ಸಾರಾಂಶ
ಶಿಕ್ಷಕ ಎಂದರೆ ಪ್ರತಿಯೊಬ್ಬ ವಿದ್ಯಾರ್ಥಿಗೆ ದಾರಿದೀಪವಿದ್ದಂತೆ. ವಿದ್ಯಾರ್ಥಿಯ ಕಲಿಕೆಯ ಎಲ್ಲ ಆಯಾಮಗಳಲ್ಲಿ ಗುರುವಿನ ಪಾತ್ರವಿರುತ್ತದೆ ಎಂದು ವಾಣಿ ಹಿರಿಯ ಪ್ರಾಥಮಿಕ ಶಾಲೆ ಸಹಶಿಕ್ಷಕರಾಗಿ ನಿವೃತ್ತಿಯಾದ ಎಂ.ಜಿ. ಚಿದಾನಂದಪ್ಪ ಹೇಳಿದ್ದಾರೆ.
- ಬಿಳಿಚೋಡು ಗ್ರಾಮ ವಾಣಿ ಶಾಲೆಯಲ್ಲಿ ನಿವೃತ್ತಿ ಪ್ರಯುಕ್ತ ಬೀಳ್ಕೊಡುಗೆ
- - -ಕನ್ನಡಪ್ರಭ ವಾರ್ತೆ ಜಗಳೂರು
ಶಿಕ್ಷಕ ಎಂದರೆ ಪ್ರತಿಯೊಬ್ಬ ವಿದ್ಯಾರ್ಥಿಗೆ ದಾರಿದೀಪವಿದ್ದಂತೆ. ವಿದ್ಯಾರ್ಥಿಯ ಕಲಿಕೆಯ ಎಲ್ಲ ಆಯಾಮಗಳಲ್ಲಿ ಗುರುವಿನ ಪಾತ್ರವಿರುತ್ತದೆ ಎಂದು ವಾಣಿ ಹಿರಿಯ ಪ್ರಾಥಮಿಕ ಶಾಲೆ ಸಹಶಿಕ್ಷಕರಾಗಿ ನಿವೃತ್ತಿಯಾದ ಎಂ.ಜಿ. ಚಿದಾನಂದಪ್ಪ ಹೇಳಿದರು.ತಾಲೂಕಿನ ಬಿಳಿಚೋಡು ಗ್ರಾಮದ ವಾಣಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿವೃತ್ತಿ ಹೊಂದಿದ ಹಿನ್ನೆಲೆ ಗ್ರಾಮಸ್ಥರು, ಶಾಲೆ ಶಿಕ್ಷಕರು ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಅವರು ಮಾತನಾಡಿದರು.
ಸರ್ಕಾರಿ ಶಾಲೆಯಾಗಿರಲಿ, ಖಾಸಗಿ ಶಾಲೆಯಾಗಿರಲಿ ನಿವೃತ್ತಿ ಎಂಬುದು ಸಂಕಟಕದ ಸ್ಥಿತಿ. ಬೋಧನೆ ಸಮಯದಲ್ಲಿ ನಿತ್ಯ ಮಕ್ಕಳ ಜೊತೆ ನಲಿ-ಕಲಿ ಚಟುವಟಿಕೆಗಳು ಸಂತಸ ತಂದಿವೆ. ಬೌದ್ಧಿಕ ಜ್ಞಾನವನ್ನು ವಿದ್ಯಾರ್ಥಿಗಳಿಗೆ ಪ್ರಾಮಾಣಿಕವಾಗಿ ಉಣಬಡಿಸಿ, ಎಲ್ಲ ಸ್ಥರಗಳ ವಿದ್ಯಾರ್ಥಿಗಳನ್ನು ಮುನ್ನೆಲೆಗೆ ತರುವವರೇ ನಿಜವಾದ ಶಿಕ್ಷಕರು ಎಂದರು.ನಮ್ಮ ಶಾಲೆಯಲ್ಲಿ ಓದಿದ ಅನೇಕ ವಿದ್ಯಾರ್ಥಿಗಳು, ಪೊಲೀಸ್, ಎಂಜಿನಿಯರ್ ಸೇರಿದಂತೆ ಸರ್ಕಾರಿ ಹುದ್ದೆಯಲ್ಲಿ ಸೇರಿದ್ದಾರೆ. ವಾಣಿ ಶಾಲೆಯಲ್ಲಿ ನನಗೆ ಎಲ್ಲವನ್ನೂ ಕೊಟ್ಟಿದೆ. ಗ್ರಾಮಸ್ಥರು, ಶಾಲಾ ಶಿಕ್ಷಕರು, ಆಡಳಿತ ಮಂಡಳಿಯವರು ತಮ್ಮ ವೃತ್ತಿ ಜೀವನದ ಕಡೆಯವರೆಗೂ ಯಾವುದಕ್ಕೂ ಚ್ಯುತಿ ಬಾರದೇ ನೋಡಿಕೊಂಡಿದ್ದು ನನ್ನ ಭಾಗ್ಯ. ಶಿಕ್ಷಣ ಇಲಾಖೆ ಅಧಿಕಾರಿಗಳು ಸಹ ಸಹಕಾರ ನೀಡಿದ್ದಾರೆ ಎಂದು ಭಾವುಕರಾದರು.
ಶಾಲೆ ನಿವೃತ್ತ ಶಿಕ್ಷಕ ಎಚ್.ಬಿ. ಜಯಪ್ಪ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ಎಸ್. ಚಿದಾನಂದ, ಕೆ.ಜಿ.ಚನ್ನಬಸಪ್ಪ, ವಾಣಿ ಶಾಲೆ ಶಿಕ್ಷಕರಾದ ಕೆ.ಟಿ.ಮಂಜಣ್ಣ, ಶಿವಕುಮಾರ್ ಗ್ರಾಮದ ಮುಖಂಡರಾದ ತಿಪ್ಪೇಸ್ವಾಮಿ, ಬರಮಣ್ಣ, ವೆಂಟಕೇಶ್, ಕೆಪಿಎಸ್ಸಿ ಶಾಲೆಯ ಮುಖ್ಯ ಶಿಕ್ಷಕರಾದ ಪ್ರಶಾಂತ್, ಸಹಶಿಕ್ಷರುಗಳಾದ ರೂಪಾ. ಶಾಂತಲಾ, ರೇವಣ್ಣ, ರೇಖಾ, ಜ್ಯೋತಿ, ನರೇನಹಳ್ಳಿ ಮುಖ್ಯ ಶಿಕ್ಷಕ ನಾಗರಾಜ್, ಮುಷ್ಟಿಗರಹಳ್ಳಿ ಶಾಲೆಯ ಮುಖ್ಯ ಶಿಕ್ಷಕರಾದ ಹನುಮಂತಪ್ಪ, ದೇವಿಕೆರೆ ಶಾಲೆಯ ಸಹ ಶಿಕ್ಷಕರಾದ ಬಸಮ್ಮ ಸೇರಿದಂತೆ ಅನೇಕರು ಇದ್ದರು.- - -
(ಬಾಕ್ಸ್) * ಶಾಲೆ ಅಭಿವೃದ್ಧಿಗೆ ಎಲ್ಲರ ಶ್ರಮ: ಮುಖ್ಯಶಿಕ್ಷಕಿ ಯಶೋಧಾಶಾಲೆ ಮುಖ್ಯಶಿಕ್ಷಕಿ ಎಚ್.ಎನ್. ಯಶೋಧಾ ಅಧ್ಯಕ್ಷತೆ ವಹಿಸಿ, ಶಾಲೆಯಲ್ಲಿ ರಾಷ್ಟ್ರೀಯ ಹಬ್ಬಗಳಾದಿಯಾಗಿ ಎಲ್ಲ ಕಾರ್ಯಗಳಲ್ಲಿ ಶಿಕ್ಷಕ ಚಿದಾನಂದ್ ಮತ್ತಿತರ ಎಲ್ಲ ಶಿಕ್ಷಕರು-ಸಿಬ್ಬಂದಿ ಒಗ್ಗಟ್ಟಿನಿಂದ ಶ್ರಮಿಸುತ್ತಿದ್ದೇವೆ. ಹೀಗಾಗಿ ಶಾಲೆ ಅಭಿವೃದ್ಧಿ ಸಾಧ್ಯವಾಗಿದೆ. ಬೇರೆ ಬೇರೆ ಊರುಗಳಿಂದ ಮಕ್ಕಳು ಬಂದು ಶಿಕ್ಷಣ ಪಡೆಯುವಷ್ಟು ಮಟ್ಟಿಗೆ ಸರ್ಕಾರಿ ಶಾಲೆಯನ್ನು ಅಭಿವೃದ್ಧಿಪಡಿಸಲು ಎಲ್ಲ ಶಿಕ್ಷಕರು ಶ್ರಮಿಸುತ್ತಿದ್ದಾರೆ. ಸೇವೆಯಿಂದ ನಿವೃತ್ತಿ ಹೊಂದಿರುವ ಎಂ.ಜಿ. ಚಿದಾನಂದಪ್ಪ ಅವರ ಜೀವನ ಸುಖಮಯವಾಗಿರಲಿ ಎಂದರು.- - -
-31ಜೆಎಲ್ಆರ್ಚಿತ್ರ1:ಜಗಳೂರು ತಾಲೂಕಿನ ಬಿಳಿಚೋಡು ಗ್ರಾಮದ ವಾಣಿ ಶಾಲೆಯಲ್ಲಿ ಸೇವೆಯಿಂದ ನಿವೃತ್ತಿ ಹೊಂದಿದ ಶಿಕ್ಷಕ ಎಂ.ಜಿ.ಚಿದಾನಂದಪ್ಪ ಅವರನ್ನು ಗೌರವಿಸಿ, ಬೀಳ್ಕೊಡುಗೆ ನೀಡಲಾಯಿತು.