ಸಾರಾಂಶ
ಪುರಸಭೆ ಮಾಜಿ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ಮಾತನಾಡಿ, ಕಳೆದ ವಾರ ನಡೆದ ಕೋಲಾರ ಸಹಕಾರಿ ಯೂನಿಯನ್ ಚುನಾವಣೆಯಲ್ಲಿ ಕ್ಷೇತ್ರದಿಂದ ಇಬ್ಬರು ಎನ್‌ಡಿಎ ಅಭ್ಯರ್ಥಿಗಳು ಗೆದ್ದಿರುವುದಕ್ಕೆ ಬೀಗುತ್ತಿರುವ ಮೈತ್ರಿ ಅಭ್ಯರ್ಥಿಗಳು, ಅದೇ ತಂತ್ರದಿಂದ ಟಿಎಪಿಸಿಎಂಎಸ್ ಚುನಾವಣೆಯಲ್ಲಿಯೂ ಬಳಸಿ ಗೆಲ್ಲಬಹುದೆಂಬ ಕನಸು ಕಾಣುತ್ತಿದ್ದಾರೆ. ಆದರೆ ಅವರ ಕನಸು ಅ.೧೨ರಂದು ನುಚ್ಚು ನೂರಾಗುವುದರಲ್ಲಿ ಅನುಮಾನವಿಲ್ಲ ಎಂದರು.
ಬಂಗಾರಪೇಟೆ: ಇಲ್ಲಿನ ಟಿಎಪಿಸಿಎಂಎಸ್ ಆಡಳಿತ ಮಂಡಳಿಗೆ ಅ. ೧೨ರಂದು ಚುನಾವಣೆ ನಡೆಯುವ ಹಿನ್ನೆಲೆ ನಾಮಪತ್ರಗಳ ಸಲ್ಲಿಕೆಗೆ ಕೊನೆ ದಿನವಾದ ಭಾನುವಾರ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಸಾಮೂಹಿಕವಾಗಿ ಬಂದು ತಮ್ಮ ಉಮೇದುವಾರಿಕೆ ಸಲ್ಲಿಸಿ ಒಗ್ಗಟ್ಟು ಪ್ರದರ್ಶಿಸಿದರು.
ಬಿ ವರ್ಗದ ೮ ಸ್ಥಾನಗಳಿಗೆ ಮತ್ತು ಎ ವರ್ಗದ ೪ ಸ್ಥಾನಗಳಿಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಮಾಜಿ ಶಾಸಕ ಎಂ.ನಾರಾಯಣಸ್ವಾಮಿ, ಟಿಎಪಿಸಿಎಂಎಸ್ ಆಡಳಿತ ಮಂಡಳಿ ಚುನಾವಣೆಯಲ್ಲಿ ಎಲ್ಲಾ ೧೨ ಸ್ಥಾನಗಳನ್ನು ಕಾಂಗ್ರೆಸ್ ಬೆಂಬಲಿತರು ಗೆಲ್ಲುವ ಮೂಲಕ ದಾಖಲೆ ಬರೆಯಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಉತ್ತಮವಾಗಿ ಆಡಳಿತ ನೀಡುತ್ತಿರುವುದರಿಂದ ಕ್ಷೇತ್ರದ ಷೇರುದಾರರು ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಕಾಂಗ್ರೆಸ್ ಕೈ ಬಲಪಡಿಸಲು ಮುಂದಾಗಿದ್ದಾರೆ. ಕಷ್ಟಕಾಲದಲ್ಲಿ ಕಾಂಗ್ರೆಸ್ ಸರ್ಕಾರ ೫ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಬಡವರ ಹಾಗೂ ಮಧ್ಯಮ ವರ್ಗದ ಜನರ ಬದುಕಿಗೆ ಆಶಾಕಿರಣವಾಗಿದೆ, ಇದರಿಂದ ಆಕರ್ಷಿತರಾಗಿರುವ ಜನರು ಸರ್ಕಾರದ ಋಣ ತೀರಿಸಲು ಕೈಗೆ ಬೆಂಬಲ ನೀಡಲು ಈಗಾಗಲೇ ನಿರ್ಧರಿಸಿರುವುದರಿಂದ ನಮ್ಮ ಪಕ್ಷದ ಎಲ್ಲಾ ೧೨ ಅಭ್ಯರ್ಥಿಗಳು ಗೆದ್ದು ಮತ್ತೆ ಅಧಿಪತ್ಯ ಸಾಧಿಸುವುದು ಖಚಿತವೆಂದು ವಿಶ್ವಾಸ ವ್ಯಕ್ತಪಡಿಸಿದರು.ಪುರಸಭೆ ಮಾಜಿ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ಮಾತನಾಡಿ, ಕಳೆದ ವಾರ ನಡೆದ ಕೋಲಾರ ಸಹಕಾರಿ ಯೂನಿಯನ್ ಚುನಾವಣೆಯಲ್ಲಿ ಕ್ಷೇತ್ರದಿಂದ ಇಬ್ಬರು ಎನ್‌ಡಿಎ ಅಭ್ಯರ್ಥಿಗಳು ಗೆದ್ದಿರುವುದಕ್ಕೆ ಬೀಗುತ್ತಿರುವ ಮೈತ್ರಿ ಅಭ್ಯರ್ಥಿಗಳು, ಅದೇ ತಂತ್ರದಿಂದ ಟಿಎಪಿಸಿಎಂಎಸ್ ಚುನಾವಣೆಯಲ್ಲಿಯೂ ಬಳಸಿ ಗೆಲ್ಲಬಹುದೆಂಬ ಕನಸು ಕಾಣುತ್ತಿದ್ದಾರೆ. ಆದರೆ ಅವರ ಕನಸು ಅ.೧೨ರಂದು ನುಚ್ಚು ನೂರಾಗುವುದರಲ್ಲಿ ಅನುಮಾನವಿಲ್ಲ ಎಂದರು.
ಮುಖಂಡರಾದ ಮಹಾದೇವ್, ಅ.ನಾ.ಹರೀಶ್, ಮಾದಮಂಗಲ ಮುನಿರಾಜು, ಕೃಷ್ಣೇಗೌಡ, ಕುಂಬಾರಪಾಳ್ಯ ಮಂಜುನಾಥ್, ರಂಗಾಚಾರಿ, ಜುಂಜನಹಳ್ಳಿ ನಾರಾಯಣಸ್ವಾಮಿ, ವಕೀಲ ಆನಂದ್ ಇತರರು ಇದ್ದರು.