ರಾಮನಗರ: ರೇಷ್ಮೆನಗರಿ ರಾಮನಗರದಲ್ಲಿ ಇದೇ ಮೊದಲ ಬಾರಿಗೆ ಆಯೋಜನೆಗೊಂಡಿರುವ ಭಕ್ತಿ ವೈಭವದ ರಾಮೋತ್ಸವಕ್ಕೆ ರಂಗೋಲಿ, ಮೆಹೆಂದಿ ರಂಗಿನ ಜೊತೆಗೆ ಸ್ಯಾಂಡಲ್ ವುಡ್ ತಾರೆಯರ ಮೆರಗೂ ಸಿಗಲಿದೆ.

ರಾಮನಗರ: ರೇಷ್ಮೆನಗರಿ ರಾಮನಗರದಲ್ಲಿ ಇದೇ ಮೊದಲ ಬಾರಿಗೆ ಆಯೋಜನೆಗೊಂಡಿರುವ ಭಕ್ತಿ ವೈಭವದ ರಾಮೋತ್ಸವಕ್ಕೆ ರಂಗೋಲಿ, ಮೆಹೆಂದಿ ರಂಗಿನ ಜೊತೆಗೆ ಸ್ಯಾಂಡಲ್ ವುಡ್ ತಾರೆಯರ ಮೆರಗೂ ಸಿಗಲಿದೆ.

ಶ್ರೀ ಚಾಮುಂಡೇಶ್ವರಿ, ಗಣಪತಿ ಹಾಗೂ ಶ್ರೀರಾಮನ ಮಹಿಮೆ ಸಾರುವ ಕಥಾ ಹಂದರವುಳ್ಳ ಮಡಿಕೇರಿಯ ಸ್ತಬ್ಧಚಿತ್ರಗಳು ಮತ್ತು ಗ್ರಾಮ ದೇವತೆಗಳ ಮೆರವಣಿಗೆ ರಾಮನಗರದಲ್ಲಿ ಧಾರ್ಮಿಕ ವಾತಾವರಣ ಸೃಷ್ಟಿಸಲಿದೆ. ಇಷ್ಟೇ ಅಲ್ಲದೆ, ಜಿಲ್ಲಾ ಕ್ರೀಡಾಂಗಣದಲ್ಲಿ ಜ.17ರಂದು ಸಂಜೆ 5ರಿಂದ 7 ಗಂಟೆವರೆಗೆ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ನೆರವೇರಿಸಲಾಗುತ್ತಿದೆ.

ಜಿಲ್ಲಾ ಕ್ರೀಡಾಂಗಣದಲ್ಲಿ ರಾಮೋತ್ಸವ ಸಮಾರಂಭಕ್ಕೆ ಬೃಹತ್ ವೇದಿಕೆ ನಿರ್ಮಿಸಲಾಗುತ್ತಿದೆ. ಅದರ ಪಕ್ಕದಲ್ಲಿಯೇ ತಿರುಪತಿ ದೇವಾಲಯದ ಮಾದರಿಯಲ್ಲಿ ಚಿಕ್ಕ ವೇದಿಕೆ ನಿರ್ಮಿಸಲಾಗುತ್ತಿದೆ. ತಿಬ್ಬಾದೇವಿ ಟೆಂಟ್ ಹೌಸ್ ವೇದಿಕೆ ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡಿದೆ.

25-30 ಸಾವಿರ ಆಸನ ವ್ಯವಸ್ಥೆ:

ತಿರುಪತಿ ದೇವಾಲಯ ಪ್ರಧಾನ ಅರ್ಚಕರಿಂದಲೇ ಧಾರ್ಮಿಕ ಕಾರ್ಯಕ್ರಮ ಜರುಗಲಿದೆ. ಕಲ್ಯಾಣೋತ್ಸವದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪತ್ನಿ ಉಷಾ ದಂಪತಿ, ಕೃಷಿ ಸಚಿವ ಚಲುವರಾಯಸ್ವಾಮಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ, ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಮತ್ತಿತರರು ಭಾಗವಹಿಸುವರು.

ಸಾರ್ವಜನಿಕರಿಗೆ ಜಿಲ್ಲಾ ಕ್ರೀಡಾಂಗಣದಲ್ಲಿ 25ರಿಂದ 30 ಸಾವಿರ ಆಸನದ ವ್ಯವಸ್ಥೆ ಮಾಡಲಾಗುವುದು. ಶ್ರೀನಿವಾಸ ಕಲ್ಯಾಣೋತ್ಸವ ಎಲ್ಲರು ಕಣ್ತುಂಬಿಕೊಳ್ಳಲು ಕ್ರೀಡಾಂಗಣದ ಎರಡು ಬದಿಯಲ್ಲಿ ಬೃಹತ್ ಎಲ್ಇಡಿ ಪರದೆ ವ್ಯವಸ್ಥೆ ಮಾಡಲಾಗಿದೆ.

1 ಲಕ್ಷ ಕುಟುಂಬಗಳಿಗೆ ತಿರುಪತಿ ಲಡ್ಡು:

ಕಲ್ಯಾಣೋತ್ಸವದಲ್ಲಿ ಸಾರ್ವಜನಿಕರಿಗೆ ತಿರುಪತಿಯಿಂದ ತರಿಸಿರುವ ಲಡ್ಡು ಪ್ರಸಾದ, ಪುಳಿಯೋಗರೆ ಪ್ರಸಾದ ವಿತರಿಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಅಲ್ಲದೆ, ಜ.19ರಂದು ರಾಮನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 1 ಲಕ್ಷ ಕುಟುಂಬಗಳಿಗೆ ತಿರುಪತಿ ಲಡ್ಡುಗಳನ್ನು ಚಿಕ್ಕ ಬಾಕ್ಸ್‌ಗಳಲ್ಲಿ ತಲುಪಿಸುವ ಸಿದ್ಧತೆ ನಡೆದಿವೆ.

ಬಾಕ್ಸ್‌.............

ರಾಮೋತ್ಸವಕ್ಕೆ ರಂಗೋಲಿ ರಂಗು:

ಮಹಿಳೆಯರ ಸೃಜನಶೀಲತೆಗೆ ಸಾಕ್ಷಿಯಾಗಿರುವ ರಂಗೋಲಿ ಮನೆಗೆ ಶುದ್ಧತೆ, ಶುಭ ಮತ್ತು ಸಮೃದ್ಧಿಯನ್ನು ತರುತ್ತದೆ. ಇದನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಶಾಸಕ ಇಕ್ಬಾಲ್ ಹುಸೇನ್ ರಾಮೋತ್ಸವದಲ್ಲಿ ರಂಗೋಲಿ ಸ್ಪರ್ಧೆ ಆಯೋಜನೆಗೊಂಡಿದೆ.

ಈಗಾಗಲೇ ಜಿಲ್ಲಾ ಕೇಂದ್ರ ರಾಮನಗರ ಹೊರತು ಪಡಿಸಿ ರಾಮನಗರ ಕ್ಷೇತ್ರ ವ್ಯಾಪ್ತಿಯ ಕಸಬಾ, ಕೈಲಾಂಚ , ಹಾರೋಹಳ್ಳಿ ಹಾಗೂ ಮರಳವಾಡಿ ಹೋಬಳಿ ಗ್ರಾಮಗಳಲ್ಲಿ ರಂಗೋಲಿ ಸ್ಪರ್ಧೆಗಳು ಯಶಸ್ವಿಯಾಗಿ ನಡೆದಿದೆ.

ಕ್ಷೇತ್ರದಲ್ಲಿ ಅಂದಾಜು 80 ಸಾವಿರ ಕುಟುಂಬಗಳಿದ್ದು, ಇದರಲ್ಲಿ 48 ಸಾವಿರ ಕುಟುಂಬಗಳು ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಎಲ್ಲರ ಮನೆಗಳ ಮುಂದೆ ಬಣ್ಣ ಬಣ್ಣದ ರಂಗೋಲಿ ಬಿಡಿಸಿ ಉಡುಗೊರೆ ಪಡೆದುಕೊಂಡರು. ಅದರಲ್ಲೂ ಶ್ರೀರಾಮ, ಆಂಜನೇಯ, ಡಿಕೆ ಬ್ರದರ್ಸ್, ಗ್ಯಾರಂಟಿ ಯೋಜನೆಗಳನ್ನು ಬಿಂಬಿಸುವ ರಂಗೋಲಿಗಳು ಗಮನ ಸೆಳೆದವು.

ಇದೀಗ ಜ.16ರಂದು ರಾಮನಗರ ಟೌನಿನಲ್ಲಿ ಸುಮಾರು 12 ಸಾವಿರ ಕುಟುಂಬಗಳು ಮನೆಗಳ ಮುಂದೆ ರಂಗೋಲಿ ಬಿಡಿಸಿ, ರಂಗು ತುಂಬಲು ಸಜ್ಜಾಗಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪರ್ಧೆಗೆ ಚಾಲನೆ ನೀಡಲಿದ್ದಾರೆ.

ಬಾಕ್ಸ್‌.................

ಅಲ್ಪಸಂಖ್ಯಾತ ಮಹಿಳೆಯರಿಗಾಗಿ ಮೆಹಂದಿ ಸ್ಪರ್ಧೆ:

ಭಾರತೀಯ ಸಂಸ್ಕೃತಿಯಲ್ಲಿ ಮದುವೆ-ಹಬ್ಬಗಳ ಸಂದರ್ಭದಲ್ಲಿ ಮೆಹಂದಿ ಜನಪ್ರಿಯ. ವಿಭಿನ್ನ ವಿನ್ಯಾಸಗಳ ಮೆಹಂದಿಯು ಕೌಶಲ್ಯ ಮತ್ತು ಸೃಜನಶೀಲತೆಗೆ ಸಾಕ್ಷಿಯಾಗಿದೆ. ಹೀಗಾಗಿ ರಾಮೋತ್ಸವದಲ್ಲಿ ಅಲ್ಪಸಂಖ್ಯಾತ ಸಮುದಾಯದ ಮಹಿಳೆಯರು ಮತ್ತು ಮಕ್ಕಳಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಮೆಹಂದಿ ಸ್ಪರ್ಧೆ ಏರ್ಪಡಿಸಲಾಗಿದೆ.

ಜ.18ರಂದು 10 ಗಂಟೆಗೆ ಮೆಹಂದಿ ಸ್ಫರ್ಧೆಯನ್ನು ರಾಜ್ಯ ಮಹಿಳಾ ಆಯೋಗ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಉದ್ಘಾಟಿಸುವರು. ರಾಮನಗರ ಟೌನಿನ ಟಿಪ್ಪುನಗರದ ಯೂನಿವರ್ಸಲ್ ಶಾಲೆ, ಮೆಹಬೂಬ್‌ ನಗರದ ಮರಿಯಂ ಶಾಲೆ, ಐಜೂರು ಸರ್ಕಾರಿ ಉರ್ದು ಶಾಲೆ ಹಾಗೂ ಮೆಹಬೂಬ್‌ ನಗರದ ರಾಯಲ್ ಇಂಗ್ಲೀಷ್ ಶಾಲೆಯಲ್ಲಿ ಮೆಹಂದಿ ಸ್ಪರ್ಧೆ ನಡೆಯಲಿದೆ.

ವಿಜೇತರಿಗೆ ಬಹುಮಾನ, ಭಾಗವಹಿಸಿದ ಎಲ್ಲರಿಗೂ ನೆನಪಿನ ಕಾಣಿಕೆ ವಿತರಿಸಲಾಗುತ್ತದೆ.

ಬಾಕ್ಸ್‌............

ರಾಮೋತ್ಸವಕ್ಕೆ ಸಿನಿ ತಾರೆಯರ ಮೆರಗು:

ಜ.18ರಂದು ಸ್ಯಾಂಡಲ್ ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌, ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ, ಡಿಂಪಲ್ ಕ್ವೀನ್ ರಚಿತಾ ರಾಮ್ ಹಾಗೂ ರಾಗಿಣಿ ದ್ವಿವೇದಿ ರಾಮೋತ್ಸವಕ್ಕೆ ಆಗಮಿಸಲಿದ್ದಾರೆ. ಅಲ್ಲದೆ, ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮತ್ತು ತಂಡದಿಂದ ರಸಸಂಜೆ, ಅನುಶ್ರೀ ನಿರೂಪಣೆ ಮಾಡಲಿದ್ದಾರೆ.

ಹಿನ್ನೆಲೆ ಗಾಯಕರಾದ ಗಾಯತ್ರಿ ಐಶ್ವರ್ಯ ರಂಗರಾಜನ್, ಪೃಥ್ವಿಭಟ್, ನಿಶಾನ್ ರೈ, ಲಹರಿ ಮಹೇಶ್ , ಸುನೀಲ್ ಗುಜಗೊಂಡ ಮತ್ತಿತರರು ನಡೆಸಿಕೊಡುವರು.

ಕೋಟ್ ..............

ಸಾವಿರಾರು ಸಂಖ್ಯೆಯ ಭಕ್ತರಿಗೆ ತಿರುಮಲ ತಿರುಪತಿಯ ದರ್ಶನ ಮಾಡಿಸಲು ರಾಮನಗರದ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಆಯೋಜಿಸಲಾಗಿದೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೈವ ದರ್ಶನದೊಂದಿಗೆ ಪ್ರಸಾದ ಸ್ವೀಕರಿಸಬೇಕು. ಕಲ್ಯಾಣೋತ್ಸವ ಬಳಿಕ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು.

- ಇಕ್ಬಾಲ್ ಹುಸೇನ್, ಶಾಸಕರು, ರಾಮನಗರ ಕ್ಷೇತ್ರ

ಕೋಟ್ ..................

ಮೆಹಂದಿ ಸಂಭ್ರಮದ ಸಂಕೇತ. ಖುಷಿಯ ಆಚರಣೆಗಳಲ್ಲಿ ಮಹಿಳೆಯರು ಮೆಹಂದಿ ಹಚ್ಚಿ ಸಂಭ್ರಮಿಸುವರು. ಮಕ್ಕಳಿಂದ ಹಿರಿಯರು ಕೂಡ ಕೈಗೆ ಮೆಹಂದಿ ಹಚ್ಚಿ ಖುಷಿ ಇಮ್ಮಡಿಗೊಳಿಸುತ್ತಾರೆ. ವೃತ್ತಿಪರ ಮೆಹಂದಿ ಕಲಾವಿದರ ಸಂಖ್ಯೆ ಹೆಚ್ಚಿದ್ದು, ಅವರಲ್ಲಿರುವ ಕಲಾ ಪ್ರತಿಭೆ ಅನಾವರಣಕ್ಕೆ ಮೆಹಂದಿ ಸ್ಪರ್ಧೆಗೆ ರಾಮೋತ್ಸವದಲ್ಲಿ ವೇದಿಕೆ ಕಲ್ಪಿಸಲಾಗುತ್ತಿದೆ.

-ಆಯಿಷಾ ಬಾನು, ಸದಸ್ಯರು, ನಗರಸಭೆ, ರಾಮನಗರ

13ಕೆಆರ್ ಎಂಎನ್ 1,2,3,4,5,6,7.ಜೆಪಿಜಿ

1.ರಾಮೋತ್ಸವ ಲೋಗೋ

2.ಶ್ರೀನಿವಾಸ ಕಲ್ಯಾಣೋತ್ಸವ

3.ರಂಗೋಲಿ

4.ಮೆಹೆಂದಿ

5.ಸಿನಿ ತಾರೆಯರು

6.ಇಕ್ಬಾಲ್ ಹುಸೇನ್

7.ಆಯಿಷಾ ಬಾನು