ನಗರದ 234 ರಾಷ್ಟ್ರೀಯ ಹೆದ್ದಾರಿಯ ಶಿಡ್ಲಘಟ್ಟ ರಸ್ತೆಯ ಶೆಲ್ ಪೆಟ್ರೋಲ್ ಬಂಕ್ ಬಳಿ ಶಿಡ್ಲಘಟ್ಟದಿಂದ ಚಿಂತಾಮಣಿಗೆ ಬರುತ್ತಿದ್ದ ಟಾಟಾ ಸುಮೋ ಮತ್ತು ಎರಿಟಿಗಾ ಕಾರಿಗೆ ಡಿಕ್ಕಿ ಹೊಡೆದಿದೆ.

ಚಿಂತಾಮಣಿ: ಕಂಠ ಪೂರ್ತಿ ಕುಡಿದು ಟಾಟಾ ಸುಮೋ ಚಾಲಕ ಓವರ್ ಟೇಕ್ ಮಾಡಲು ಹೋಗಿ ತಿರುಪತಿ ಕಡೆಯಿಂದ ತಿಮ್ಮಪ್ಪನ ದರ್ಶನ ಪಡೆದು ಪುಣೆಗೆ ಹಿಂದಿರುಗುತ್ತಿದ್ದ ಎರಿಟಿಗಾ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಹಲವರಿಗೆ ಗಾಯಗಳಾಗಿರುವ ಘಟನೆ ವರದಿಯಾಗಿದೆ.

ನಗರದ 234 ರಾಷ್ಟ್ರೀಯ ಹೆದ್ದಾರಿಯ ಶಿಡ್ಲಘಟ್ಟ ರಸ್ತೆಯ ಶೆಲ್ ಪೆಟ್ರೋಲ್ ಬಂಕ್ ಬಳಿ ಶಿಡ್ಲಘಟ್ಟದಿಂದ ಚಿಂತಾಮಣಿಗೆ ಬರುತ್ತಿದ್ದ ಟಾಟಾ ಸುಮೋ ಮತ್ತು ಎರಿಟಿಗಾ ಕಾರಿಗೆ ಡಿಕ್ಕಿ ಹೊಡೆದಿದ್ದು ಟಾಟಾ ಸುಮೋದಲ್ಲಿದ್ದ ದೇವನಹಳ್ಳಿ ತಾಲೂಕಿನ ವಿಜಯಪುರದ ಇರ್ಫಾನ್ ಪಾಷಾ, ಸಾದಿಕ್ ಪಾಷ, ಮತ್ತ ಮನೋಜ್ ಗುರುತಿಸಿದ್ದು ಹೆಚ್ಚಿನ ಚಿಕಿತ್ಸೆಗಾಗಿ ನಿಮಾನ್ಸ್‌ಗೆ ಕಳುಹಿಸಿಕೊಡಲಾಗಿದೆ.

ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಮಹಾರಾಷ್ಟ್ರ ಪುಣೆ ನಿವಾಸಿಗಳಾದ ಸಂತೋಷ್, ಅವಿನಾಶ್ ಮತ್ತು ಆಕಾಶ್ ಸಣ್ಣಪುಟ್ಟ ಗಾಯಗಳಾಗಿದ್ದು ಸ್ಥಳೀಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆಯೆಂದು ತಿಳಿದುಬಂದಿದೆ.

ಟಾಟಾ ಸುಮೋ ವಾಹನ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಎರಿಟಿಗಾ ಕಾರಿಗೆ ಡಿಕ್ಕಿ ಹೊಡಿದಿದ್ದು ಇದೇ ಸಂದರ್ಭದಲ್ಲಿ ಆಟೋ ಸಹ ಜಖಂಗೊಂಡಿದೆ. ಆಟೋದಲ್ಲಿದ್ದ ವ್ಯಕ್ತಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗಿದ್ದು, ಸ್ಥಳಕ್ಕೆ ಚಿಂತಾಮಣಿ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಜಖಂಗೊಂಡ ಕಾರುಗಳನ್ನು ತೆರುವುಗೊಳಿಸಿ ದೂರು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.