ಸಾರಾಂಶ
ವಿದ್ಯಾದಾನ ಮಾಡುವ ಶಿಕ್ಷಕರ ಸಮೂಹ ಎಂದರೆ ಅವರು ಎಲೆಮರೆ ಕಾಯಿಗಳಂತೆ. ಯಾವುದೇ ಪ್ರಶಸ್ತಿಗೆ ನಿರೀಕ್ಷೆ ಮಾಡದೇ ತಮ್ಮ ಸೇವೆಯನ್ನು ಸಲ್ಲಿಸುತ್ತಿರುತ್ತಾರೆ ಎಂದು ರಾಷ್ಟ್ರ ಮಟ್ಟದ ಪ್ರಶಸ್ತಿ ವಿಜೇತ ಶಿಕ್ಷಕ ಕೆ.ಜೆ.ಶಿವಲಿಂಗಯ್ಯ ತಿಳಿಸಿದರು. ಹಾಸನದಲ್ಲಿ ಶಿಕ್ಷಕ ಸೇವಾ ರತ್ನ ಪ್ರಶಸ್ತಿ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶಿಕ್ಷಕ ಸೇವಾ ರತ್ನ ಪ್ರಶಸ್ತಿ ವಿತರಣೆ
ಕನ್ನಡಪ್ರಭ ವಾರ್ತೆ ಹಾಸನವಿದ್ಯಾದಾನ ಮಾಡುವ ಶಿಕ್ಷಕರ ಸಮೂಹ ಎಂದರೆ ಅವರು ಎಲೆಮರೆ ಕಾಯಿಗಳಂತೆ. ಯಾವುದೇ ಪ್ರಶಸ್ತಿಗೆ ನಿರೀಕ್ಷೆ ಮಾಡದೇ ತಮ್ಮ ಸೇವೆಯನ್ನು ಸಲ್ಲಿಸುತ್ತಿರುತ್ತಾರೆ ಎಂದು ರಾಷ್ಟ್ರ ಮಟ್ಟದ ಪ್ರಶಸ್ತಿ ವಿಜೇತ ಶಿಕ್ಷಕ ಕೆ.ಜೆ.ಶಿವಲಿಂಗಯ್ಯ ತಿಳಿಸಿದರು.
ನಗರದ ಮಹಾವೀರ ವೃತ್ತದ ಬಳಿ ಇರುವ ಗುರುಭವನದಲ್ಲಿ ಜಿಲ್ಲಾ ಸರ್ಕಾರಿ ಅರೆ ಸರ್ಕಾರಿ ಹಾಗೂ ನಿಗಮ ಮಂಡಳಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ಹಾಗೂ ಜಿಲ್ಲಾ ಸರ್ಕಾರಿ ನೌಕರರ ಕೋ-ಆಪರೇಟಿವ್ ಸೊಸೈಟಿ ಜಂಟಿಯಾಗಿ ಭಾನುವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಶಿಕ್ಷಕ ಸೇವಾ ರತ್ನ ಪ್ರಶಸ್ತಿ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಒಂದು ದೇಶದ ಬೆಳವಣಿಗೆಗೆ ಬಹಳ ಪ್ರಮುಖವಾದ ಪಾತ್ರ ವಹಿಸುವ ಶಿಕ್ಷಕ ಸಮೂಹ ಮುಖ್ಯವಾಗಿರುತ್ತದೆ. ಶಿಕ್ಷಕರ ಸಮೂಹ ಎಲೆಮರೆ ಕಾಯಿ ಇದ್ದ ಹಾಗೆ. ಯಾವುದೇ ಪ್ರಶಸ್ತಿ ಬಿರುದುಗಳ ನಿರೀಕ್ಷೆ ಮಾಡದೆ ನಮ್ಮ ಸೇವೆ ಸಲ್ಲಿಸುತ್ತಿದ್ದೇವ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಹಾಸನ ಜಿಲ್ಲಾ ಮಟ್ಟದ ಪ್ರಶಸ್ತಿ ಪಡೆದ ಅತ್ಯುತ್ತಮ ಶಿಕ್ಷಕರನ್ನು ಗುರುತಿಸಿ ಗೌರವ ಸಮರ್ಪಣೆ ಮಾಡಲಾಯಿತು.
ಜಿಲ್ಲಾ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಹಾಗೂ ಸಂಘದ ಅಧ್ಯಕ್ಷ ಕೆ.ಎಂ.ಶ್ರೀನಿವಾಸ್, ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಸಿ.ಬಸವರಾಜು, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಣ್ಣಪ್ಪ, ಚಂದ್ರಕುಮಾರ್, ಅಣ್ಣೇಗೌಡ, ಎಂ.ಎನ್. ಪರಮೇಶ್, ಎಚ್.ಟಿ.ಸುರೇಶ್, ಮಧು, ರಾಜಶೇಖರಪ್ಪ, ವೆಂಕಟೇಶ್, ಸಾವಿತ್ರಮ್ಮ, ಯಶೋಧರ್, ಸತೀಶ್,ಧರ್ಮ ಇತರರು ಇದ್ದರು.