ವಿದ್ಯಾರ್ಥಿಗಳಿಗೆ ಶಿಕ್ಷಣ ಜೊತೆಗೆ ಸಂಸ್ಕಾರ ಕಲಿಸಿ: ಶಾಸಕ ಎಚ್.ಕೆ.ಸುರೇಶ್ ಕಿವಿಮಾತು

| Published : Jun 03 2025, 12:43 AM IST

ವಿದ್ಯಾರ್ಥಿಗಳಿಗೆ ಶಿಕ್ಷಣ ಜೊತೆಗೆ ಸಂಸ್ಕಾರ ಕಲಿಸಿ: ಶಾಸಕ ಎಚ್.ಕೆ.ಸುರೇಶ್ ಕಿವಿಮಾತು
Share this Article
  • FB
  • TW
  • Linkdin
  • Email

ಸಾರಾಂಶ

ಮಳೆ, ಚಳಿ, ಬಿಸಿಲು ಎನ್ನದೆ ಹಗಲು- ರಾತ್ರಿ ಅನ್ನ ನೀಡುವ ರೈತರು ಮತ್ತು ಗಡಿ ಕಾಯುವ ಸೈನಿಕರನ್ನು ಗೌರವಿಸುವ ನಿಟ್ಟಿನಲ್ಲಿ ಸರ್ವರೂ ಮುಂದಾಗಬೇಕಿದೆ .

ಕನ್ನಡಪ್ರಭ ವಾರ್ತೆ ಬೇಲೂರು

ಪಟ್ಟಣದ ಮೂಡಿಗೆರೆ ರಸ್ತೆಯಲ್ಲಿರುವ ವೀರಶೈವ ಕಲ್ಯಾಣ ಮಂಟಪದಲ್ಲಿ ಎಚ್. ಕೆ. ಎಸ್. ಫೌಂಡೇಷನ್ ವತಿಯಿಂದ ಎಸ್ ಎಸ್ ಎಲ್ ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ‌ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಹಮ್ಮಿಕೊಳ್ಳಲಾಗಿತ್ತು.

ಬೇಲೂರು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹಾಗೂ ನಿವೃತ್ತ ಸೈನಿಕರನ್ನು ಸನ್ಮಾನಿಸಿ, ಶಾಸಕ ಎಚ್.ಕೆ.ಸುರೇಶ್ ಮಾತನಾಡಿ, ಶಿಕ್ಷಣ ವಿದ್ಯಾರ್ಥಿಗಳ‌ ಪಾಲಿನ ಪ್ರಮುಖ ಆಸ್ತಿ, ಮಕ್ಕಳಿಗೆ ಆಸ್ತಿ ಮಾಡುವ ಬದಲು ಮಕ್ಕಳನ್ನು ಆಸ್ತಿಗಳನ್ನಾಗಿ ಮಾಡಿ ಎಂದ ಅವರು, ವಿದ್ಯೆ ಜೊತೆಗೆ ವಿನಯ ಮತ್ತು ಸಂಸ್ಕಾರ ಕಲಿಸಬೇಕಿದೆ. ಯುವ ಜನತೆ ದುಶ್ಚಟದಿಂದ ದೂರ ಬಂದು ಸದೃಢ ಸಮಾಜ ಕಟ್ಟಬೇಕಿದೆ. ಮಳೆ, ಚಳಿ, ಬಿಸಿಲು ಎನ್ನದೆ ಹಗಲು- ರಾತ್ರಿ ಅನ್ನ ನೀಡುವ ರೈತರು ಮತ್ತು ಗಡಿ ಕಾಯುವ ಸೈನಿಕರನ್ನು ಗೌರವಿಸುವ ನಿಟ್ಟಿನಲ್ಲಿ ಸರ್ವರೂ ಮುಂದಾಗಬೇಕಿದೆ ಎಂದು ಎಂದು ಹೇಳಿದರು.ಹಲವು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಮುಂದೆಯೂ ‌ ಮುಂದುವರಿಯುತ್ತದೆ.‌ ನಾನು ಕೂಡ ಬಡತನ ಕುಟುಂಬದಲ್ಲಿ‌ ಜನಿಸಿ ಉನ್ನತ ವ್ಯಾಸಂಗ ಪಡೆಯುವ ಸಂದರ್ಭದಲ್ಲಿನ ಕಷ್ಟ ನಮ್ಮ ಮುಂದಿನ ಮಕ್ಕಳಿಗೆ ಬರಬಾರದು ಎಂದು ಹಾಸನ ನಗರದಲ್ಲಿ ನಮ್ಮ ಕುಟುಂಬದ ಆಶಯದಂತೆ ಶಿಕ್ಷಣ ಸಂಸ್ಥೆ ಸ್ಥಾಪನೆ ಮಾಡಲಾಗಿದೆ ಎಂದರು.

ಬೇಲೂರು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಲ್.ರಾಜೇಗೌಡ ಮಾತನಾಡಿ, ಈ ಬಾರಿ ಬೇಲೂರು ತಾಲೂಕಿನಲ್ಲಿ ಎಸ್ ಎಸ್ ಎಲ್ ಸಿ ಫಲಿತಾಂಶ ಉತ್ತಮವಾಗಿದೆ. 60ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು 600ಕ್ಕೂ ಹೆಚ್ಚು ಅಂಕ ಪಡೆದಿದ್ದಾರೆ. ಇಬ್ಬರು ವಿದ್ಯಾರ್ಥಿಗಳು 624 ಅಂಕ ಗಳಿಸಿ ತಾಲೂಕಿಗೆ ಪ್ರಥಮ ಮತ್ತು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆಯಲು ಇಲ್ಲಿನ ಶಾಸಕ ಎಚ್.ಕೆ.ಸುರೇಶ್ ಮಾರ್ಗದರ್ಶನ ಮುಖ್ಯವಾಗಿದೆ, ಶಾಸಕರು ಕೂಡ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಯಶಸ್ವಿಯಾಗಿದ್ದಾರೆ. ಯುವ ಜನತೆ ಅಂಕದ ಜೊತೆಗೆ ಸಂಸ್ಕಾರ ಬೆಳೆಸಿಕೊಂಡು ತಂದೆ- ತಾಯಿಯವರ ಮಮತೆ ಪಡೆದು ಅವರನ್ನು ಪೋಷಿಸಿದರೆ ಮಾತ್ರ ನೀವು ಪಡೆದ ಶಿಕ್ಷಣಕ್ಕೆ ಮಹತ್ವ ಬರುತ್ತದೆ. ಇತ್ತೀಚಿನ ದಿನದಂದು ಜಾತಿ, ಧರ್ಮದ ಆರ್ಭಟ ಹೆಚ್ಚಾಗಿದೆ. ಜಾತಿ, ಧರ್ಮದ ಸಂಕೋಲೆಯಿಂದ ಹೊರ ಬಂದು ಭವ್ಯ ಭಾರತದ ಪ್ರಜೆಗಳಾಗಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಕೋಮಲ ಸುರೇಶ್, ಹಾಸನ ಕಾಲೇಜು ಶಿಕ್ಷಣ ಉಪ ನಿರ್ದೇಶಕ ಗಂಗಾಧರ್, ಚಂದ್ರಶೇಖರ, ಹಾಸನ ಜಿಲ್ಲಾ ನಿವೃತ್ತ ಸೈನಿಕರಾದ ಪ್ರದೀಪ್ ಸಾಗರ್, ತಾಲೂಕು ಅಧ್ಯಕ್ಷ ಧರ್ಮರಾಜ್, ಉಪನ್ಯಾಸಕ ಮಲ್ಲೇಶಗೌಡ, ಪರ್ವತಯ್ಯ,ತೆಂಡೇಕೆರೆ ರಮೇಶ್, ಮಂಜುನಾಥ್, ಪ್ರಣೀತಾ, ನಿಖಿಲ್, ಚೇತನ, ವಿಜಯ್, ಉಪನ್ಯಾಸಕ ಅಂದಲೆ ಹರೀಶ್ ಇನ್ನೂ ಮುಂತಾದವರು ಹಾಜರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಉಪನ್ಯಾಸಕ ಧರ್ಮೇಗೌಡ ನಡೆಸಿಕೊಟ್ಟರು.