ಸಾರಾಂಶ
ಸಂತೆಕಟ್ಟೆ ಮೌಂಟ್ ರೋಸರಿ ಆಂಗ್ಲ ಶಾಲೆಯ ಶಿಕ್ಷಕರಿಗೆ ಪುನಶ್ಚೇತನ ಕಾರ್ಯಾಗಾರ ನಡೆಯಿತು. ಕಲಾವಿದೆ ಅಭಿಲಾಷ ಎಸ್ ಮಾತನಾಡಿ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರ ನಡುವೆ ಮನೋವೈಜ್ಞಾನಿಕ ಅಂತರವಿದೆ ಎಂದು ತಿಳಿಸಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಇಂದಿನ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರ ನಡುವೆ ಮನೋವೈಜ್ಞಾನಿಕ ಅಂತರವಿದೆ ಎಂದು ಎಸ್. ಎಂ. ಎಸ್. ಆಂಗ್ಲ ಶಾಲೆಯ ಪ್ರಾಂಶುಪಾಲೆ ಹಾಗೂ ಕಲಾವಿದೆ ಅಭಿಲಾಷ ಎಸ್ ಹೇಳಿದರು.ಅವರು ಸಂತೆಕಟ್ಟೆ ಮೌಂಟ್ ರೋಸರಿ ಆಂಗ್ಲ ಶಾಲೆಯ ಶಿಕ್ಷಕರಿಗೆ ಆಯೋಜಿಸಿದ ಪುನಶ್ಚೇತನ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಶಿಕ್ಷಣ ತರಬೇತಿಯಲ್ಲಿ ಪಡೆದ ಕಾರ್ಯವೈಖರಿ ಇಂದಿನ ತರಗತಿಯಲ್ಲಿ ಬಳಸಿಕೊಳ್ಳಲು ಸಾಧ್ಯವಿಲ್ಲ. ಈಗಿನ ವಿದ್ಯಾರ್ಥಿ ಸಮುದಾಯ ತಂತ್ರಜ್ಞಾನ ಮತ್ತು ಸಾಮಾಜಿಕ ಜಾಲತಾಣಗಳ ನಡುವೆ ಬೆಳೆದವರು. ಹಾಗಾಗಿ ಶಿಕ್ಷಕರಲ್ಲಿ ಕಾಲಕಾಲಕ್ಕೆ ನವೀಕರಣ ಹಾಗೂ ಉನ್ನತೀಕರಣ ನಡೆತಿರಬೇಕು. ಶಿಕ್ಷಕನು ನಿರಂತರ ವಿದ್ಯಾರ್ಥಿ ಹಾಗೆ ಹೊಸ ಜ್ಞಾನವನ್ನು ಅರಸುತ್ತಾವಿದ್ದರೆ ಮಾತ್ರ ಸೃಜನಶೀಲ ಶಿಕ್ಷಕನಾಗಲು ಸಾಧ್ಯ. ಇಂದು ವಿಷಯದ ಪಕ್ವತೆ ಜ್ಞಾನದ ಪ್ರಭದ್ವತೆಯ ಶಿಕ್ಷಕ ಸಮುದಾಯ ಬೇಕು ಎಂದರು.ಕಾರ್ಯಾಗಾರಕ್ಕೆ ಚಾಲನೆ ನೀಡಿ ಶಾಲಾ ಸಂಚಾಲಕ ಫಾ| ಡಾ| ರೋಕ್ ಡಿಸೋಜ ಮಾತನಾಡಿ, ಸ್ವಸ್ಥ ಸಮಾಜಕ್ಕೆ ಕಾರಣಕರ್ತರು ಶಿಕ್ಷಕರಾಗುತ್ತಾರೆ, ಸಹಬಾಳ್ವೆ ಹಾಗೂ ಕರುಣೆಯ ಮೌಲ್ಯಗಳನ್ನು ಶಿಕ್ಷಕರು ತರಗತಿಯಲ್ಲಿ ಬಿತ್ತಬೇಕು ಎಂದು ಕರೆಕೊಟ್ಟರು.
ಮುಖ್ಯಶಿಕ್ಷಕಿ ಸಿಸ್ಟರ್ ಆನ್ಸಿಲ್ಲಾ ಡಿಮೆಲ್ಲೊ ಸ್ವಾಗತಿಸಿದರು. ಶಿಕ್ಷಕಿ ಸಾರಾ ನಿರೂಪಿಸಿದರು. ವಿದ್ಯಾಲತಾ ವಂದಿಸಿದರು.