ಟೇಕಲ್: ಇಲ್ಲಿನ ತೊರಲಕ್ಕಿ ಮೂಲದ ಟಾಟಾ ಎಸಿ ಗಾಡಿಯು ಕೊಂಡಶೆಟ್ಟಹಳ್ಳಿಯಿಂದ ಮಾಲೂರಿಗೆ ಹೊರಟಿದ್ದ ಸಂದರ್ಭದಲ್ಲಿ ಬೈರತ್ನಹಳ್ಳಿ ಸಮೀಪದ ಇಟ್ಟಿಗೆ ಫ್ಯಾಕ್ಟರಿ ಬಳಿ ಕಾರೊಂದಕ್ಕೆ ಡಿಕ್ಕಿ ಹೊಡೆದು ಚಾಲಕ ಸಾವನ್ನಪ್ಪಿದ್ದಾನೆ.
ನಿದರಮಂಗಳದಲ್ಲಿ ಮದುವೆ ಆಮಂತ್ರಣ ಪತ್ರ ನೀಡಿ ಮಾಲೂರು ಕಡೆಯಿಂದ ಕಾರು ಬರುತ್ತಿತ್ತು. ಆಗ ಹಳ್ಳ ತಪ್ಪಿಸಲು ಹೋಗಿ ಆಕಸ್ಮಿಕವಾಗಿ ಟಾಟಾ ಎಸಿ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಟಾಟಾ ಎಸಿ ಗಾಡಿಯಲ್ಲಿದ್ದ ಬಾಲಕ ಸಾಜಾದ್ ತೀವ್ರವಾಗಿ ಗಾಯಗೊಂಡು ಆಸ್ಪತ್ರೆ ಸಾಗಿಸುವ ಮಧ್ಯೆ ಅಸುನೀಗಿದರು. ಘಟನೆಯಲ್ಲಿ ಇನ್ನೂ ಕೆಲವರಿಗೆ ಗಾಯಗಳಾಗಿದೆ.ಗಾಯವಾದವರನ್ನು ಕೋಲಾರದ ಆಸ್ಪತ್ರೆಗೆ ರವಾನಿಸಿದ್ದು ಟಾಟಾ ಎಸಿ ಗಾಡಿ ಹಾಗೂ ಕಾರು ಜಖಂಗೊಂಡಿದೆ. ಸ್ಥಳಕ್ಕೆ ಮಾಸ್ತಿ ಮತ್ತು ಟೇಕಲ್ ಹೊರಠಾಣೆ ಪೋಲಿಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿ ಕೇಸು ದಾಖಲಿಸಿಕೊಂಡಿದ್ದಾರೆ.ಟಾಟಾ ಎಸಿ ಕಾರು ಅಪಘಾತ: ಚಾಲಕ ಸಾವು
ಹಳ್ಳ ತಪ್ಪಿಸಲು ಹೋಗಿ ಆಕಸ್ಮಿಕವಾಗಿ ಟಾಟಾ ಎಸಿ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಟಾಟಾ ಎಸಿ ಗಾಡಿಯಲ್ಲಿದ್ದ ಬಾಲಕ ಸಾಜಾದ್ ತೀವ್ರವಾಗಿ ಗಾಯಗೊಂಡರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.