ಸಾರಾಂಶ
ವಿದ್ಯಾರ್ಥಿಗಳು ಶಿಕ್ಷಕರಿಗೆ ಗೌರವ ನೀಡುವುದನ್ನು ಕಲಿಯಬೇಕು. ಈ ನಿಟ್ಟಿನಲ್ಲಿ 1990-91 ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು 33 ವರ್ಷಗಳ ನಂತರ ಗುರುಗಳಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಗುರುವಂದನಾ ಕಾರ್ಯಕ್ರಮವನ್ನು ಹಮ್ಮಿಕೊಂಡು ಶಿಕ್ಷಕರನ್ನು ಗೌರವಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಹೊಸಕೋಟೆ: ವಿದ್ಯಾರ್ಥಿಗಳನ್ನು ಸುಂದರ ಶಿಲ್ಪಿಗಳನ್ನಾಗಿ ಮಾಡಲು ಶ್ರಮಿಸುವ ಶಿಕ್ಷಕರ ಪಾತ್ರ ಅನನ್ಯ ಎಂದು ಉಪ ನಿರ್ದೇಶಕ ಬಾಲ ಗುರುಮೂರ್ತಿ ಹೇಳಿದರು.ತಾಲೂಕಿನ ಅನುಗೊಂಡನಹಳ್ಳಿ ಹೋಬಳಿಯ ದೇವಲಾಪುರ ಸರಕಾರಿ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ 1990-91ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಂದ ಹಮ್ಮಿಕೊಂಡಿದ್ದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ಶಿಕ್ಷಕರಿಗೆ ಗೌರವ ನೀಡುವುದನ್ನು ಕಲಿಯಬೇಕು. ಈ ನಿಟ್ಟಿನಲ್ಲಿ 1990-91 ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು 33 ವರ್ಷಗಳ ನಂತರ ಗುರುಗಳಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಗುರುವಂದನಾ ಕಾರ್ಯಕ್ರಮವನ್ನು ಹಮ್ಮಿಕೊಂಡು ಶಿಕ್ಷಕರನ್ನು ಗೌರವಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು. ನಿವೃತ್ತ ಶಿಕ್ಷಕ ಡಿ.ಎಸ್. ಅಂಜನಪ್ಪ ಮಾತನಾಡಿ, ಎಲ್ಲಾ ವಿದ್ಯಾರ್ಥಿಗಳು ಒಗ್ಗಟ್ಟಿನಿಂದ ಕಾರ್ಯಕ್ರಮ ಆಯೋಜನೆ ಮಾಡಿರುವುದು ಇತರ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ ಎಂದರು.ಶಿಕ್ಷಕರಾದ ಎಚ್.ಎಸ್.ಪ್ರಕಾಶ್, ರಾಮಚಂದ್ರರೆಡ್ಡಿ, ಕೆ.ಎಂ. ನಾರಾಯಣಗೌಡ, ಪಿ.ವಿ.ಲಲಿತ , ಎಸ್.ಕೃಷ್ಣಪ್ಪ, ಪಿ.ಎಸ್.ಉಷಾ, ಕೆ.ಶಂಕರ್, ಎ.ಸುಜ್ಞಾನಂದ ಮೂರ್ತಿ, ಡಿ. ದುರ್ಗಯ್ಯ, ಆರ್.ಕಂಬಯ್ಯ, ತ್ರಿವೇಣಿ, ಮಾರೇಗೌಡ, ಮುನಿಯಲ್ಲಪ್ಪ, ಚಿಕ್ಕಪ್ಪಯ್ಯ, ತಿಮ್ಮಕ್ಕ, ಆನಂದಾಚಾರಿ, ತೇಜುರಾಮ್, ರಾಜಗೋಪಾಲಾಚಾರಿ, ದೇವರಾಜ್, ಭೂಮಿ ರೆಡ್ಡಿ, ಡಿ.ಎಂ.ವಿಜಯಕುಮಾರ್, ಲೋಕೇಶ್, ಸುರೇಶ್, ಶ್ರೀನಿವಾಸ್, ವೆಂಕಟೇಶ್, ನಾಗಮಣಿ, ಸುಗುಣ, ಬಸವರಾಜ್, ಡಿ.ಸಿ. ಮುನಿರಾಜ್ ಇದ್ದರು.