ಟಿಎಪಿಸಿಎಂಎಸ್ ಅಧ್ಯಕ್ಷರಾಗಿ ಟಿ.ಸಿ.ಚೌಡಯ್ಯ ಅವಿರೋಧ ಆಯ್ಕೆ

| Published : Feb 06 2025, 12:15 AM IST

ಟಿಎಪಿಸಿಎಂಎಸ್ ಅಧ್ಯಕ್ಷರಾಗಿ ಟಿ.ಸಿ.ಚೌಡಯ್ಯ ಅವಿರೋಧ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಶಾಸಕರ ಮಾರ್ಗದರ್ಶನದಲ್ಲಿ ರೈತರು ಹಾಗೂ ಸದಸ್ಯರ ಅಭಿವೃದ್ಧಿಗೆ ಸಂಘದಿಂದ ಹಲವು ಯೋಜನೆ ರೂಪಿಸಲು ಚಿಂತನೆ ನಡೆಸಲಾಗಿದೆ. ರಸಗೊಬ್ಬರ, ಕೃಷಿ ಉಪಕರಣ, ಪಡಿತರ ಸೇರಿದಂತೆ ರೈತರಿಗೆ ಬೇಕಾದ ಅಗತ್ಯ ವಸ್ತುಗಳು ಸಕಾಲಕ್ಕೆ ದೊರೆಯುವಂತೆ ಮಾಡಲಾಗುವುದು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ (ಟಿಎಪಿಸಿಎಂಎಸ್)ದ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಟಿ.ಸಿ.ಚೌಡಯ್ಯ ಮಂಗಳವಾರ ಅವಿರೋಧ ಆಯ್ಕೆಯಾದರು.

ಹಿಂದಿನ ಅಧ್ಯಕ್ಷರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಪಟ್ಟಣದ ಸಂಘದ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಟಿ.ಸಿ.ಚೌಡಯ್ಯ ಮಾತ್ರ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ, ಸಹಕಾರ ಇಲಾಖೆ ಅಭಿವೃದ್ಧಿ ಅಧಿಕಾರಿ ಜಿ.ರಾಮಕೃಷ್ಣ ಟಿ.ಸಿ.ಚೌಡಯ್ಯ ಅವಿರೋಧ ಆಯ್ಕೆ ಘೋಷಿಸಿದರು.

ನೂತನ ಅಧ್ಯಕ್ಷ ಟಿ.ಸಿ.ಚೌಡಯ್ಯ ಮಾತನಾಡಿ, ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರ ಮಾರ್ಗದರ್ಶನದಲ್ಲಿ ಹಾಗೂ ಎಲ್ಲ ನಿರ್ದೇಶಕರ ಸಹಕಾರದಿಂದ ಅವಿರೋಧವಾಗಿ ಆಯ್ಕೆಯಾಗಿದ್ದೇನೆ. ಸಂಘದ ಅಭಿವೃದ್ಧಿಗೆ ಎಲ್ಲರ ಸಲಹೆ ಪಡೆದು ಹೊಸ ಯೋಜನೆ ರೂಪಿಸಲಾಗುವುದು ಎಂದರು.

ಚುನಾವಣೆಯಲ್ಲಿ ನಿರ್ದೇಶಕರಾಗಿ ಆಯ್ಕೆಯಾಗಲು ತಳಗವಾದಿಯ ದಿ.ಕೆ.ಚೌಡಯ್ಯ ಅವರು ಸಾಕಷ್ಟು ಶ್ರಮವಹಿಸುತ್ತಿದ್ದರು ಎಂದು ಸ್ಮರಿಸಿದ ಅವರು, ಶಾಸಕರ ಮಾರ್ಗದರ್ಶನದಲ್ಲಿ ರೈತರು ಹಾಗೂ ಸದಸ್ಯರ ಅಭಿವೃದ್ಧಿಗೆ ಸಂಘದಿಂದ ಹಲವು ಯೋಜನೆ ರೂಪಿಸಲು ಚಿಂತನೆ ನಡೆಸಲಾಗಿದೆ. ರಸಗೊಬ್ಬರ, ಕೃಷಿ ಉಪಕರಣ, ಪಡಿತರ ಸೇರಿದಂತೆ ರೈತರಿಗೆ ಬೇಕಾದ ಅಗತ್ಯ ವಸ್ತುಗಳು ಸಕಾಲಕ್ಕೆ ದೊರೆಯುವಂತೆ ಮಾಡಲಾಗುವುದು ಎಂದರು.

ಈ ವೇಳೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಚಿಕ್ಕಲಿಂಗಯ್ಯ, ಮನ್ಮುಲ್ ನಿರ್ದೇಶಕ ಆರ್.ಎನ್.ವಿಶ್ವಾಸ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಪಿ.ರಾಜು, ಸಂಘದ ಉಪಾಧ್ಯಕ್ಷ ಜೆ.ಕುಮಾರ್, ನಿರ್ದೇಶಕರಾದ ಕುಳ್ಳಚನ್ನಂಕಯ್ಯ, ಎಚ್.ಬಿ.ಬಸವೇಶ್, ಕೆ.ಜೆ.ದೇವರಾಜು, ಕೆ.ಎಸ್.ದ್ಯಾಪೇಗೌಡ, ಎಂ.ಲಿಂಗರಾಜು, ಸವಿತಾ, ಎಂ.ಬಸವರಾಜು, ದೊಡ್ಡಸ್ವಾಮಿಗೌಡ, ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ಕುಂದೂರು ಪ್ರಕಾಶ್, ಪುರಸಭೆ ಸದಸ್ಯ ಎಂ.ಎನ್.ಶಿವಸ್ವಾಮಿ, ಮುಖಂಡರಾದ ಮುಟ್ಟನಹಳ್ಳಿ ಅಂಬರೀಶ್, ಸಿ.ಎಂ.ವೇದಮೂರ್ತಿ, ದಿಲೀಪ್ ಕುಮಾರ್, ರೈತ ಸಂಘದ ಚೌಡಯ್ಯ, ಡಿ.ಬಿ.ಬಸವರಾಜು, ಸ್ವಾಮಿ, ಟಿ.ಸಿ.ಚನ್ನಯ್ಯ, ಸಿ.ಎಂ.ವೇದಮೂರ್ತಿ, ಸಿ.ಚೇತನ್ ನಾಯಕ್, ಟಿ.ಆರ್.ಸೋಮೇಗೌಡ, ಪ್ರಸನ್ನ, ಮುತ್ತುರಾಜ್, ಚೌಡಪ್ಪ, ಟಿ.ಎಂ.ಪ್ರಕಾಶ್, ಕಾಳಪ್ಪ, ಶಿವಮಾದೇಗೌಡ ಸೇರಿದಂತೆ ಹಲವರು ಅಧ್ಯಕ್ಷರನ್ನು ಅಭಿನಂದಿಸಿದರು.