ಶ್ರೀಕೃಷ್ಣನ ಸಂದೇಶಗಳನ್ನು ಮಕ್ಕಳಿಗೆ ಕಲಿಸಿ

| Published : Aug 27 2024, 01:35 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ: ಶ್ರೀಕೃಷ್ಣನ ಆದರ್ಶಗಳನ್ನು ಮಕ್ಕಳಿಗೆ ತಿಳಿಸುವುವ ಮೂಲಕ ಆದರ್ಶ ವ್ಯಕ್ತಿಯಾಗಿ ರೂಪಿಸಿ ವಿಶ್ವ ಮಾನವ ಸಂದೇಶ ಎಲ್ಲೆಡೆ ಪಸರಿಸಬೇಕು ಎಂದು ಧಾರವಾಡದ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ವಿಜಯಪುರ:

ಶ್ರೀಕೃಷ್ಣನ ಆದರ್ಶಗಳನ್ನು ಮಕ್ಕಳಿಗೆ ತಿಳಿಸುವುವ ಮೂಲಕ ಆದರ್ಶ ವ್ಯಕ್ತಿಯಾಗಿ ರೂಪಿಸಿ ವಿಶ್ವ ಮಾನವ ಸಂದೇಶ ಎಲ್ಲೆಡೆ ಪಸರಿಸಬೇಕು ಎಂದು ಧಾರವಾಡದ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಕರೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಹಯೋಗದಲ್ಲಿ ನಗರದ ಶ್ರೀ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಸೋಮವಾರ ಜರುಗಿದ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸರ್ವ ಸಮುದಾಯಗಳ ಪ್ರೀತಿಗೆ ಪಾತ್ರರಾದ ಶ್ರೀಕೃಷ್ಣರ ಕೌಶಲ್ಯ ಎಲ್ಲರೊಂದಿಗೆ ಬೆರೆಯುವ ವ್ಯಕ್ತಿತ್ವ, ಆದರ್ಶ, ಸ್ನೇಹ, ಅಪ್ಯಾಯಮಾನವಾಗಿದೆ ಎಂದರು.

ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಮಾತನಾಡಿ, ಶ್ರೀಕೃಷ್ಣನ ಜೀವನ ಚರಿತ್ರೆ ವರ್ಣರಂಜಿತವಾಗಿದ್ದು, ಸರ್ವರ ಸಹಭಾಗಿತ್ವ ಉಪಯೋಗಿಸಿಕೊಂಡು ಕಾರ್ಯ ನಿರ್ವಹಿಸುತ್ತಿದ್ದ ಪರಿ ಹಾಗೂ ಆತನ ಜೀವನದ ಪ್ರತಿಯೊಂದು ಘಟನೆಯೂ ಅನುಸರಣಿಯವಾಗಿದೆ. ಪ್ರಸ್ತುತ ವರ್ತಮಾನದಲ್ಲಿ ಶ್ರೀಕೃಷ್ಣರ ಸಂದೇಶಗಳನ್ನು ಅಳವಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಹೇಳಿದರು.

ಉಪನ್ಯಾಸ ನೀಡಿದ ಪಂಡಿತ ಆಚಾರ್ಯ ವಿನಾಯಕ ಗುಡಿ ಅವರು, ಶ್ರೀಕೃಷ್ಣನ ವಿಶೇಷ ಗುಣಗಳು ಗಮನ ಸೆಳೆಯುತ್ತವೆ. ಇಂದಿಗೂ ಸಹ ಶ್ರೀಕೃಷ್ಣನ ವ್ಯಕ್ತಿತ್ವ ಮಾದರಿಯಾಗಿದೆ ಎಂದು ಶ್ರೀಕೃಷ್ಣನ ಬಾಲ ಲೀಲೆಗಳು, ಜೀವನ ಚರಿತ್ರೆಯನ್ನು ವಿವರಿಸಿದರು.ಕಾರ್ಯಕ್ರಮದಲ್ಲಿ ಪೌರ ಕಾರ್ಮಿಕರಿಗೆ ಸನ್ಮಾನ ಮಾಡಲಾಯಿತು. ವೀಣಾ ಥಿಟೆ ಸಂಗಡಿಗರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು. ಜಿಪಂ ಮುಖ್ಯ ಲೆಕ್ಕಾಧಿಕಾರಿ ರಾಮಣ್ಣ ಅಥಣಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ ಭೋವಿ, ದುರ್ಗಪ್ಪ ಉಳ್ಳಾಗಡ್ಡಿ ಉಪಸ್ಥಿತರಿದ್ದರು.ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಶ್ರೀಕೃಷ್ಣ ಭಾವಚಿತ್ರ ಮೆರವಣಿಗೆಗೆ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಚಾಲನೆ ನೀಡಿದರು. ವಿವಿಧ ಕಲಾ ವಾದ್ಯಮೇಳದೊಂದಿಗೆ ಕನಕದಾಸ ವೃತ್ತದ ಮೂಲಕ ರಂಗಮಂದಿರ ತಲುಪಿತು.

ಗುರು ಕಣ್ಣೂರು, ರಾಮು ಮನಗೂಳಿ, ಮಹಾದೇವ ದಲಾಲಿ, ಯಂಕಪ್ಪ ಜಾಲವಾದಿ, ಯಲ್ಲಪ್ಪ ದ್ಯಾಬೇರಿ, ಮಹಾದೇವಿ ಬಾಗಲಕೋಟ, ಯಂಕಪ್ಪ ಜೋರಾಪುರ, ಸುರೇಶ ಗೊಲ್ಲರ, ಹಣಮಂತ ತೊರವಿ, ಯಲ್ಲಪ್ಪ ರಬಕವಿ, ಭೀಮವ್ವ ಬಾಗಲಕೋಟೆ, ದುರ್ಗಾವ್ವ ಚಿಕ್ಕರೂಗಿ, ಸಾಮವ್ವ ಗೊಲ್ಲರ, ಯಲ್ಲವ್ವ ನಾಗಠಾಣ, ರಮೇಶ ಗೊಲ್ಲರ, ಮಹಾಂತೇಶ ಗೊಲ್ಲರ, ದೇವೇಂದ್ರ ಮೀರೆಕರ, ಭೀಮರಾಯ ಜಿಗಜಿಣಗಿ, ಸೋಮನಗೌಡ ಕಲ್ಲೂರ, ಅಡಿವೆಪ್ಪ ಸಾಲಗಲ್, ವಿದ್ಯಾವಂತಿ ಅಂಕಲಗಿ ಉಪಸ್ಥಿತರಿದ್ದರು.