ಶಿಕ್ಷಕರ ದಿಢೀರ್‌ ಪ್ರತಿಭಟನೆ: ಇಂದಿನಿಂದ ಗಣತಿಗೆ ಹಾಜರು

| Published : Sep 23 2025, 01:05 AM IST

ಶಿಕ್ಷಕರ ದಿಢೀರ್‌ ಪ್ರತಿಭಟನೆ: ಇಂದಿನಿಂದ ಗಣತಿಗೆ ಹಾಜರು
Share this Article
  • FB
  • TW
  • Linkdin
  • Email

ಸಾರಾಂಶ

ಈ ಸಮೀಕ್ಷೆಗೆ ನಿಯೋಜಿಸಲ್ಪಟ್ಟಿದ್ದ ಶಿಕ್ಷಕರು 9 ಬೇಡಿಕೆಗಳನ್ನು ಮುಂದಿಟ್ಟುಕೊಂಡು, ಅವುಗಳನ್ನು ಈಡೇರಿಸದೇ ಸಮೀಕ್ಷೆಯಲ್ಲಿ ಭಾಗವಹಿಸುವುದಿಲ್ಲ ಎಂದು ಪ್ರತಿಭಟಿಸಿದ್ದರು. ಇದರಿಂದ ಸೋಮವಾರ ಮೊದಲ ದಿನ ಜಿಲ್ಲೆಯಲ್ಲಿ ಸಮೀಕ್ಷೆ ನಡೆದಿಲ್ಲ.

ಕನ್ನಡಪ್ರಭ ವಾರ್ತೆ ಉಡುಪಿರಾಜ್ಯ ಸರ್ಕಾರದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ, ತಮ್ಮ ಬೇಡಿಕೆಗಳು ಈಡೇರುವವರೆಗೆ ಭಾಗವಹಿಸದಿರಲು ನಿರ್ಧರಿಸಿದ್ದ ಉಡುಪಿ ಜಿಲ್ಲೆಯ ಶಿಕ್ಷಕರು, ಇದೀಗ ಜಿಲ್ಲಾಧಿಕಾರಿ ಭರವಸೆಯ ನಂತರ ತಮ್ಮ ಪಟ್ಟನ್ನು ಸಡಿಸಿದ್ದಾರೆ.ಈ ಸಮೀಕ್ಷೆಗೆ ನಿಯೋಜಿಸಲ್ಪಟ್ಟಿದ್ದ ಶಿಕ್ಷಕರು 9 ಬೇಡಿಕೆಗಳನ್ನು ಮುಂದಿಟ್ಟುಕೊಂಡು, ಅವುಗಳನ್ನು ಈಡೇರಿಸದೇ ಸಮೀಕ್ಷೆಯಲ್ಲಿ ಭಾಗವಹಿಸುವುದಿಲ್ಲ ಎಂದು ಪ್ರತಿಭಟಿಸಿದ್ದರು. ಇದರಿಂದ ಸೋಮವಾರ ಮೊದಲ ದಿನ ಜಿಲ್ಲೆಯಲ್ಲಿ ಸಮೀಕ್ಷೆ ನಡೆದಿಲ್ಲ.

ಈ ಮಧ್ಯೆ ಪೋಲಿಸ್ ವರಿಷ್ಠಾಧಿಕಾರಿ ಶಿಕ್ಷಕರ ಸಂಘದ ಪದಾಧಿಕಾರಿಗಳನ್ನು ಕರೆದು, ನಿಮ್ಮ ಬೇಡಿಕೆಗಳ ಜಿಲ್ಲಾಧಿಕಾರಿ ಜೊತೆ ಮಾತನಾಡಿ ಈಡೇರಿಸಲು ಪ್ರಯತ್ನ ಮಾಡುತ್ತೇವೆ ಎಂದರು, ಅದರಂತೆ ಜಿಲ್ಲಾಧಿಕಾರಿಗಳು ಶಿಕ್ಷಕರ 9 ಬೇಡಿಕೆಗಳನ್ನು ಕೂಡ ಈಡೇರಿಸುವಲ್ಲಿ ಸಫಲರಾಗಿದ್ದರು. ಆದುದರಿಂದ ತಾವು ಪ್ರತಿಭಟನೆ ಹಿಂದೆ ತೆಗೆದುಕೊಂಡಿದ್ದೇವೆ. ಮಂಗಳವಾರದಿಂದ ನಿಗಧಿಯಾದಂತೆ ಗಣಿತಿ ಕಾರ್ಯವನ್ನು ನಿರ್ವಹಿಸಲು ಸಹಕಾರ ನೀಡುತ್ತೇವೆ ಎಂದು ಶಿಕ್ಷಕರು ತಿಳಿಸಿದ್ದಾರೆ. ಈ ಪ್ರತಿಭಟನೆಯ ನೇತೃತ್ವವನ್ನು ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಂಪಾರು ದಿನಕರ ಶೆಟ್ಟಿ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶೇಖರ ಪೂಜಾರಿ, ಕುಂದಾಪುರ ವಲಯದ ಅಧ್ಯಕ್ಷ ಗಣೇಶ್ ಕುಮಾರ್ ಶೆಟ್ಟಿ, ಬ್ರಹ್ಮಾವರ ವಲಯದ ಅಧ್ಯಕ್ಷ ಪ್ರಶಾಂತ್ ಶೆಟ್ಟಿ ಹಾವಂಜಿ, ಉಡುಪಿ ವಲಯದ ಅಧ್ಯಕ್ಷ ರಾಮಕೃಷ್ಣ ಭಟ್, ಕಾರ್ಕಳ ವಲಯದ ಅಧ್ಯಕ್ಷ ರಮಾನಂದ್ ಶೆಟ್ಟಿ ವಹಿಸಿದ್ದರು.