ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು. ಶಿಕ್ಷಕರು ಸಾವಿರಾರು ವಿದ್ಯಾರ್ಥಿಗಳಿಗೆ ಸುಂದರ ಬದುಕನ್ನು ಕಟ್ಟಿಕೊಡಲು ದಾರಿ ತೋರುವ ಮಾರ್ಗದರ್ಶಕರು.

ಮುಳಗುಂದ: ಶಿಕ್ಷಕರು ಹಾಗೂ ಶಿಕ್ಷಕಿಯರು ತಮ್ಮ ಸೇವಾ ಅವಧಿಯಲ್ಲಿ ಸಂತೃಪ್ತಿಯಿಂದ ಆತ್ಮಸಾಕ್ಷಿಗನುಗುಣವಾಗಿ ಸಾರ್ಥಕ ಸೇವೆ ಸಲ್ಲಿಸಿದರೆ ಸಮಾಜ ಹಾಗೂ ಶಿಕ್ಷಣ ಇಲಾಖೆ ಅವರನ್ನು ಎಂದು ಮರೆಯುವುದಿಲ್ಲ ಎಂದು ಶಿಕ್ಷಣತಜ್ಞ ಡಾ. ಬಸವರಾಜ ಧಾರವಾಡ ತಿಳಿಸಿದರು.

ಸಭಾಪತಿ ಬಸವರಾಜ ಹೊರಟ್ಟಿ ದಂಪತಿಗಳು ದತ್ತು ಪಡೆದ ಸಿದ್ಧಲಿಂಗ ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಮಂಜುಳಾ ಸಾಮ್ರಾಣಿ ಹಾಗೂ ಸಬಿಯ ಕುಷ್ಟಗಿ ಅವರ ಬೀಳ್ಕೊಡುವ ಸಮಾರಂಭದಲ್ಲಿ ಮಾತನಾಡಿ, ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು. ಶಿಕ್ಷಕರು ಸಾವಿರಾರು ವಿದ್ಯಾರ್ಥಿಗಳಿಗೆ ಸುಂದರ ಬದುಕನ್ನು ಕಟ್ಟಿಕೊಡಲು ದಾರಿ ತೋರುವ ಮಾರ್ಗದರ್ಶಕರು ಎಂದರು.ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ರವೀಂದ್ರ ಶೆಟ್ಟಪ್ಪನವರ ಮಾತನಾಡಿ, ಈ ಇಬ್ಬರು ಶಿಕ್ಷಕಿಯರು ತಮ್ಮ ಸೇವಾ ಅವಧಿಯಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಅವರಿಗೆ ಶಿಕ್ಷಣ ಇಲಾಖೆಯಲ್ಲಿ ಉಜ್ವಲ ಭವಿಷ್ಯವಿದೆ ಎಂದರು.ಅಧ್ಯಕ್ಷತೆಯನ್ನು ಎಸ್ಡಿಎಂಸಿ ಅಧ್ಯಕ್ಷರಾದ ಸುನಂದಾ ಕಟವಟಿ ವಹಿಸಿದ್ದರು. ನಗರಸಭೆ ಸದಸ್ಯರಾದ ವಿದ್ಯಾವತಿ ಗಡಗಿ, ಶಿಕ್ಷಣ ಇಲಾಖೆಯ ಮುರಳಿ ಸೊಲ್ಲಾಪುರ, ಪ್ರಭಾರಿ ಮುಖ್ಯೋಪಾಧ್ಯಾಯರಾದ ಜಯಲಕ್ಷ್ಮಿ ಅಣ್ಣಿಗೇರಿ, ಶಂಕರಮ್ಮ ಆರ್. ಹಣಮಗೌಡ್ರು, ಎಂ.ಐ. ಶಿವನಗೌಡ, ಶಶಿಕಲಾ. ಬಿ ಗುಳೇದವರ, ಶೋಭಾ ಎಸ್. ಗಾಳಿ, ಶಾರದಾ ಬಾಣದ, ರಮೇಶ ಬಸರಿ, ಸಾವಿತ್ರಿ ಗದ್ದನಕೇರಿ, ಸುಮಂಗಲಾ ಪತ್ತಾರ್, ಎನ್.ಆರ್. ಶಿರೋಳ, ಗಂಗಾ ಎನ್. ಅಳವಂಡಿ, ಮಂಜುಳಾ ಟಿ., ಪದ್ಮಾವತಿ ದಾಸರ, ಲಕ್ಷ್ಮಮ್ಮ ಎಸ್. ಮಾಳೋಥರ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಸಂಜೀವಿನಿ ಕೂಲಗೂಡಿ ನಿರೂಪಿಸಿ, ವಂದಿಸಿದರು.

ಸಾವಿತ್ರಿಬಾಯಿ ಫುಲೆ ಜನ್ಮದಿನ ಆಚರಣೆ

ಗದಗ: ತಾಲೂಕು ಕಳಸಾಪೂರ ಗ್ರಾಮದ ಬಸವ ಕೇಂದ್ರದಲ್ಲಿ 1594ನೇ ಶಿವಾನುಭವ ಕಾರ್ಯಕ್ರಮದಲ್ಲಿ ಭಾರತದ ಪ್ರಥಮ ಶಿಕ್ಷಕಿಯಾದ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನ ಆಚರಿಸಲಾಯಿತು. ಮಲ್ಲಿಕಾರ್ಜುನ ಖಂಡಮ್ಮನವರ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ, ಮಕ್ಕಳಿಂದ ವಚನಗೋಷ್ಠಿ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಪ್ಪತ್ತಗಿರಿ ಸಾಹಿತ್ಯ ವೇದಿಕೆಯ ಅಧ್ಯಕ್ಷೆ ಚಂದ್ರಕಲಾ ಇಟಗಿಮಠ ವಹಿಸಿದ್ದರು. ಅತಿಥಿಗಳಾಗಿ ವಿಶಾಲಾ ಅಕ್ಕಿ, ದೀಪಾ ಹಗೇದಾಳ, ಬಸಮ್ಮ ಬರದೂರಮಠ, ಈರಮ್ಮ ಚಲವಾದಿ, ನಸೀಮಾ, ಮಂಜುಳಾ ರಾಯನಗೌಡ್ರ ಮುಂತಾದವರು ತಮ್ಮ ಅಭಿಪ್ರಾಯ ತಿಳಿಸಿದರು. ಶೋಭಾ ಹಗೇದಾಳ ಪರಿಚಯಿಸಿದರು. ಪ್ರಾಸ್ತಾವಿಕವಾಗಿ ಕಳಸಾಪೂರ ಬಸವಕೇಂದ್ರದ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಖಂಡಮ್ಮನವರ ಮಾತನಾಡಿದರು.