ಮಗುವಿಗೆ ತಾಯಿ ಮೊದಲ ಗುರುವಾದರೆ, ಗುರುಗಳು ಎರಡನೇಯ ತಾಯಿಯಿದ್ದಂತೆ. ಗುರುಗಳು ಭವಿಷ್ಯದ ಪೀಳಿಗೆ ನಿರ್ಮಿಸುವ ಶಿಲ್ಪಿಗಳು ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.

ರಾಣಿಬೆನ್ನೂರು: ಮಗುವಿಗೆ ತಾಯಿ ಮೊದಲ ಗುರುವಾದರೆ, ಗುರುಗಳು ಎರಡನೇಯ ತಾಯಿ ಇದ್ದಂತೆ. ಗುರುಗಳು ಭವಿಷ್ಯದ ಪೀಳಿಗೆ ನಿರ್ಮಿಸುವ ಶಿಲ್ಪಿಗಳು ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.

ನಗರದ ಎಪಿಎಂಸಿ ಸಮುದಾಯ ಭವನದಲ್ಲಿ ಶನಿವಾರ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ತಾಲೂಕು ಪಂಚಾಯತ್, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಕ್ಷೇತ್ರ ಸಂಪನ್ಮೂಲ ಕೇಂದ್ರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ 138 ಜನ್ಮ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ದೇವರು ಜೀವನ ಕೊಟ್ಟರೆ ಗುರು ದಾರಿ ತೋರಿಸಿದ್ದಾರೆ. ತಾಲೂಕಿನ ಶಿಕ್ಷಣ ಕ್ಷೇತ್ರದಲ್ಲಿ ದೇಶದಲ್ಲಿಯೇ ಕ್ರಾಂತಿಯಾಗುತ್ತಿದೆ. ನನ್ನ ಅನುದಾನದ ಬಹುಪಾಲು ಹಣವನ್ನು ಶಿಕ್ಷಣಕ್ಕೆ ಮೀಸಲಿಟ್ಟಿರುವೆ. ಒಟ್ಟು 20 ಕೋಟಿಯಲ್ಲಿ 15 ಕೋಟಿ ಶಿಕ್ಷಣಕ್ಕೆ ಹಾಗೂ 5ಕೋಟಿ ಅನುದಾನ ಆರೋಗ್ಯಕ್ಕೆ ಇಡಲಾಗಿದೆ. ಇದರಿಂದ ತಾಲೂಕಿನ 212 ಸರ್ಕಾರಿ ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್ ನಡೆಯುತ್ತಿವೆ. ನಾನು ಶಾಸಕನಾದರೂ ಶಿಕ್ಷಕನಾಗುವ ಬಯಕೆಯಾಗುತ್ತದೆ. ಸಮಯ ಸಿಕ್ಕಾಗ ನಾನು ತಾಲೂಕಿನ ಮಕ್ಕಳಿಗೆ ಗಣಿತ ಮತ್ತು ವಿಜ್ಞಾನ ಪಾಠಗಳನ್ನು ಮಾಡಿರುವೆ. ತಾಲೂಕಿನ ವಿದ್ಯಾರ್ಥಿಗಳು ಐಎಎಸ್‌ನಂತಹ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಾಸಾಗಲಿ ಎಂದು ಡಿಜಿಟಲ್ ಲ್ರೈಬ್ರರಿ ಆಗಿವೆ. ಎಐ ಯುಗದಲ್ಲಿ ಸರ್ಕಾರಿ ಶಾಲೆಗಳಿಗೆ ರೋಬೋ ಟೀಚರ್ ಕೊಡಬೇಕು ಎಂದು ಇಚ್ಚಿಸಿರುವೆ ಎಂದರು.

ಬಿಇಓ ಶ್ಯಾಮಸುಂದ ಅಡಿಗ ಮಾತನಾಡಿ, ಶಿಕ್ಷಕ ಮಕ್ಕಳಿಗೆ ಕೇವಲ ಪಾಠ ಮಾಡುವ ವ್ಯಕ್ತಿಯಾಗಿರದೆ ಅವರಲ್ಲಿ ಸುಪ್ತವಾಗಿರುವ ಪ್ರತಿಭೆಯನ್ನು ಗುರುತಿಸಿ ಸಮಾಜಕ್ಕೆ ತೋರಿಸುವ ಶಿಲ್ಪಿ. ಮಕ್ಕಳಲ್ಲಿ ಶಿಸ್ತು, ಸಂಯಮ, ಜ್ಞಾನ, ವಿನಯ ಕಲಿಸುವ ಮೂಲಕ ಅವರ ಏಳಿಗೆಗೆ ಶ್ರಮಿಸುತ್ತಾನೆ ಎಂದರು.

ಹಾವೇಮುಲ ಅಧ್ಯಕ್ಷ ಮಂಜನಗೌಡ ಪಾಟೀಲ, ಪಂಚ ಗ್ಯಾರಂಟಿ ಸಮಿತಿ ಜಿಲ್ಲಾ ಉಪಾಧ್ಯಕ್ಷ ವಸಂತ ಲಮಾಣಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವೀರೇಶ ಮೋಟಗಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮಹೇಶ ಕಂಬಳಿ, ತಾಪಂ ಇಒ ಡಾ.ವೆಂಕಟೇಶ ಸಣ್ಣಬಿದರಿ, ಕರಾಸ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷೆ ಪುಷ್ಪಲತಾ ವಿ.ಕೆ., ತಾಲೂಕು ಶಿಕ್ಷಣಾಧಿಕಾರಿಗಳ ಸಂಘದ ಅಧ್ಯಕ್ಷ ರಮೇಶ ಚಲವಾದಿ, ಕರಾಪ್ರಾ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ ಧೂಳೆಹೊಳೆ, ತಾಪ್ರಾಶಾಶಿಪ ಸಹಕಾರಿ ಸಂಘದ ಅಧ್ಯಕ್ಷ ಎಸ್.ವಿ.ದೊಡ್ಮನಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ಅಕ್ಕಿಆಲೂರಿನ ಶಿಕ್ಷಕ ಶ್ರೀಕಾಂತ ಹುಲ್ಮನಿ ಉಪನ್ಯಾಸ ನೀಡಿದರು.

ಇದೇ ಸಂದರ್ಭದಲ್ಲಿ ತಾಲೂಕು ಪ್ರಾಶಾಶಿ ಸಂಘದ ವತಿಯಿಂದ ಸಿದ್ಧಪಡಿಸಿದ ಗುರುಸೇವೆ ಆಪ್ ಉದ್ಘಾಟಿಸಲಾಯಿತು

ಕ್ಷೇತ್ರ ಸಮನ್ವಯ ಅಧಿಕಾರಿ ಮಂಜ ನಾಯ್ಕ್, ದೈಹಿಕ ಶಿಕ್ಷಣ ಅಧಿಕಾರಿ ಪ್ರಭಾಕರ ಚಿಂದಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸಿ.ವಿ.ಅಡಿವೇರ, ವಿ.ಎಚ್.ಕೆಂಚರಡ್ಡಿ, ನಿರ್ಮಲಾ ಲಮಾಣಿ, ಕುಮುದ ಎ.ಎಸ್., ಮರಡೆಪ್ಪ ಕಂತಿ, ಶಂಕರ ಚಲವಾದಿ, ಡಾ.ಮಾಲತೇಶ ಚಲವಾದಿ,ವಿ.ಎಚ್.ಕೆಂಚರೆಡ್ಡಿ, ಸಿ.ಆರ್.ಪಾಟೀಲ, ನಿರ್ಮಲಾ ಪಾಟೀಲ, ಕುಮುದಾ ಎ.ಎಸ್., ಮಂಜುನಾಥ ಕೆ.ಆರ್, ನಾಗರಾಜ ಮತ್ತೂರ, ಅನ್ನಪೂರ್ಣ ಬಣಕಾರ, ನಾಗರಾಜ ನಲವಾಗಲ,ನಾಗರಾಜ ದೇವಾಂಗದ, ಮಂಜುನಾಥ ಎಚ್., ಬಸವರಾಜ ನಾಯಕ, ಸುಭಾಸ ಕುರುಬರ, ಸಲೀಂಖಾನ ಬಡಗಿ, ರೇಣುಕಾ ಬಸೆನಾಯ್ಕರ, ಚೂಡಾಮಣಿ ಎನ್.ಆರ್., ಶಿವಾನಂದ ಕಬಾಡಿ, ಹೇಮಂತ ಎಸ್.ಕೆ. ,ಇಸ್ಮಾಯಿಲ್ ಐರಣಿ, ಮಂಜಪ್ಪ ಚಕ್ರಸಾಲಿ ಮತ್ತಿತರರಿದ್ದರು.