಬರುವಲ್ಲಿ ಕಾರಣವಾಗಿದ್ದಾರೆ. ವಿದ್ಯಾರ್ಥಿಗಳು ಮತ್ತು ಪೋಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇದರೊಂದಿಗೆ ಶೋಭಾರವರು ಹಲವಾರು ಸಂಘಸಂಸ್ಥೆಗಳ ಕಾರ್ಯಚಟುವಟಿಕೆಗಳಲ್ಲಿ ಮತ್ತು ಚಿತ್ರಕಲಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದು ಶಿಕ್ಷಣ ಇಲಾಖೆಗೆ ಗೌರವ ತಂದಿದ್ದಾರೆ. ಇವರ ಸಾಧನೆಯನ್ನು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯೂ ಪರಿಗಣಿಸಿ ೨೦೨೫ರ ಕನ್ನಡ ರಾಜ್ಯೋತ್ಸವದಂದು ಗೌರವಿಸಿ ಅಭಿನಂದಿಸಿದೆ.
ಶಾಸಕ ಸಿಎ.ನ್. ಬಾಲಕೃಷ್ಣ, ತಹಸೀಲ್ದಾರ್ ಶಂಕರಪ್ಪ ಸೇರಿ ಹಲವು ಗಣ್ಯರು ಸೇರಿ ಅಭಿನಂದಿಸಿದ್ದಾರೆ. ಅಭಿನಂದನೆಗೆ ಅರ್ಹರಾದ ಶೋಭಾ ಪ್ರಭಾಕರ್‌ರವರಿಗೆ ದರ್ಶಿನಿ ಪ್ರೌಢಶಾಲೆಯ ಅಧ್ಯಕ್ಷರು, ಕಾರ್ಯದರ್ಶಿಗಳು, ಮುಖ್ಯ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಶುಭಕೋರಿದ್ದಾರೆ.;Resize=(128,128))
;Resize=(128,128))