ಪಂಚಾಯತಿಗಳ ಅಭಿವೃದ್ಧಿಗೆ ಕರ ವಸೂಲಿ ಅತ್ಯಗತ್ಯ

| Published : Apr 23 2025, 12:34 AM IST

ಸಾರಾಂಶ

ಗ್ರಾಮ ಪಂಚಾಯಿತಿಯಲ್ಲಿ ರಷ್ಟು ಕರ ವಸೂಲು ಮಾಡಿದ ಪಿಡಿಒ ಹಾಗೂ ಕರ ವಸೂಲಿಗಾರರ ಜಿಪಂ ಕಾರ್ಯನಿರ್ವಾಹಕ ಅಧಿಕಾರಿ ಸೋಮಶೇಖರ್ ಸನ್ಮಾನಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೋಮಶೇಖರ್ । ಕರವಸೂಲಿಗಾರರಿಗೆ ಸನ್ಮಾನಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಗ್ರಾಮ ಪಂಚಾಯತಿಗಳ ಸಮಗ್ರ ಅಭಿವೃದ್ಧಿಗೆ ಕರ ವಸೂಲಿ ಅತ್ಯಗತ್ಯ ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ ಸೋಮಶೇಖರ್ ಹೇಳಿದರು.

ನಗರದ ಜಿಪಂ ಸಭಾಂಗಣದಲ್ಲಿ ಮಂಗಳವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಜಿಲ್ಲಾ ಪಂಚಾಯಿತಿ ವತಿಯಿಂದ ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಶೇ.100ರಷ್ಟು ಕರ ವಸೂಲಾತಿ ಮಾಡಿದ ಗ್ರಾಪಂ ಅಭಿವೃದ್ಧಿ ಅಧಿಕಾರಿ ಹಾಗೂ ಕರ ವಸೂಲಿಗಾರರಿಗೆ ಸನ್ಮಾನಿಸಿ ಅವರು ಮಾತನಾಡಿದರು.

ಕರ ವಸೂಲಾತಿ ಅಂದೋಲನ, ಜಾಗೃತಿ, ಸಮನ್ವಯತೆ, ಯೋಜಿತ ಯೋಜನೆ, ತಂತ್ರಜ್ಞಾನ ಬಳಕೆ ಮಾಡುವ ಮೂಲಕ ಜಿಲ್ಲೆಯ ವಿವಿಧ ಗ್ರಾಪಂ ಗಳಲ್ಲಿ ಶೇ.100ರಷ್ಟು ಕರ ವಸೂಲಾತಿ ಮಾಡಿರುವುದು ಉತ್ತಮ ಬೆಳೆವಣಿಗೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಗ್ರಾಪಂ ತೆರಿಗೆಯಿಂದ ಸಂಗ್ರಹಿಸುವ ಆದಾಯವನ್ನು ತನ್ನ ಆಡಳಿತ ವ್ಯವಸ್ಥೆಯಲ್ಲಿ ಕೆಲಸ ನಿರ್ವಹಿಸುವ ನೌಕರರ ಸಂಬಳ, ಗ್ರಾಮದ ಅಭಿವೃದ್ಧಿಗೆ ಮತ್ತು ಅಲ್ಲಿನ ನಿವಾಸಿಗಳ ಮೂಲಭೂತ ಸೌಕರ್ಯ ಒದಗಿಸಲು ಬಳಸಲಾಗುತ್ತಿದೆ ಎಂದು ಹೇಳಿದರು.

ಚಿತ್ರದುರ್ಗ ತಾಪಂ ಇಒ ಅಧಿಕಾರಿ ವೈ.ರವಿಕುಮಾರ್ ಮಾತನಾಡಿ, ಪ್ರತಿನಿತ್ಯವೂ ಜಿಪಂ ಸಿಇಒ, ಮುಖ್ಯ ಕಾರ್ಯದರ್ಶಿ, ಮುಖ್ಯ ಯೋಜನಾಧಿಕಾರಿಗಳು ಸಭೆ, ವಿಡಿಯೋ ಕಾನ್ಫರೆನ್ಸ್ ಚರ್ಚಿಸಿ, ಅವರು ನೀಡಿರುವ ಮಾರ್ಗದರ್ಶನದಂತೆ ಕರ ವಸೂಲಾತಿ ಅಭಿಯಾನ ನಡೆಸಿದ್ದರಿಂದ ಉತ್ತಮ ಸಾಧನೆ ತೋರಲು ಸಾಧ್ಯವಾಯಿತು. ಪ್ರಸಕ್ತ ವರ್ಷ ಶೇ.100ರಷ್ಟು ಕರವಸೂಲಾತಿ ಸಾಧನೆಗೆ ಈಗಾಗಲೇ ಯೋಜನೆ ರೂಪಿಸಲಾಗಿದ್ದು, ಕಾರ್ಯಗತಗೊಳಿಸಲಾಗುತ್ತಿದೆ ಎಂದರು.

ಚಿತ್ರದುರ್ಗ ಜಿಲ್ಲೆಯಲ್ಲಿ 2024-25ನೇ ಸಾಲಿನಲ್ಲಿ ಶೇ.100ರಷ್ಟು ಕರ ವಸೂಲಾತಿ ಸಾಧನೆ ತೋರಿದ ಇಂಗಳದಾಳ ಗ್ರಾಪಂ ಪಿಡಿಒ ವಿದ್ಯಾಶ್ರೀ, ಕರ ವಸೂಲಿಗಾರ ಎಚ್.ನಾಗರಾಜ್, ಮಾಡನಾಯಕನ ಹಳ್ಳಿ ಪಿಡಿಒ ಟಿ.ಲಲಿತಾ, ಕರವಸೂಲಿಗಾರ ಎಸ್.ಎನ್.ಮಲ್ಲಿಕಾ, ಮಲ್ಲಾಡಿಹಳ್ಳಿ ಪಿಡಿಒ ಈ.ಚೂಡಾಮಣಿ ಕರವಸೂಲಿಗಾರ ಎಂ.ನವೀನ್ ಕುಮಾರ್, ಗುಂಡೇರಿ ಪಿಡಿಒ ಎಸ್.ಉಷಾ, ಕರವಸೂಲಿಗಾರ ಜಿ.ಕೆ.ಶಿವಕುಮಾರ್, ಮತ್ತೊಡು ಪಿಡಿಒ ಜಿ.ಶೇಖರಪ್ಪ, ಕರ ವಸೂಲಿಗಾರ ಎಸ್.ಈಶ್ವರಪ್ಪ, ಲಕ್ಕಿಹಳ್ಳಿ ಪಿಡಿಒ ಎನ್.ಹನುಮಂತಪ್ಪ, ಕರ ವಸೂಲಿಗಾರ ಕುಮಾರ್, ಕಂಗುವಳ್ಳಿ ಪಿಡಿಒ ಎಸ್.ಗೋವಿಂದ ರಾಜು, ಕರವಸೂಲಿಗಾರ ಟಿ.ಧನಂಜಯ, ಬೋಕಿಕೆರೆ ಪಿಡಿಒ ಬಿ.ಆರ್.ಜಯಣ್ಣ, ಕರ ವಸೂಲಿಗಾರ ಟಿ.ಮಂಜುನಾಥ್, ದೊಡ್ಡ ಉಳ್ಳಾರ್ತಿ ಪಿಡಿಒ ಸುರೇಶ್, ಕರವಸೂಲಿಗಾರ ಬಿ.ಜಯರಾಮ್, ಅಬ್ಬೇನಹಳ್ಳಿ ಪಿಡಿಒ ಎಂ.ಮೋಹನ್ ದಾಸ್, ಕರವಸೂಲಿಗಾರ ಶೇಖರಪ್ಪ ಹಾಗೂ 2024-25ನೇ ಸಾಲಿನಲ್ಲಿ ಕರವಸೂಲಿಯಲ್ಲಿ ಜಿಲ್ಲೆಯಲ್ಲಿ ಶೇ.77.58ರಷ್ಟು ಸಾಧನೆ ಮಾಡಿರುವ ಚಿತ್ರದುರ್ಗ ತಾಪಂ ಇಒ ಅಧಿಕಾರಿ ವೈ.ರವಿಕುಮಾರ್ ಹಾಗೂ ನರೇಗಾ ಸಹಾಯಕ ನಿರ್ದೇಶಕ ಎಚ್.ಯರ್ರಿಸ್ವಾಮಿ ಅವರನ್ನು ಜಿಪಂ ಸಿಇಒ ಎಸ್.ಜೆ.ಸೋಮಶೇಖರ್ ಸನ್ಮಾನಿಸಿ, ನೆನಪಿನ ಕಾಣಿಕೆ ನೀಡಿದರು.

ಈ ವೇಳೆ ಜಿಪಂ ಉಪ ಕಾರ್ಯದರ್ಶಿ ತಿಮ್ಮಪ್ಪ, ಮುಖ್ಯ ಯೋಜನಾಧಿಕಾರಿ ಗಾಯತ್ರಿ, ಮುಖ್ಯ ಲೆಕ್ಕಾಧಿಕಾರಿ ಮಧು, ಜಿಲ್ಲಾ ಯೋಜನಾ ವ್ಯವಸ್ಥಾಪಕ (ಇ-ಆಡಳಿತ) ಎಚ್.ಶಶಿಧರ್, ಸಹಾಯಕ ಜಿಲ್ಲಾ ಯೋಜನಾ ವ್ಯವಸ್ಥಾಪಕಿ ಸೈಯದ್ ಪಿಜಾ ಏ ಇರಮ್, ನರೇಗಾ ಶಾಖೆಯ ವ್ಯವಸ್ಥಾಪಕ ಸುನೀಲ್, ಜಿಲ್ಲಾ ನರೇಗಾ ಎಡಿಪಿಸಿ ಮೋಹನ್, ಜಿಲ್ಲಾ ಐಇಸಿ ಸಮಾಲೋಚಕ ಬಿ.ಸಿ.ನಾಗರಾಜ್ ಸೇರಿದಂತೆ ಮತ್ತಿತರರು ಇದ್ದರು.