ವಿದ್ಯೆ, ಸಂಸ್ಕಾರ ಕಲಿಸಿದ ಶಿಕ್ಷಕರು ಮಾತೃ ಸ್ವರೂಪಿಗಳು. ಗುರು, ತಂದೆ ತಾಯಿಗೆ ಗೌರವಿಸುವಂತಹ ಸಂಸ್ಕಾರ ಕಲಿತರೆ ಪ್ರತಿಯೊಬ್ಬ ಯುವಕ ಸಮಾಜದಲ್ಲಿ ಯಶಸ್ವಿ ವ್ಯಕ್ತಿಯಾಗಲು ಸಾಧ್ಯ ಎಂದು ಜೆಡಿಎಸ್ ರಾಜ್ಯ ಪರಿಷತ್ ಮಾಜಿ ಸದಸ್ಯ ಆರ್. ಉಗ್ರೇಶ್ ಹೇಳಿದರು.
ಕನ್ನಡಪ್ರಭ ವಾರ್ತೆ ಶಿರಾವಿದ್ಯೆ, ಸಂಸ್ಕಾರ ಕಲಿಸಿದ ಶಿಕ್ಷಕರು ಮಾತೃ ಸ್ವರೂಪಿಗಳು. ಗುರು, ತಂದೆ ತಾಯಿಗೆ ಗೌರವಿಸುವಂತಹ ಸಂಸ್ಕಾರ ಕಲಿತರೆ ಪ್ರತಿಯೊಬ್ಬ ಯುವಕ ಸಮಾಜದಲ್ಲಿ ಯಶಸ್ವಿ ವ್ಯಕ್ತಿಯಾಗಲು ಸಾಧ್ಯ ಎಂದು ಜೆಡಿಎಸ್ ರಾಜ್ಯ ಪರಿಷತ್ ಮಾಜಿ ಸದಸ್ಯ ಆರ್. ಉಗ್ರೇಶ್ ಹೇಳಿದರು.ಅವರು ಶಿರಾ ತಾಲೂಕಿನ ಬಂದಕುಂಟೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಮಾಡಿ ನಿವೃತ್ತಿ ಹೊಂದಿದ ವೈ.ಕಲ್ಲಪ್ಪರವರಿಗೆ ಬಂದ ಕುಂಟೆ ಗ್ರಾಮಸ್ಥರು ಹಾಗೂ ಹಳೆಯ ವಿದ್ಯಾರ್ಥಿಗಳು ಶನಿವಾರ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ಪಂಚಾಯತಿ ಮಾಜಿ ಉಪಾಧ್ಯಕ್ಷ ಮುದಮಡು ರಂಗಸ್ವಾಮಿ ಮಾತನಾಡಿ, ಸಮಾಜವನ್ನು ಸರಿ ಮಾರ್ಗದಲ್ಲಿ ನಡೆಸುವುದು ಶಿಕ್ಷಕರ ಬಹುದೊಡ್ಡ ಜವಾಬ್ದಾರಿ, ಇಂತಹ ಸೇವೆಯನ್ನು ಅತ್ಯಂತ ಯಶಸ್ವಿಯಿಂದ ಜನ ಮತ್ತು ವಿದ್ಯಾರ್ಥಿಗಳು ಮೆಚ್ಚುವಂತೆ ಸೇವೆ ಮಾಡಿದ ಶಿಕ್ಷಕ ವೈ.ಕಲ್ಲಪ್ಪನವರ ಶಿಕ್ಷಕ ಸೇವೆ ಸಾರ್ಥಕವೆನಿಸುತ್ತದೆ. ಶಿಕ್ಷಕ ವೈ. ಕಲ್ಲಪ್ಪನವರ ಸೇವೆ ಶಿಕ್ಷಕ ವೃತ್ತಿಯ ಮೌಲ್ಯ ಹೆಚ್ಚಿಸಿದೆ ಎಂದರು.ದಿಶಾ ಸಮಿತಿ ಸದಸ್ಯ ಮದಲೂರು ನರಸಿಂಹಮೂರ್ತಿ ಮಾತನಾಡಿ, ಗ್ರಾಮೀಣ ಪ್ರದೇಶದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸರ್ಕಾರಿ ಶಾಲೆಗಳೇ ಭವಿಷ್ಯ ರೂಪಿಸುವ ದೇಗುಲವಿದ್ದಂತೆ, ಅಂತಹ ದೇಗುಲಕ್ಕೆ ಶಿಕ್ಷಕರು ಕಳಸವಿದ್ದಂತೆ, ತನ್ನಲ್ಲಿರುವ ದಾನ ಜ್ಞಾನಶಕ್ತಿಯನ್ನು ವಿದ್ಯಾರ್ಥಿಗಳಿಗೆ ಧಾರೆಯರೆದು ಪರಿಪೂರ್ಣ ವ್ಯಕ್ತಿಯಾಗಿ ರೂಪಿಸುವ ಗುರುವಿನ ಸ್ಥಾನ ತಾಯಿಯಷ್ಟೇ ಪವಿತ್ರವಾದದ್ದು, ಶಿಕ್ಷಕ ವೈ.ಕಲ್ಲಪ್ಪನವರ ಪ್ರಾಮಾಣಿಕ ಸೇವೆ ಇತರೆ ಶಿಕ್ಷಕರಿಗೆ ಮಾದರಿಯಾಗಲಿ ಎಂದರುಅಭಿನಂದನೆ ಸ್ವೀಕರಿಸಿ ಮಾತನಾಡಿದ ನಿವೃತ್ತ ಶಿಕ್ಷಕ ವೈ.ಕಲ್ಲಪ್ಪ ಬಂದ ಕುಂಟೆ ಗ್ರಾಮಸ್ಥರು ನನ್ನನ್ನು ಒಬ್ಬ ಶಿಕ್ಷಕನಂತೆ ಕಾಣಲಿಲ್ಲ ಮನೆ ಮಗನಂತೆ ಗೌರವಿಸುತ್ತಾ ಬಂದಿದ್ದಾರೆ. ಪೋಷಕರ ಪ್ರೀತಿ ವಿದ್ಯಾರ್ಥಿಗಳ ಗುರು ನಿಷ್ಠೆ ನನ್ನ ವೃತ್ತಿ ಜೀವನದಲ್ಲಿ ಎಂದಿಗೂ ಮರೆಯಲು ಸಾಧ್ಯವಿಲ್ಲ. ವಿದ್ಯಾರ್ಥಿಗಳು ಪಾಠ ಪ್ರವಚನ ಕಲಿತಷ್ಟೇ ಸಂಸ್ಕಾರವನ್ನು ಬೆಳೆಸಿಕೊಂಡು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಇತರರಿಗೆ ಸಹಕಾರಿಯಾಗಿ ಬದುಕುವ ಮೂಲಕ ಜೀವನವನ್ನು ಸಾರ್ಥಕತೆ ಪಡಿಸಿಕೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ವೈ.ಕಲ್ಲಪ್ಪ ಹಾಗೂ ಶಿವಮ್ಮ ಕಲ್ಲಪ್ಪ ದಂಪತಿಗಳಿಗೆ ಆತ್ಮೀಯವಾಗಿ ಗೌರವಿಸಿ ಅಭಿನಂದಿಸಿದರು. ಶಿಕ್ಷಕರ ಸಂಘದ ಅಧ್ಯಕ್ಷ ಹನುಮಂತರಾಜು, ಮುಖಂಡ ಕುಂಟೆಗೌಡ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷೆ ಕೆಂಚಮ್ಮ, ಬಂದಕುಂಟೆ ಗ್ರಾಮ ಪಂಚಾಯತಿ ಮಾಜಿ ಸದಸ್ಯ ಚಂದ್ರಶೇಖರ, ಶಾಲಾ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಶಿಕ್ಷಕರ ಸಂಘದ ಕಾರ್ಯದರ್ಶಿ ಗೀತಮ್ಮ, ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷ ದೇವರಾಜು, ಬಂದ ಕುಂಟೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಉಮೇಶ್, ಬಂದ ಕುಂಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ತಿಮ್ಮೇಗೌಡ, ಈರಣ್ಣ, ರಾಮಣ್ಣ , ಮುಖ್ಯ ಶಿಕ್ಷಕಿ ದೇವರಾಜಮ್ಮ, ಶಿಕ್ಷಕರದ ಸೌಭಾಗ್ಯ ಈರಪ್ಪ ಸೇರಿದಂತೆ ಗ್ರಾಮಸ್ಥರು ಹಾಗೂ ಹಳೆಯ ವಿದ್ಯಾರ್ಥಿಗಳು ಹಾಜರಿದ್ದರು.