ಸಾರಾಂಶ
ಹಾಸನದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಎಚ್.ಡಿ. ಪುರುಷೋತ್ತಮ್ ಪ್ರಥಮ,
ಕನ್ನಡಪ್ರಭ ವಾರ್ತೆ ಮೈಸೂರು
ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಮತ್ತು ಬಿಐಟಿಇಎಸ್ ಜಂಟಿಯಾಗಿ ಆಯೋಜಿಸಿದ್ದ ನಡೆಸಿದ್ದ ಟಿಸಿಎಸ್ ಟೆಕ್ ಬೈಟ್ಸ್ ಐಟಿ ಕ್ವಿಜ್‌ನಲ್ಲಿ ತಂತ್ರಜ್ಞಾನ ಕುರಿತು ವಿದ್ಯಾರ್ಥಿಗಳು ಹೊಂದಿರುವ ಜ್ಞಾನ ಪರೀಕ್ಷಿಸಲಾಯಿತು. ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಮತ್ತು ಸ್ವಾಯತ್ತ ಸಂಸ್ಥೆಯಾದ ಬೋರ್ಡ್ ಫಾರ್ ಐಟಿ ಎಜುಕೇಶನ್ ಸ್ಟ್ಯಾಂಡರ್ಡ್ಸ್ (ಬಿಐಟಿಇಎಸ್) ಜಂಟಿಯಾಗಿ ಟಿಸಿಎಸ್ ಟೆಕ್‌ಬೈಟ್ಸ್‌ನ 16ನೇ ಆವೃತ್ತಿಯ ಮೈಸೂರು ಪ್ರಾದೇಶಿಕ ವಿಭಾಗದ ಫೈನಲ್‌ಅನ್ನು ಯಶಸ್ವಿಯಾಗಿ ನಡೆಸಿದ್ದು, ಈಗ ಕ್ವಿಜ್ ವಿಜೇತರನ್ನು ಘೋಷಿಸಿದೆ.ಹಾಸನದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಎಚ್.ಡಿ. ಪುರುಷೋತ್ತಮ್ ಪ್ರಥಮ, ಜ್ಯೋತಿ ಇನ್‌ಸ್ಟಿಟ್ಯೂಟ್‌ಆಫ್‌ಟೆಕ್ನಾಲಜಿಯ ಆರ್. ಹೇಮಂತ್ ದ್ವಿತೀಯ ಸ್ಥಾನ ಲಭಿಸಿತು. ಟಿಸಿಎಸ್ ಸಂಸ್ಥೆಯು ಪ್ರಥಮ ಸ್ಥಾನ ಪಡೆದವರಿಗೆ 12 ಸಾವಿರ ರೂ. ಮೌಲ್ಯದ ಉಡುಗೊರೆ ವೋಚರ್ ಗಳನ್ನು ಪ್ರದಾನ ಮಾಡಿತು. ದ್ವಿತೀಯ ಸ್ಥಾನ ಪಡೆದವರಿಗೆ 10 ಸಾವಿರ ರೂ. ಮೌಲ್ಯದ ವೋಚರ್‌ಗಳು ದೊರೆತವು.
ಫೈನಲ್ ಹಂತ ತಲುಪಿದ ಎಲ್ಲರಿಗೂ ಉಡುಗೊರೆ ವೋಚರ್‌ನೀಡಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಜೆಎಸ್‌ಎಸ್ ಸೈನ್ಸ್ ಆಂಡ್ ಟೆಕ್ನಾಲಜಿ ಯೂನಿವರ್ಸಿಟಿಯ ಇಂಟರ್ನಲ್ ಕ್ವಾಲಿಟಿ ಅಶೂರೆನ್ಸ್ ಆಂಡ್ ಅಕ್ರೆಡಿಟೇಷನ್ ವಿಭಾಗದ ಡೀನ್ ಡಾ. ಹರಪ್ರಸಾದ್ ಬಹುಮಾನ ವಿತರಿಸಿದರು.