ತರೀಕೆರೆ, ಅಜ್ಜಂಪುರ ತಾಲೂಕಿನಲ್ಲಿ ರಸಗೊಬ್ಬರ ಕೊರತೆಯಾಗಿಲ್ಲ: ಲೋಕೇಶಪ್ಪ

| Published : May 30 2024, 12:59 AM IST / Updated: May 30 2024, 11:03 AM IST

ತರೀಕೆರೆ, ಅಜ್ಜಂಪುರ ತಾಲೂಕಿನಲ್ಲಿ ರಸಗೊಬ್ಬರ ಕೊರತೆಯಾಗಿಲ್ಲ: ಲೋಕೇಶಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ತರೀಕೆರೆ, ಪ್ರಸ್ತುತ ತರೀಕೆರೆ ತಾಲೂಕಿನಲ್ಲಿ 3229 ಮೆಟ್ರಿಕ್ ಟನ್ ಹಾಗೂ ಅಜ್ಜಂಪುರ ತಾಲೂಕಿನಲ್ಲಿ 984 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಇದ್ದು ಯಾವುದೇ ಕೊರತೆ ಇರುವುದಿಲ್ಲ ಎಂದು ತಾಲೂಕು ಕೃಷಿ ಸಹಾಯಕ ನಿರ್ದೇಶಕ ಲೋಕೇಶಪ್ಪ ಬಿ.ಎಲ್.ತಿಳಿಸಿದ್ದಾರೆ.

 ತರೀಕೆರೆ :  ಪ್ರಸ್ತುತ ತರೀಕೆರೆ ತಾಲೂಕಿನಲ್ಲಿ 3229 ಮೆಟ್ರಿಕ್ ಟನ್ ಹಾಗೂ ಅಜ್ಜಂಪುರ ತಾಲೂಕಿನಲ್ಲಿ 984 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಇದ್ದು ಯಾವುದೇ ಕೊರತೆ ಇರುವುದಿಲ್ಲ ಎಂದು ತಾಲೂಕು ಕೃಷಿ ಸಹಾಯಕ ನಿರ್ದೇಶಕ ಲೋಕೇಶಪ್ಪ ಬಿ.ಎಲ್.ತಿಳಿಸಿದ್ದಾರೆ.ತರೀಕೆರೆ ತಾಲೂಕಿನಲ್ಲಿ ವಾರ್ಷಿಕ 919.9 ಮಿ.ಮೀ.ಮಳೆ ಬರಬೇಕಿದ್ದು, 2024 ರ ಮುಂಗಾರು ಹಂಗಾಮಿನಿನಲ್ಲಿ ಮೇ ತಿಂಗಳ 18ನೇ ತಾರಿಖಿನ ಅಂತ್ಯಕ್ಕೆ ವಾಡಿಕೆ ಮಳೆ 92 ಮಿ.ಮೀ.ಯಲ್ಲಿ 77 ಮಿ.ಮೀ. ಮಳೆಯಾಗಿರುತ್ತದೆ. ಅಜ್ಜಂಪುರ ತಾಲೂಕಿನ ವಾರ್ಷಿಕ ಮಳೆ 669 ಮಿ.ಮೀ.ಆಗಿದೆ. 2024 ರ ಮುಂಗಾರು ಹಂಗಾಮಿನಿನಲ್ಲಿ ಮೇ ತಿಂಗಳ 18 ನೇ ತಾರಿಖಿನ ಅಂತ್ಯಕ್ಕೆ ವಾಡಿಕೆ ಮಳೆ 86 ಮಿ.ಮೀ. ನಲ್ಲಿ ಸುಮಾರು 88 ಮಿ.ಮೀ. ಮಳೆಯಾಗಿದೆ ಎಂದು ವಿವರಿಸಿದರು.

ಬಿತ್ತನೆ ಬೀಜ ವಿವರ:  ತರೀಕೆರೆ ಹಾಗೂ ಅಜ್ಜಂಪುರ ತಾಲೂಕಿಗೆ ಪೂರ್ವ ಮುಂಗಾರು ಮತ್ತು ಮುಂಗಾರು ಹಂಗಾಮಿಗೆ ಶೇಂಗಾ, ಅಲಸಂದೆ, ಹೆಸರು, ತೊಗರಿ, ಉದ್ದು, ಎಲ್ಲಾ ಸೇರಿ ಒಟ್ಟು 211 ಕ್ವಿಂಟಾಲ್, ಮುಂಗಾರು ಹಂಗಾಮಿನಲ್ಲಿ ಮೆಕ್ಕಜೋಳ ಬಿತ್ತನೆಗೆ 100 ಕ್ವಿಂಟಾಲ್ ಬಿತ್ತನೆ ಬೀಜ ಈಗಾಗಲೇ ರೈತ ಸಂಪರ್ಕ ಕೇಂದ್ರಗಳಲ್ಲ ದಾಸ್ತಾನಿಕರಿಸಲಾಗಿರುತ್ತದೆ ಎಂದು ಮಾಹಿತಿ ನೀಡಿದರು. 

ಬಿತ್ತನೆ ಕ್ಷೇತ್ರ ಆವರಿಸಿದ ಪ್ರದೇಶ ಮತ್ತು ಬೆಳೆ ಪರಿಸ್ಥಿತಿ:  ತರೀಕೆರೆ ತಾಲೂಕಿಗೆ 2024 ನೇ ಸಾಲಿನ ಮುಂಗಾರಿಗೆ 10015 (ಹೆ) ಬಿತ್ತನೆ ಗುರಿ ಇದ್ದು ಈವರೆಗೆ ಬಿತ್ತನೆ ಪ್ರಾರಂಭ ಗೊಂಡಿಲ್ಲ. ಈಗಾಗಲೇ ಶೇಂಗಾ, ಹೆಸರು, ಅಲಸಂದೆ ಬಿತ್ತನೆ ಮಾಡಲು ರೈತರು ಭೂಮಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಅಜ್ಜಂಪುರ ತಾಲೂಕಿನಲ್ಲಿ 2024 ನೇ ಸಾಲಿನ ಮುಂಗಾರಿಗೆ 11110 (ಹೆ) ಬಿತ್ತನೆ ಗುರಿ ಇದ್ದು ಈವರೆಗೆ ಬಿತ್ತನೆ ಕಾರ್ಯ ಪ್ರಾರಂಭವಾಗಿಲ್ಲ. ಈ ಪ್ರದೇಶದಲ್ಲಿ ಶೇಂಗಾ, ಹೆಸರು ಅಲಸಂದೆ ಬಿತ್ತನೆ ಮಾಡಲು ಭೂಮಿ ಸಿದ್ಧತೆ ನಡೆದಿದೆ.

ಕಳೆದ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ ಅಜ್ಜಂಪುರ ತಾಲೂಕಿನಲ್ಲಿ 12110 ಹೆಕ್ಟೇರ್ ಬಿತ್ತನೆ ಗುರಿ ಇದ್ದರೂ ತೀವ್ರ ಮಳೆ ಕೊರತೆಯಿಂದ ಕೇವಲ 9864 ಹೆಕ್ಟೇರ್ ಬಿತ್ತನೆಯಾಗಿದೆ. ಆದರೆ ಬಿತ್ತನೆಯಾದ ಪ್ರದೇಶದಲ್ಲಿ ಸುಮಾರು 9638 ಹೆಕ್ಟೇರ್ ಬೆಳೆ ನಾಶಗೊಂಡಿರುತ್ತದೆ. ತರೀಕೆರೆ ತಾಲೂಕಿನಲ್ಲಿ 12410 ಹೆಕ್ಟೇರ್ ಗುರಿ ಇದ್ದು, ಇಲ್ಲಿಯೂ ಮಳೆ ಬಾರದೆ 5095 ಹೆಕ್ಟೇರ್ ನಲ್ಲಿ ಮಾತ್ರ ಬಿತ್ತನೆ ಕಾರ್ಯ ಕೈಗೊಳ್ಳಲಾಗಿದೆ. ಒಟ್ಟು ಬಿತ್ತನೆಯಾದ ಪ್ರದೇಶದಲ್ಲಿ ಸುಮಾರು 4475 ಹೆಕ್ಟೇರ್ ಬೆಳೆಯೂ ನಾಶವಾಗಿದೆ ಎಂದರು.

ಸರಿಯಾದ ಬೆಲೆಗೆ ರಸಗೊಬ್ಬರ ಮಾರಾಟ ಮಾಡಬೇಕು, ರಸಗೊಬ್ಬರದ ಕೃತಕ ಅಭಾವ ಸೃಷ್ಟಿಸಬಾರದು, ರಸ ಗೊಬ್ಬರದ ಕಳ್ಳ ಸಾಗಾಣಿಕೆ ಮಾಡುವುದು ಕಂಡುಬಂದರೆ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು, ನಿಯಮ ಉಲ್ಲಂಘನೆ ಮಾಡುವ ರಸಗೊಬ್ಬರ ಮಾರಾಟ ಮಳಿಗೆಗಳ ಪರವಾನಿಗೆ ರದ್ದು ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.

ಡಿಎಪಿ ರಸಗೊಬ್ಬರ ಪರ್ಯಾಯವಾಗಿ ಕಾಂಪ್ಲೆಕ್ಸ್ ರಸಗೊಬ್ಬರ ಬಳಕೆಯಿಂದ ಸಮತೋಲನಕ್ಕಾಗಿ ಬೆಳೆಗಳಿಗೆ ಬರ ಮತ್ತು ರೋಗ ನಿರೋಧಕ ಶಕ್ತಿ ನೀಡಿ ಕಾಳಿನ ತೂಕ ಹೆಚ್ಚಿಸಲು ಅತ್ಯಂತ ಅವಶ್ಯಕವಿರುವ ಪೊಟ್ಯಾಷ್ ಪೋಷಕಾಂಶ ಕಾಂಪ್ಸೆಕ್ಸ್ ರಸಗೊಬ್ಬರದಲ್ಲಿ ದೊರಕುವುದರಿಂದ ಬೆಳಗಳ ಇಳುವರಿ ಹೆಚ್ಚಾಗುತ್ತದೆ ಎಂದು ತಿಳಿಸಿದ್ದಾರೆ. ಏಕದಳ ಧಾನ್ಯಗಳ ಜೊತೆ ಅಕ್ಕಡಿ ಬೆಳೆಯಾಗಿ ದ್ವಿದಳ ಧಾನ್ಯ ಬೆಳೆ ಬೆಳೆಯುವುದರಿಂದ ಮಣ್ಣಿನ ಪೋಷಕಾಂಶ ಹೆಚ್ಚಿಸಿ ಇಳುವರಿ ಹೆಚ್ಚಿಸಬಹುದು, ಮಣ್ಣಿನಲ್ಲಿ ಹರಡುವ ರೋಗಗಳನ್ನು ನಿಯಂತ್ರಿಸಲು ಟ್ರಕೋಡರ್ಮ ಜೈವಿಕ ಪೀಡೆ ನಾಶಕದಿಂದ ಬೀಜೋಪಚಾರ ಮಾಡಬಹುದು ಎಂದು ತಿಳಿಸಿದ್ದಾರೆ.