ಮಕ್ಕಳಿಗೆ ಶಿಕ್ಷಣದ ಜತೆ ಧರ್ಮ, ಸಂಸ್ಕಾರ ಕಲಿಸಿ

| Published : May 13 2025, 01:11 AM IST

ಸಾರಾಂಶ

ಜಾತಿ ಪದ್ದತಿ, ಮೇಲು ಕೀಳು ಮನೋಬಾವನೆಯ ಅಂದಕಾರದಲ್ಲಿದ್ದ ಸಮಾಜಕ್ಕೆ ಸಮಸಮಾಜದ ಬೆಳಕನ್ನು ಚಲ್ಲಿದ ಮಹಾ ಮಾನವತಾವಾದಿ ಬಸವಣ್ಣನವರು. ಬ್ರಾಹ್ಮಣ ಸಮುದಾಯದ ಮಡಿವಂತಿಕೆಯನ್ನು ಬಿಟ್ಟು ವೀರಶೈವ ಲಿಂಗಾಯಿತ ಧರ್ಮಕ್ಕೆ ಸೇರಿ ಅನುಭವ ಮಂಟಪದ ಮೂಲಕ ಸಮಸಮಾಜ ನಿರ್ಮಾಣಕ್ಕೆ ನಾಂದಿ ಹಾಡಿದರು

ಕನ್ನಡಪ್ರಭ ವಾರ್ತೆ ಗೌರಿಬಿದನೂರು

ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣದ ಜೊತೆಗೆ ನಮ್ಮ ಧರ್ಮ, ಸಂಸ್ಕಾರವನ್ನು ಕಲಿಸಬೇಕು ಶ್ರೀ ಕ್ಷೇತ್ರ ಸಿದ್ದರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಮಾಹಾ ಸ್ವಾಮೀಜಿ ಹೇಳಿದರು. ನಗರದ ಡಾ.ಎಚ್.ಎನ್.ಕಲಾಭವನದಲ್ಲಿ ಬಸವ ಜಯಂತ್ಯುತ್ಸವ ಆಚರಣಾ ಸಮಿತಿ ಮತ್ತು ವೀರಶೈವ ಸೇವಾ ಸಮಿತಿ ಮತ್ತು ಇತರೆ ಅಂಗ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಶ್ರೀ ಬಸವೇಶ್ವರ ಜಯಂತಿಯಲ್ಲಿ ಅವರು ಆಶೀರ್ವಚನ ನೀಡಿದರು.

ಮಕ್ಕಳಿಗೆ ಆಚಾರ ಕಲಿಸಿ

ವೀರಶೈವ ಲಿಂಗಾಯಿತ ಸಮುದಾಯವನ್ನು ಬಸವಾದಿ ಶರಣರು 12ನೇ ಶತಮಾನದಲ್ಲಿ ಮುನ್ನೆಲೆಗೆ ತಂದರು. ಪೋಷಕರು ತಮ್ಮ ಮಕ್ಕಳನ್ನು ಆಚಾರವಂತರನ್ನಾಗಿಸಿದಾಗ ಅವರ ಮುಂದಿನ ಬದುಕು ಉಜ್ವಲ ಹಾಗೂ ಭವಿಷ್ಯತ್ತಿನ ಜೊತೆಗೆ ಬದುಕು ಹಸನಾಗಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಾತಿ ಪದ್ದತಿ, ಮೇಲು ಕೀಳು ಮನೋಬಾವನೆಯ ಅಂದಕಾರದಲ್ಲಿದ್ದ ಸಮಾಜಕ್ಕೆ ಸಮಸಮಾಜದ ಬೆಳಕನ್ನು ಚಲ್ಲಿದ ಮಹಾ ಮಾನವತಾವಾದಿ ಬಸವಣ್ಣನವರು. ಬ್ರಾಹ್ಮಣ ಸಮುದಾಯದ ಮಡಿವಂತಿಕೆಯನ್ನು ಬಿಟ್ಟು ವೀರಶೈವ ಲಿಂಗಾಯಿತ ಧರ್ಮಕ್ಕೆ ಪಾದಾರ್ಪಣೆ ಮಾಡಿ ಅನುಭವ ಮಂಟಪದ ಮೂಲಕ ಸಮಸಮಾಜ ನಿರ್ಮಾಣಕ್ಕೆ ಅಂದೇ ನಾಂದಿ ಹಾಡಿದರು ಎಂದು ತಿಳಿಸಿದರು.ಶಿಕ್ಷಣಕ್ಕೆ ಆದ್ಯತೆ ನೀಡಬೇಕು

ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಬಸವಾಪುರ ಮಹೇಶ್ ಮಾತನಾಡಿ ಸಮುದಾಯದವರು ಶೈಕ್ಷಣಿಕವಾಗಿ ಅಭಿವೃದ್ಧಿಯಾಗಬೇಕಿದೆ. ಜಿಲ್ಲೆಯಲ್ಲಿ ವೀರಶೈವ ಲಿಂಗಾಯಿತ ಸಮುದಾಯದ ವಿದ್ಯಾರ್ಥಿನಿಯರ ವಿದ್ಯಾರ್ಥಿ ನಿಲಯವನ್ನು ಸ್ಥಾಪಿಸುವಂತೆ ಅ.ಭಾ.ವೀ.ಮಹಾಸಭಾ ರಾಷ್ಟ್ರೀಯ ಕಾರ್ಯದರ್ಶಿ ಅವರಲ್ಲಿ ಮನವಿ ಮಾಡಿದರು, ಕಾರ್ಯಕ್ರಮದಲ್ಲಿ ಮಹಾಸಭಾ ತಾಲೂಕು ಅಧ್ಯಕ್ಷ ಟಿ.ವಿ.ಮಹೇಂದ್ರ, ತಹಸೀಲ್ದಾರ್ ಮಹೇಶ್ ಎಸ್.ಪತ್ರಿ, ವೀರಶೈವ ಸೇವಾ ಸಮಿತಿ ಅಧ್ಯಕ್ಷ ಟಿ.ಎಂ.ಚಿಕ್ಕಣ್ಣ, ಮಹಾಸಭಾ ಕಾರ್ಯದರ್ಶಿ ಎಚ್.ಎಂ.ರೇಣುಕ ಪ್ರಸನ್ನ, ರಾಜ್ಯ ಯುವ ಘಟಕದ ಅಧ್ಯಕ್ಷ ಮನೋಹರ್ ಅಬ್ಬಿಗೆರೆ ಮಾತನಾಡಿದರು.