ಮಹಿಳೆಯರಲ್ಲಿ ಆರೋಗ್ಯ ಜಾಗೃತಿಗೆ ಟೀಲ್‌ ಟು ಹೀಲ್‌ ಟುಗೆದರ್‌ ಉತ್ಸವ

| Published : Mar 12 2024, 02:06 AM IST

ಮಹಿಳೆಯರಲ್ಲಿ ಆರೋಗ್ಯ ಜಾಗೃತಿಗೆ ಟೀಲ್‌ ಟು ಹೀಲ್‌ ಟುಗೆದರ್‌ ಉತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಗ್ಲೆನಿಗಲ್ಸ್‌ ಆಸ್ಪತ್ರೆ ಏರ್ಪಡಿಸಿದ್ದ ‘ಟೀಲ್‌ ಟು ಹೀಲ್‌ ಟುಗೆದರ್‌’ ಹೆಸರಿನ ಕಾರ್ಯಕ್ರಮ.

ಕನ್ನಡಪ್ರಭ ವಾರ್ತೆ ಕೆಂಗೇರಿ

ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಗ್ಲೆನಿಗಲ್ಸ್‌ ಆಸ್ಪತ್ರೆ ಏರ್ಪಡಿಸಿದ್ದ ‘ಟೀಲ್‌ ಟು ಹೀಲ್‌ ಟುಗೆದರ್‌’ ಹೆಸರಿನ ಮಹಿಳಾ ಆರೋಗ್ಯ ಉತ್ಸವ ಒಂದು ತಿಂಗಳ ಕಾಲ ಯಶಸ್ವಿಯಾಗಿ ನಡೆದಿದ್ದು, ಇತ್ತೀಚೆಗೆ ಗ್ಲೆನಿಗಲ್ಸ್‌ ಬಿಜಿಎಸ್‌ ಆಸ್ಪತ್ರೆಯಲ್ಲಿ ಸಮಾರೋಪ ಸಮಾರಂಭ ನಡೆಯಿತು.

ಕಾರ್ಯಕ್ರಮದ ಅಂಗವಾಗಿ ಒಟ್ಟು 1200 ಮಹಿಳೆಯರನ್ನು ಪ್ಯಾಪ್‌ ಸ್ಮೀಯರ್ಸ್‌ ಮತ್ತು ಮೆಮೊಗ್ರಫಿ ತಪಾಸಣೆಗೆ ಒಳಪಡಿಸಲಾಗಿದೆ. ವಿಶೇಷವಾಗಿ ಸ್ತನ ಕ್ಯಾನ್ಸರ್‌ ತಡೆಗಟ್ಟುವ ಸಲುವಾಗಿ ಅದಕ್ಕೆ ಸಂಬಂಧಿಸಿದಂತೆ ಹಲವು ತಪಾಸಣೆಗಳನ್ನು ನಡೆಸಲಾಯಿತು. ಅದರ ಜತೆಗೆ ಕ್ಯಾನ್ಸರ್‌ ನಿಯಂತ್ರಣ ಮತ್ತು ಕ್ಯಾನ್ಸರ್‌ ಪತ್ತೆ ಹಚ್ಚುವ ವಿಧಾನದ ಕುರಿತಂತೆ ಶಾಲೆ, ಕಾಲೇಜು, ಕಾರ್ಪೋರೇಟ್‌ ಕಚೇರಿ, ಸಮುದಾಯ ಕೇಂದ್ರಗಳಲ್ಲಿ ಅರಿವು ಮೂಡಿಸಲಾಯಿತು. 60 ಲಕ್ಷಕ್ಕೂ ಹೆಚ್ಚಿನ ಮಹಿಳೆಯರಿಗೆ ಅಭಿಯಾನದ ಮೂಲಕ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗಿದೆ.

ಸಮಾರೋಪ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಗ್ಲೆನಿಗಲ್ಸ್ ಬಿಜಿಎಸ್‌ ಆಸ್ಪತ್ರೆ ಕ್ಯಾನ್ಸರ್‌ ವಿಕಿರಣ ವಿಭಾಗದ ಮುಖ್ಯಸ್ಥರಾದ ಡಾ। ಜೆ.ಮಾತಂಗಿ, ಆರೋಗ್ಯ ಕಾಪಾಡುವುದಕ್ಕೆ ಮುಕ್ತ ಸಂವಹನ ಅತ್ಯಗತ್ಯ. ‘ಟೀಲ್‌ ಟು ಹೀಲ್‌ ಟುಗೆದರ್‌’ ಅಭಿಯಾನದ ಮೂಲಕ ಮಹಿಳೆಯರಿಗೆ ಅವರ ಆರೋಗ್ಯದ ಬಗ್ಗೆ ತಿಳಿಸುವ ಕೆಲಸ ಮಾಡಲಾಗಿದೆ. ಈ ಪ್ರಯತ್ನದಿಂದ ಹಲವು ಮಹಿಳೆಯರಲ್ಲಿ ಜಾಗೃತಿ ಮೂಡಿದೆ ಎಂದರು.

ಬೆಂಗಳೂರಿನ ಗ್ಲೆನಿಗಲ್ಸ್ ಆಸ್ಪತ್ರೆಗಳ ಕ್ಲಸ್ಟರ್‌ ಸಿಒಒ ಬಿಜು ನಾಯರ್‌, ಮಾಜಿ ಶಾಸಕಿ ಸೌಮ್ಯಾರೆಡ್ಡಿ ಇದ್ದರು.