ಸಾರಾಂಶ
ಬೇಲೂರು ಪಟ್ಟಣದ ಐತಿಹಾಸಿಕ ಪ್ರಸಿದ್ಧ ಶ್ರೀ ಚನ್ನಕೇಶವ ದೇವಾಲಯಕ್ಕೆ ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಸೋಮವಾರ ಮಧ್ಯಾಹ್ನ ಭೇಟಿ ನೀಡಿದರು.
ಬೇಲೂರು: ಪಟ್ಟಣದ ಐತಿಹಾಸಿಕ ಪ್ರಸಿದ್ಧ ಶ್ರೀ ಚನ್ನಕೇಶವ ದೇವಾಲಯಕ್ಕೆ ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಸೋಮವಾರ ಮಧ್ಯಾಹ್ನ ಭೇಟಿ ನೀಡಿದರು.
ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಡಾ ನಾರಾಯಣಸ್ವಾಮಿ ಹಾಗೂ ಇಒ ಉಮೇಶ್ ರಾಜ್ಯಪಾಲರನ್ನು ಹೂಗುಚ್ಛ ನೀಡಿ ಸ್ವಾಗತಿಸಿದರು. ದೇಗುಲದ ಅರ್ಚಕರು ಪೂರ್ಣಕುಂಭದೊಂದಿಗೆ ಅವರನ್ನು ದೇಗುಲದ ಒಳಗಡೆ ಬರಮಾಡಿಕೊಂಡರು.ನಂತರ ಆರ್.ಎನ್.ರವಿಯವರು ಚನ್ನಕೇಶವ ಸ್ವಾಮಿಯ ದರ್ಶನ ಪಡೆದು ದೇಗುಲದ ಶಿಲ್ಪ ಕಲೆಯನ್ನು ವೀಕ್ಷಿಸಿದರು.
ರಾಜ್ಯಪಾಲರು ದೇಗುಲಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ದೇಗುಲಕ್ಕೆ ಬರುವ ಪ್ರವಾಸಿಗರಿಗೆ ಹಾಗೂ ಭಕ್ತರಿಗೆ ಮದ್ಯಾಹ್ನ ಸುಮಾರು ೨ ರಿಂದ ನಾಲ್ಕರ ತನಕ ಎರಡು ಗಂಟೆಗಳ ಕಾಲ ಪ್ರವೇಶ ನಿಷೇಧಿಸಲಾಗಿತ್ತು.ಹೊಯ್ಸಳೇಶ್ವರ ದೇವಾಲಯಕ್ಕೆ ಭೇಟಿದೇವಾಲಯ ನೋಡಿ ಚಕಿತರಾದ ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ, ಕುಟುಂಬಹಳೇಬೀಡು: ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಹಾಗೂ ಕುಟುಂಬದವರು ಇಲ್ಲಿನ ಶ್ರೀ ಹೊಯ್ಸಳೇಶ್ವರ ದೇವಾಲಯಕ್ಕೆ ಸೋಮವಾರ ಭೇಟಿ ನೀಡಿತು. ಈ ವೇಳೆ ದೇವಾಲಯದ ಮೆರಗನ್ನು ನೋಡಿ ಆಶ್ಚರ್ಯಪಟ್ಟರು.
ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸೇರಿದ ಹಳೇಬೀಡಿಗೆ ತಮಿಳುನಾಡು ರಾಜ್ಯಪಾಲ ಭೇಟಿ ನೀಡಿ ದೇವಾಲಯದ ವಿಗ್ರಹಗಳ ಅದ್ಭುತವನ್ನು ನೋಡಿ ಸಂತಸ ವ್ಯಕ್ತಪಡಿಸಿದರು. ಮಾರ್ಗದರ್ಶಿ ಕೃಷ್ಣೇಗೌಡ ಆಂಗ್ಲಬಾಷೆಯಲ್ಲಿ ‘ಹಳೇಬೀಡನ್ನು ಹೊರ ನೋಡು, ಬೇಲೂರು ಒಳ ನೋಡು’ ಎಂಬ ಗಾದೆ ಮಾತಿನಂತೆ ಹಳೇಬೀಡು ಸೌಂದರ್ಯದ ಸ್ಥಳಕ್ಕೆ ಹೆಸರುವಾಸಿಯಾಗಿದೆ. ಇಲ್ಲಿನ ಮಹಾರಾಜ ವಿಷ್ಣುವರ್ಧನ ಮತ್ತು ಶಾಂತಲೆ ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೆಚ್ಚು ಮಹತ್ವವನ್ನು ನೀಡಿದ ಪ್ರತೀಕವಾಗಿ ಹಳೇಬೀಡು ದೇವಾಲಯದಲ್ಲಿ ವಿವಿಧ ಭಂಗಿಯಿಲ್ಲಿ ನಾಟ್ಯಗಳನ್ನು ಬಿಡಿಸಲಾಗಿದೆ. ನಾಟ್ಯರಾಣಿ ಶಾಂತಲೆ ಹೊಯ್ಸಳರ ಮಹಾರಾಣಿಯಾಗಿ ಭರತನಾಟ್ಯ ಪ್ರವೀಣೆಯಾಗಿದ್ದರು ಎಂದು ದೇವಾಲಯದ ಮುಂಭಾಗದ ವೇದಿಕೆ ಬಗ್ಗೆ ವಿವರಣೆ ನೀಡಿದರು. ಆರ್.ಎನ್.ರವಿಯವರು ಅದನ್ನು ವೀಕ್ಷಣೆ ಮಾಡಿ ಸಂತೋಷಪಟ್ಟರು.ರಾಮಾಯಣ, ಮಹಾಭಾರತದ ಅದ್ಭುತ ಕಥೆಗಳ ಕೆತ್ತನೆ ನೋಡಿ ಅದರ ಕಥೆಯನ್ನು ಕೇಳಿ ಆನಂದಪಟ್ಟರು. ಸಾವಿರದ ಇನ್ನೂರು ವರ್ಷಗಳ ದೇವಾಲಯ ವ್ಯವಸ್ಥೆಯ ಬಗ್ಗೆ, ಕೇಂದ್ರ ಪುರಾತತ್ವ ಇಲಾಖೆ ಬಗ್ಗೆ ಅಭಿನಂದಿಸಿ ಪ್ರಶಂಸೆ ವ್ಯಕ್ತಪಡಿಸಿದರು.
ಇಲಾಖೆಯ ಅಧಿಕಾರಿಗಳಾದ ಡಾ.ಶ್ರೀಗುರುಬಾಗಿ, ಗೌತಮ್, ತಾಲೂಕು ಇಲಾಖೆಯ ಅಧಿಕಾರಿ ಅಶೋಕ್, ಹಳೆಬೀಡು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿರುಪಾಕ್ಷ, ಪೊಲೀಸ್ ಇಲಾಖೆ ವೃತ್ತ ನಿರೀಕ್ಷಕ ಜಯರಾಮ್, ಪಿಎಸ್‌ಐ ಸಿದ್ದಲಿಂಗ ಬಾನಸರೆ ಹಾಗೂ ಎಲ್ಲಾ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.;Resize=(128,128))
;Resize=(128,128))
;Resize=(128,128))