ಬೋಧನೆ ಸೇವೆ ಅತ್ಯಂತ ಪವಿತ್ರ: ಬಿಇಒ ನಂಜರಾಜ್‌

| Published : Jun 01 2024, 01:45 AM IST

ಸಾರಾಂಶ

ಎಲ್ಲ ಹುದ್ದೆಗಳಿಗಿಂತ ಶಿಕ್ಷಕರಾಗಿ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸುವುದು ಪುಣ್ಯದ ಹಾಗೂ ಪವಿತ್ರವಾದ ಕೆಲಸವಾಗಿದೆ. ತಮ್ಮ ಸೇವಾವಧಿಯಲ್ಲಿ ಶಿಕ್ಷಕನಾಗಿ ಸಾವಿರಾರು ಮಕ್ಕಳಿಗೆ ವಿದ್ಯೆ ಕಲಿಸಿದ್ದು, ಇದು ಪೂರ್ವಜನ್ಮದ ಪುಣ್ಯವೇ ಸರಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸಿ. ನಂಜರಾಜ್ ಹೊನ್ನಾಳಿಯಲ್ಲಿ ಹೇಳಿದ್ದಾರೆ.

- ಸೇವೆಯಿಂದ ನಿವೃತ್ತಿ ಹಿನ್ನೆಲೆ ಧರ್ಮಪತ್ನಿಯೊಂದಿಗೆ ಸನ್ಮಾನ ಸ್ವೀಕಕಾರ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ

ಎಲ್ಲ ಹುದ್ದೆಗಳಿಗಿಂತ ಶಿಕ್ಷಕರಾಗಿ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸುವುದು ಪುಣ್ಯದ ಹಾಗೂ ಪವಿತ್ರವಾದ ಕೆಲಸವಾಗಿದೆ. ತಮ್ಮ ಸೇವಾವಧಿಯಲ್ಲಿ ಶಿಕ್ಷಕನಾಗಿ ಸಾವಿರಾರು ಮಕ್ಕಳಿಗೆ ವಿದ್ಯೆ ಕಲಿಸಿದ್ದು, ಇದು ಪೂರ್ವಜನ್ಮದ ಪುಣ್ಯವೇ ಸರಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸಿ. ನಂಜರಾಜ್ ಹೇಳಿದರು.

ಸೇವೆಯಿಂದ ನಿವೃತ್ತಿ ಹೊಂದಿದ ಹಿನ್ನೆಲೆ ಶುಕ್ರವಾರ ಹಿರಿಯ ಅಧಿಕಾರಿಗಳು, ಶಿಕ್ಷಕರು, ಸಂಘ ಸಂಸ್ಥೆಗಳ ಪದಾಧಿಕಾರಿಗಳಿಂದ ಧರ್ಮಪತ್ನಿಯೊಂದಿಗೆ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಹೊನ್ನಾಳಿ ಶಿಕ್ಷಣ ಇಲಾಖೆಯಲ್ಲಿ 1 ವರ್ಷ 3 ತಿಂಗಳ ಕಾಲ ಬಿಇಒ ಆಗಿ ಸೇವೆ ಸಲ್ಲಿಸಿದ್ದೇನೆ. ಈ ಅವಧಿಯಲ್ಲಿ ಇಲಾಖೆ ನೌಕರರು ಮರೆಯಾಲಾಗದ ಪ್ರೀತಿ, ವಿಶ್ವಾಸ, ಸಹಕಾರ ನೀಡಿದ್ದಾರೆ. ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕುಗಳ ಶಿಕ್ಷಕರು, ಶಿಕ್ಷಕರ ಸಂಘಗಳ ಪದಾಧಿಕಾರಿಗಳು, ಎಲ್ಲ ಶಾಲೆಗಳ ಎಸ್.ಡಿ.ಎಂ.ಸಿ. ಪದಾಧಿಕಾರಿಗಳು, ವಿಶೇಷವಾಗಿ ಮಾಧ್ಯಮ ಬಳಗದವರು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಸಹಕಾರ ಸ್ಮರಣೀಯ. ಒಟ್ಟು 29 ವರ್ಷಗಳ ಸೇವೆ ಸಲ್ಲಿಸಿದ್ದು, ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಜಿಲ್ಲಾ ಉಪನಿರ್ದೇಶಕ ಕೊಟ್ರೇಶಪ್ಪ, ಜಿಲ್ಲಾ ವಿಷಯ ಪರಿವೀಕ್ಷಕರಾದ ಶಶಿಕಲಾ, ನಂತಸಕುಮಾರಿ, ಸುಧಾ ಅವರು ಜಿಲ್ಲೆಯಿಂದ ಆಗಮಿಸಿ ನಿವೃತ್ತರಾದ ಬಿಇಒ ನಂಜರಾಜ್ ಅವರನ್ನು ಗೌರವಿಸಿದರು. ನಂಜರಾಜ್ ಅವರು ಸಮಯಪ್ರಜ್ಞೆ, ಕ್ರಿಯಾಶೀಲತೆಯಿಂದಾಗಿ ತಾಲೂುಕಿನಲ್ಲಿ ಉತ್ತಮ ಹೆಸರನ್ನು ಪಡೆದಿದ್ದಾರೆ ಎಂದು ಹೇಳಿದರು.

ಎಸ್‌ಡಿಎಂಸಿ ತಾಲೂಕು ಅಧ್ಯಕ್ಷ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ಚೀಲೂರು ಪಾರ್ವತಮ್ಮ ಅವರು ಬಿ.ಇ.ಒ. .ನಂಜರಾಜ್ ಅವರಿಗೆ ಸನ್ಮಾನ ಪತ್ರವನ್ನು ಸಮರ್ಪಿಸಿ ಮಾತನಾಡಿದರು.

ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಮಪ್ಪ, ಹೊನ್ನಾಳಿ ತಾಲೂಕು ಸಂಘದ ಅಧ್ಯಕ್ಷೆ ನೀಲಮ್ಮ, ನ್ಯಾಮತಿ ತಾಲೂಕು ಅಧ್ಯಕ್ಷೆ ಸುಧಾ, ಪ್ರೌಢಶಾಲಾ ಶಿಕ್ಷಕರ ಸಂಘದ ಹೊನ್ನಾಳಿ ತಾಲೂಕು ಅಧ್ಯಕ್ಷ ರವಿಗೌಡ, ನ್ಯಾಮತಿ ತಾಲೂಕು ಅಧ್ಯಕ್ಷ ಆಂಜನೇಯ, ಶಿಕ್ಷಣ ಇಲಾಖೆ ಕ್ಷೇತ್ರ ಸಮನ್ವಯಾಧಿಕಾರಿ ತಿಪ್ಪೇಶಪ್ಪ, ಬಿ.ಆರ್.ಪಿ.ಗಳು, ಸಿ.ಆರ್.ಪಿ.ಗಳು, ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವಿವಿಧ ಸಂಘಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

- - - -31ಎಚ್.ಎಲ್.ಐ1.:

ಹೊನ್ನಾಳಿ ತಾಲೂಕು ಬಿಇಒ ನಂಜರಾಜ್ ಅವರು ಮೇ 31ರಂದು ಸೇವೆಯಿಂದ ನಿವೃತ್ತರಾದ ಹಿನ್ನೆಲೆ ಗುರುಭವನದಲ್ಲಿ ಸನ್ಮಾನಿಸಿ, ಬೀಳ್ಕೊಡಲಾಯಿತು.