ಸಾರಾಂಶ
- ಸರ್ವಾಧ್ಯಕ್ಷರಾಗಿ ಹಿರಿಯ ಕನ್ನಡ ಪರಿಚಾರಕ ಕೆ.ಸಿದ್ದಲಿಂಗಪ್ಪ ಆಯ್ಕೆ: ಚನ್ನಗಿರಿ ಶಾಸಕ - - - ಕನ್ನಡಪ್ರಭ ವಾರ್ತೆ ಚನ್ನಗಿರಿ
ಚನ್ನಗಿರಿ ತಾಲೂಕುಮಟ್ಟದ 17ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಐತಿಹಾಸಿಕ ಪುಷ್ಕರಿಣಿ ನಾಡಿನ ಎಸ್.ಎಸ್.ಜೆ.ವಿ.ಪಿ ಕರ್ನಾಟಕ ಪಬ್ಲಿಕ್ ಶಾಲೆ ಆವರಣದಲ್ಲಿ ಜ.8ರಂದು ನಡೆಸಲು ಸೋಮವಾರ ಶಾಸಕ ಬಸವರಾಜ ವಿ. ಶಿವಗಂಗಾ ಅಧ್ಯಕ್ಷತೆ ಪೂರ್ವಭಾವಿ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು.ಸಮ್ಮೇಳನ ಸರ್ವಾಧ್ಯಕ್ಷರನ್ನಾಗಿ ಹಿರಿಯ ಕನ್ನಡ ಪರಿಚಾರಕ ಸಂತೆಬೆನ್ನೂರು ಕೆ.ಸಿದ್ದಲಿಂಗಪ್ಪ ಅವರನ್ನು ಆಯ್ಕೆ ಮಾಡಲಾಗಿದೆ. ಈ ಬಾರಿಯ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಅದ್ಧೂರಿಯಾಗಿ ನಡೆಯಲಿದೆ. ಆ ದಿನ ಬೆಳಗ್ಗೆ 9 ಗಂಟೆಯಿಂದ ಸಂತೆಬೆನ್ನೂರು ಪುಷ್ಕರಿಣಿಯಿಂದ ಅಲಂಕೃತಗೊಂಡ ಸಾರೋಟಿನಲ್ಲಿ ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಸಮ್ಮೇಳನ ಸರ್ವಾಧ್ಯಕ್ಷರನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ, ಸಮಾರಂಭ ನಡೆಯುವ ಸ್ಥಳಕ್ಕೆ ಕರೆತರಲಾಗುವುದು ಎಂದರು.
ಬೆಳಗ್ಗೆ 11 ಗಂಟೆಗೆ ಸಮ್ಮೇಳನದ ಉದ್ಘಾಟನೆ ನಡೆಯಲಿದೆ. ವಿಚಾರಗೋಷ್ಠಿ, ಕವಿಗೋಷ್ಠಿ, ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಕನ್ನಡ ಸಾಹಿತ್ಯ ಸಂಭ್ರಮವನ್ನು ತಾಲೂಕಿನಾದ್ಯಂತ ಹಬ್ಬದ ರೀತಿಯಲ್ಲಿ ಆಚರಣೆ ಮಾಡಲಾಗುವುದು. ಎಲ್ಲಾ ಜಾತಿ, ಧರ್ಮ, ಪಕ್ಷ-ಪಾರ್ಟಿಗಳೆಂಬ ಬೇದ ಭಾವಗಳಿಲ್ಲದೇ, ಎಲ್ಲರೂ ಒಗ್ಗಟ್ಟಿನಿಂದ ಸಮ್ಮೇಳ ಆಚರಿಸಬೇಕಾಗಿದೆ ಎಂದರು.ಈ ಹಿನ್ನೆಲೆ ಗ್ರಾಮದ ಎಲ್ಲ ಮುಖ್ಯ ರಸ್ತೆಗಳು ತಳಿರು, ತೋರಣಗಳಿಂದ ಸಿಂಗಾರಗೊಳಿಸಲಾಗುವುದು. ಪ್ರತಿಯೊಬ್ಬರಿಗೂ ಆಹ್ವಾನ ಪತ್ರಿಕೆಯನ್ನು ತಲುಪಿಸಬೇಕು. ಎಲ್ಲ ರಾಜಕೀಯ ಪಕ್ಷಗಳ ಮುಖಂಡರಿಗೆ ಆಹ್ವಾನಿಸಬೇಕು ಎಂದ ಅವರು, ದಾವಣಗೆರೆ ಜಿಲ್ಲೆಯಲ್ಲಿಯೇ ಈ ಸಾಹಿತ್ಯ ಸಮ್ಮೇಳನ ಇತಿಹಾಸ ಸೃಷ್ಠಿಸುವಂತೆ ಮಾಡಲು ಸಹಕರಿಸಬೇಕು ಎಂದರು.
ಸಭೆಯಲ್ಲಿ ಗ್ರಾಪಂ ಅಧ್ಯಕ್ಷೆ ರೇಣುಕಮ್ಮ, ಉಪಾಧ್ಯಕ್ಷೆ ಮೀನಾಕ್ಷಿ, ಸದಸ್ಯರಾದ ತಹಮತ್ ಉಲ್ಲಾ, ತಾಲೂಕು ಕಸಾಪ ಅಧ್ಯಕ್ಷ ಎಲ್.ಜಿ.ಮಧುಕುಮಾರ್, ಎಪಿಎಂಸಿ ಮಾಜಿ ಅಧ್ಯಕ್ಷ ಎಂ.ಸಿದ್ದಪ್ಪ, ವರ್ತಕರ ಸಂಘದ ಅಧ್ಯಕ್ಷ ಸಿರಾಜ್ ಅಹಮದ್, ಜಿಲ್ಲಾ ಕಸಾಪ ಸಹ ಕಾರ್ಯದರ್ಶಿ ಕೆ.ಎಸ್. ವೀರೇಶ್ ಪ್ರಸಾದ್, ಕೃಷ್ಣಮೂರ್ತಿ, ಕೆ.ಬಸವರಾಜ್, ರುದ್ರಪ್ಪ, ಸಂತೋಷ್, ಬ್ಯಾಟಪ್ಪ, ನಯಾಜ್, ಎಂ.ಬಿ. ನಾಗರಾಜ್, ಮಾರುತಿ, ಪಿ.ರುದ್ರಪ್ಪ, ಸ್ವಾಮಿ, ಸುರೇಶ್ ಎಸ್.ಜೆ.ಕಿರಣ್, ಕೆ.ಪಿ.ಗಿರೀಶ್, ಮಂಜು ಮೊದಲಾದವರು ಹಾಜರಿದ್ದರು.- - - -23ಕೆಸಿಎನ್‌ಜಿ5.ಜೆಪಿಜಿ:
ಚನ್ನಗಿರಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆ ಶಾಸಕ ಬಸವರಾಜ ವಿ. ಶಿವಗಂಗಾ ಅಧ್ಯಕ್ಷತೆಯಲ್ಲಿ ನಡೆಯಿತು.