ಬೋನಸಪೂರ ಗ್ರಾಮಕ್ಕೆ ತಾಪಂ ಇಒ ಶಂಕರ ರಾಠೋಡ ಭೇಟಿ: ಮೀನು ಮಾತ್ರ ಸತ್ತಿವೆ

| Published : Oct 19 2024, 01:30 AM IST / Updated: Oct 19 2024, 01:31 AM IST

ಬೋನಸಪೂರ ಗ್ರಾಮಕ್ಕೆ ತಾಪಂ ಇಒ ಶಂಕರ ರಾಠೋಡ ಭೇಟಿ: ಮೀನು ಮಾತ್ರ ಸತ್ತಿವೆ
Share this Article
  • FB
  • TW
  • Linkdin
  • Email

ಸಾರಾಂಶ

ಚಿಂಚೋಳಿ:ತಾಲೂಕಿನ ಕುಂಚಾವರಂ ಗಡಿಪ್ರದೇಶದ ಬೋನಸಪೂರ ಗ್ರಾಮದ ಕಪ್ಪುಬಣ್ಣದ ನೀರು ಹರಿಯುವುದನ್ನು ತಾಪಂ ಅಧಿಕಾರಿ ಶಂಕರ ರಾಠೋಡ,ಡಾ}ಬಾಲಾಜಿ ಪಾಟೀಲ,ಪಿಡಿಓ ರಾಮಕೃಷ್ಣ ಭೇಟಿ ನೀಡಿ ಪರಿಶೀಲಿಸಿದರು.

ಚಿಂಚೋಳಿ: ತಾಲೂಕಿನ ಬೋನಸಪೂರ ಗ್ರಾಮದ ಹಳ್ಳಕ್ಕೆ ಕಪ್ಪುಬಣ್ಣದ ನೀರು ಹರಿಯುವುದನ್ನುಪರಿಶೀಲಿಸುವುದಾಗ ಯಾವುದೇ ಕಾಡುಪ್ರಾಣಿಗಳು ನೀರು ಕುಡಿದು ಸತ್ತಿರುವುದಿಲ್ಲ ಆದರೆ ಮೀನುಗಳು ಸತ್ತಿವೆ ಎಂದು ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಶಂಕರ ರಾಠೋಡ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬೋನಸಪೂರ ಗ್ರಾಮದ ಹತ್ರಿರ ಹರಿಯುವ ನೀರು ತೆಲಂಗಾಣ ರಾಜ್ಯದ ಗಡಿಪ್ರದೇಶಕ್ಕೆ ಹೊಂದಿಕೊಂಡಿರುವ ಮಗದಂಪೂರ ಗ್ರಾಮದಿಂದ ನೀರು ಹರಿಯುತ್ತಿವೆ. ಮೇಲ್ಭಾಗದಲ್ಲಿ ಸದಾಶಿವಪೇಟ ನಗರ ಪ್ರದೇಶದಿಂದ ಕೆಮಿಕಲ್ ತುಂಬಿದ ಲಾರಿಯನ್ನು ಶುಚಿಗೊಳಿಸಿದ್ದಾರೆ ಎಂಬ ಮಾಹಿತಿಯನ್ನು ತಿಳಿದು ಬಂದಿದೆ. ಆದರೆ ನಮ್ಮ ಕುಂಚಾವರಂ ಗಡಿಪ್ರದೇಶದ ಬೋನಸಪೂರ, ಶಿವರೆಡ್ಡಿಪಳ್ಳಿ, ಶಿವರಾಮಪೂರ, ಪೋಚಾವರಂ ಸುತ್ತಲಿನ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಲಾಲಾಗಿದ್ದು, ಯಾವುದೇ ಕಾಡುಪ್ರಾಣಿಗಳು ಮೃತಪಟ್ಟಿಲ್ಲ ಕೇವಲ ಮೀನುಗಳು ಮಾತ್ರ ಮೃತಪಟ್ಟಿವೆ ಎಂದು ಹೇಳಿದರು.

ಬೋನಸಪೂರ ಗ್ರಾಮದ ಹತ್ತಿರ ಚೆಕ್ ಡ್ಯಾಮ ನಿರ್ಮಿಸಲಾಗಿದೆ ಅದರ ಹತ್ತಿರ ಯಾವುದೇ ದನಕರುಗಳು ನೀರು ಕುಡಿಯಲು ಬಿಡಬಾರದು ಮತ್ತು ಅದರ ಹತ್ತಿರ ಹೋಗದಂತೆ ಗ್ರಾಮಸ್ಥರಿಗೆ ಸೂಚನೆ ನೀಡಲಾಗಿದೆ. ಕಪ್ಪುಬಣ್ಣದ ಮಿಶ್ರಿತ ನೀರು ಬಳಕೆ ಮಾಡದಂತೆ ಡಂಗೂರ ಸಾರಿ ಎಚ್ಚರಿಕೆಯನ್ನು ನೀಡಲಾಗಿದೆ ಸ್ಥಳಕ್ಕೆ ಕುಂಚಾವರಂ ಸಮುದಾಯ ಅರೋಗ್ಯಾಧಿಕಾರಿ ಡಾ.ಬಾಲಾಜಿ ಪಾಟೀಲ, ಪಿಡಿಒ ರಾಮಕೃಷ್ಣ ಕೊಡಂಪಳ್ಳಿ, ಕುಂಚಾವರಂ ವನ್ಯಜೀವಿಧಾಮ ಅರಣ್ಯಾಧಿಕಾರಿಗಳು ಇದ್ದರು ಎಂದು ಹೇಳಿದರು.