ಸಮಸ್ಯೆ ಬಗೆಹರಿಸದೇ ಇದ್ದವರಿಗೆ ತಕ್ಕ ಪಾಠ ಕಲಿಸಿ: ಮಾಜಿ ಶಾಸಕಿ ಪೂರ್ಣಿಮಾ

| Published : May 26 2024, 01:45 AM IST / Updated: May 26 2024, 09:13 AM IST

ಸಮಸ್ಯೆ ಬಗೆಹರಿಸದೇ ಇದ್ದವರಿಗೆ ತಕ್ಕ ಪಾಠ ಕಲಿಸಿ: ಮಾಜಿ ಶಾಸಕಿ ಪೂರ್ಣಿಮಾ
Share this Article
  • FB
  • TW
  • Linkdin
  • Email

ಸಾರಾಂಶ

ಆಗ್ನೇಯ ಶಿಕ್ಷಕರ ಚುನಾವಣೆ ಹಿನ್ನೆಲೆಯಲ್ಲಿ ನಗರದ ಮದಕರಿ ನಾಯಕ ಶಾಲೆಯ ವಾಲ್ಮೀಕಿ ಸಭಾಂಗಣದಲ್ಲಿ ಶಿಕ್ಷಕ ಮತದಾರರ ಸಭೆ ಹಮ್ಮಿಕೊಳ್ಳಲಾಗಿತ್ತು.

 ಚಿತ್ರದುರ್ಗ :  ಕಳೆದ 18 ವರ್ಷಗಳಿಂದ ವಿಧಾನ ಪರಿಷತ್‍ನಲ್ಲಿ ನಮ್ಮ ಪ್ರತಿನಿಧಿಯಾಗಿ ಶಿಕ್ಷಕರ ಸಮಸ್ಯೆಗಳ ಬಗ್ಗೆ ಪರಿಹಾರವನ್ನು ಕಂಡುಕೊಳ್ಳ ಲಾಗಿದೆಯೇ, ನಮ್ಮ ಹಲವಾರು ಸಮಸ್ಯೆ ಗಳಿಗೆ ಪರಿಹಾರವನ್ನು ಕಂಡುಕೊಳ್ಳದೇ ಈಗ ಮತ್ತೇ ನನ್ನನ್ನು ಆಯ್ಕೆ ಮಾಡಿ ಎನ್ನುತ್ತಿರುವವರಿಗೆ ಈ ಚುನಾವಣೆಯಲ್ಲಿ ತಕ್ಕ ಪಾಠವನ್ನು ಕಲಿಸುವಂತೆ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಶಿಕ್ಷಕ ಮತದಾರರಿಗೆ ಮನವಿ ಮಾಡಿದರು.

ಆಗ್ನೇಯ ಶಿಕ್ಷಕರ ಚುನಾವಣೆಯ ಹಿನ್ನೆಲೆಯಲ್ಲಿ ನಗರದ ಮದಕರಿ ನಾಯಕ ಶಾಲೆಯ ವಾಲ್ಮೀಕಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕ ಮತದಾರರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾವು ಸಹ ಹಲವಾರು ಶಿಕ್ಷಣವನ್ನು ಪಡೆಯುವುದು ನಮ್ಮ ಹಕ್ಕು ಇದನ್ನು ಯಾರಿದಲೂ ತಪ್ಪಿಸಲು ಸಾಧ್ಯವಿಲ್ಲ. ಸರ್ಕಾರವೂ ಸಹಾ ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ನೀಡುತ್ತಿದೆ, ಇದರ ಲಾಭವನ್ನು ಮಕ್ಕಳು ಪಡೆಯಬೇಕಿದೆ, ಸಮಾಜದ ಬದಲಾವಣೆ ಶಿಕ್ಷಣದಿಂದ ಮಾತ್ರವೇ ಸಾಧ್ಯವಿದೆ. ಸರ್ಕಾರಕ್ಕೆ ಶಿಕ್ಷಕರ ವಿವಿಧ ರೀತಿಯ ಸಮಸ್ಯೆ ಗಳ ಬಗ್ಗೆ ಅರಿವು ಇದೆ ಇದರ ಪರಿಹಾರಕ್ಕೆ ಸಿದ್ಧವಾಗಿದೆ, ನೌಕರರಿಗೆ ಹೂಸ ಪೆನ್‍ಷನ್ ಬೇಡ ಹಳೆಯ ಪದ್ಧತಿಯ ಪೆನ್‍ಷನ್ ಬೇಕು ಇದರ ಬಗ್ಗೆಯೂ ಸಹ ಸರ್ಕಾರ ಗಂಭೀರ ವಾದ ಚಿಂತನೆ ನಡೆಸುಸುತ್ತಿದೆ ಎಂದರು.

ಕಳೆದ 18 ವರ್ಷಗಳಿಂದ ವಿಧಾನ ಪರಿಷತ್ ಸದಸ್ಯರಾಗಿ ಇರುವ ಇವರು ಶಿಕ್ಷಕರ ಸಮಸ್ಯೆಗಳ ಬಗ್ಗೆ ಯಾವ ಪರಿಹಾರವನ್ನು ಸಹ ಕಂಡುಕೊಂಡಿಲ್ಲ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳ ಶಿಕ್ಷಕರ ಹಲವಾರು ಸಮಸ್ಯೆಗಳ ಪರಿಹಾರಕ್ಕೆ ಯಾವ ಕ್ರಮವನ್ನು ಸಹ ತಮ್ಮ ಅಧಿಕಾರ ಅವಧಿಯಲ್ಲಿ ಕಂಡುಕೊಂಡಿಲ್ಲ. ಈಗ ಮತ್ತೊಮ್ಮೆ ಮತ ವನ್ನು ನೀಡುವಂತೆ ನಿಮ್ಮ ಮುಂದೆ ಬಂದಿದ್ದಾರೆ. ಇವರಿಗೆ ತಕ್ಕ ಪಾಠವನ್ನು ಈ ಚುನಾವಣೆಯಲ್ಲಿ ಕಲಿಸಿ ಹೊಸಬರಿಗೆ ಅವಕಾಶವನ್ನು ನೀಡಿ ಎಂದು ಮತದಾರರಲ್ಲಿ ಮನವಿ ಮಾಡಿ ಬೇರೆಯವರನ್ನು ಆಯ್ಕೆ ಮಾಡಿದಾಗ ಮಾತ್ರ ಬದಲಾವಣೆ ಕಾಣಲು ಸಾಧ್ಯವಿದೆ ಎಂದರು.

ಕೆಪಿಸಿಸಿ ಕಾರ್ಯದರ್ಶಿ ನೇರ್ಲಗುಂಟೆ ರಾಮಪ್ಪ ಮಾತನಾಡಿ. ರಾಜ್ಯ ಸರ್ಕಾರ ಶಿಕ್ಷಕರುಗಳಿಗಾಗಿ ಹಲವಾರು ರೀತಿಯ ಸೌಲಭ್ಯಗಳನ್ನು ತಯಾರಿದೆ ಚುನಾವಣೆಯ ನೀತಿ ಸಂಹಿತೆ ಇರುವುದರಿಂದ ಅದನ್ನು ನೀಡಲಾಗಿಲ್ಲ, ಚುನಾವಣೆ ಮುಗಿದ ನಂತರ ಅವುಗಳನ್ನು ನೀಡಲಾಗುವುದು, ನಾನೂ ಸಹ 28 ವರ್ಷ ಪ್ರಾಧ್ಯಾಪಕನಾಗಿ ಕೆಲಸವನ್ನು ಮಾಡಿ ದ್ದೇನೆ ಶಿಕ್ಷಕನಾಗಿ ಅನುಭವವನ್ನು ಹೊಂದಿದ್ದೇನೆ. ಶಿಕ್ಷಕರ ಸಮಸ್ಯೆಗಳ ಬಗ್ಗೆ ನನಗೂ ಅರಿವು ಇದೆ, ಸರ್ಕಾರವೂ ಸಹ ಶಿಕ್ಷಕರ ಸಮಸ್ಯೆಗಳನ್ನು ಪರಿಹಾರ ಮಾಡುವಲ್ಲಿ ಮುಂಚೂಣಿಯಲ್ಲಿದೆ ಎಂದರು.

ಕಾರ್ಯಕ್ರಮದಲ್ಲಿ ಡಿಸಿಸಿ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ರಾಜ್ಯ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್, ಕೆಡಿಪಿ ಸದಸ್ಯರಾದ ಕೆ.ಸಿ.ನಾಗರಾಜ್, ಜಿಲ್ಲಾಮ ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್ ಮೈಲಾರಪ್ಪ, ಎಸ್.ಎಂ.ಎಲ್.ತಿಪ್ಪೇಸ್ವಾಮಿ, ಲಕ್ಷ್ಮೀಕಾಂತ, ಮುದಸಿರ್, ಖುದ್ದಸ್, ಲೋಕೇಶ್, ಮದಕರಿ ನಾಯಕ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಸಂದೀಪ್ ಆಡಳಿತಾಧಿಕಾರಿಗಳಾದ ಸೂರ್ಯನಾರಯಣ, ಸಾಗರ್ ಸೇರಿದಂತೆ ಹಲವರಿದ್ದರು.