ಸಾರಾಂಶ
ಕನ್ನಡಪ್ರಭ ವಾರ್ತೆ ಹರಪನಹಳ್ಳಿ
ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘವು (ಟಿಎಪಿಸಿಎಂಎಸ್) 2024-25ನೇ ಸಾಲಿನಲ್ಲಿ 20.77ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಬಿ.ಕೆ. ಪ್ರಕಾಶ ತಿಳಿಸಿದ್ದಾರೆ.ಪಟ್ಟಣದಲ್ಲಿನ ಸಂಘದ ಸಭಾಂಗಣದಲ್ಲಿ ಸೋಮವಾರ ನಡೆದ ಸಂಘದ 95ನೇ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂಘವು ರಸಗೊಬ್ಬರ ಮತ್ತು ಪೆಟ್ರೋಲ್ ಬಂಕ್ ಉತ್ಪನ್ನ ಸೇರಿ ಒಟ್ಟು 12.48 ಕೋಟಿ ವ್ಯವಹಾರ ಮಾಡಿ, ₹15.58 ಲಕ್ಷ ವ್ಯಾಪಾರಿ ಲಾಭ ಗಳಿಸಿದೆ ಎಂದು ತಿಳಿಸಿದರು.ಸಂಘದಿಂದ ನಿಯಂತ್ರಿತ ಚಿಲ್ಲರೆ ಪಡಿತರ ವ್ಯವಹಾರವನ್ನು ಮಾಡಲಾಗಿದೆ. ಮುಂದೆ ಅನಿಯಂತ್ರಿತ ಆಹಾರ ಧಾನ್ಯ ಮತ್ತು ಸಗಟು ನಿಯಂತ್ರಿತ ಪಡಿತರ ಹಾಗೂ ಇತರೆ ವ್ಯವಹಾರವನ್ನು ಪ್ರಾರಂಭಿಸಲು ಪ್ರಯತ್ನಿಸಲಾಗಿದೆ. ರೈತರಿಗೆ ರಸಗೊಬ್ಬರ ಪೂರೈಕೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವ್ಯವಹರಿಸಬೇಕಾಗಿದ್ದು, ಈ ನಿಟ್ಟಿನಲ್ಲಿ ಸಂಘದ ಎಲ್ಲ ಸದಸ್ಯರು ರಸಗೊಬ್ಬರ ಖರೀದಿ ಮಾಡಬೇಕೆಂದು ಮನವಿ ಮಾಡಿದರು.
ಸಂಘದಲ್ಲಿ ರೈತರಿಗೆ ಮತ್ತು ಸದಸ್ಯರಿಗೆ ಹಾಗೂ ಗ್ರಾಹಕರ ಅನುಕೂಲಕ್ಕಾಗಿ ಸಿಎನ್‌ಜಿ ಗ್ಯಾಸ್ ಬಂಕ್‌ನ್ನು ಪ್ರಾರಂಭಿಸಲು ಈಗಾಗಲೇ ಇಲಾಖೆ ಅಧಿಕಾರಿಗಳಿಂದ ಆಡಳಿತಾತ್ಮಕ ಅನುಮತಿ ಪಡೆಯಲಾಗಿದೆ ಎಂದು ತಿಳಿಸಿದರು.ಸಂಘದ ಉಪಾಧ್ಯಕ್ಷ ಗಿಡ್ಡಳಿ ನಾಗರಾಜ ನಿರ್ದೇಶಕರಾದ ಎಲ್.ಬಿ. ಹಾಲೇಶನಾಯ್ಕ್, ಬಿ.ಕುಲಮಿ ಅಬ್ದುಲ್ಲಾ, ಎಚ್.ನೇತ್ರಾವತಿ ಪರಶುರಾಮ, ಪಿ.ಪ್ರೇಮಕುಮಾರ, ತಳವಾರ ಮಂಜಪ್ಪ, ಬಿ.ರೇವಣಸಿದ್ದಪ್ಪ ಎಂ.ವಿ. ಕೃಷ್ಣಕಾಂತ, ಕೆ.ವಿರುಪಾಕ್ಷಪ್ಪ, ತಿಮ್ಮನಾಯ್ಕ್, ಪ್ರಕಾಶಗೌಡ, ಮಂಜುಳಾಮೂರ್ತಿ, ವೀರುಪಾಕ್ಷಪ್ಪ, ನಾಮನಿರ್ದೇಶಿತ ಸದಸ್ಯ ಚಿಕ್ಕೇರಿ ಬಸಪ್ಪ, ಸಂಘದ ಕಾಯದರ್ಶಿ ಎಚ್.ತಿರುಪತಿ ಸೇರಿದಂತೆ ಸಂಘದ ಸರ್ವ ಸದಸ್ಯರು ಸಿಬ್ಬಂದಿ ಇದ್ದರು.