ಹಾರೋಬೆಳವಡಿಯ ಏಳು ಜನರಿಗೆ ಠೇವಣಿ ಹಣ ಕೊಡದೇ ಸತಾಯಿಸಿದ್ದ ಡಾ. ವಿ.ಎಸ್. ಸಾಧುನವರ ಸೊಸೈಟಿಗೆ ದಂಡ ಮತ್ತು ಪರಿಹಾರ ನೀಡಲು ಗ್ರಾಹಕರ ಆಯೋಗ ಆದೇಶಿಸಿದೆ.
ಧಾರವಾಡ:
ತಾಲೂಕಿನ ಹಾರೋಬೆಳವಡಿಯ ಏಳು ಜನರಿಗೆ ಠೇವಣಿ ಹಣ ಕೊಡದೇ ಸತಾಯಿಸಿದ್ದ ಡಾ. ವಿ.ಎಸ್. ಸಾಧುನವರ ಸೊಸೈಟಿಗೆ ದಂಡ ಮತ್ತು ಪರಿಹಾರ ನೀಡಲು ಗ್ರಾಹಕರ ಆಯೋಗ ಆದೇಶಿಸಿದೆ.ರೋಬೆಳವಡಿಯ ರಾಮಪ್ಪ, ಶಂಕರವ್ವ, ವಿಜಯಾ, ಗಿರಿಜವ್ವ, ಶಾಂತವ್ವ, ರತ್ನ ಹಾಗೂ ಶಿವಲೀಲಾ ಸಾಧುನವರ ಸೊಸೈಟಿಯ ಸದಸ್ಯರಾಗಿ ವಿವಿಧ ಮೊತ್ತಗಳ ಠೇವಣಿ ಮತ್ತು ಉಳಿತಾಯ ಖಾತೆ ಹೊಂದಿದ್ದರು. ವೈಯಕ್ತಿಕ ಅಡಚಣೆಯಿಂದ ಹಣ ಬೇಕಾಗಿದ್ದರಿಂದ ಠೇವಣಿ ಹಾಗೂ ಉಳಿತಾಯ ಖಾತೆಯಲ್ಲಿರುವ ಹಣ ಮರಳಿಸುವಂತೆ ಸಾಕಷ್ಟು ಸಲ ಕೇಳಿದರೂ ಸೊಸೈಟಿ ಹಣ ನೀಡಿರಲಿಲ್ಲ. ಆದ್ದರಿಂದ ಏಳು ಜನರು ಸೊಸೈಟಿ ಸೇವಾ ನ್ಯೂನತೆ ಎಸಗಿದೆ ಎಂದು ಸೊಸೈಟಿ ಅಧ್ಯಕ್ಷ ವಿ.ಎಸ್. ಸಾದುನವರ ವಿರುದ್ಧ ದೂರು ನೀಡಿದ್ದರು.
ದೂರುಗಳ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ, ಸೊಸೈಟಿಯಲ್ಲಿ ಎಫ್.ಡಿ ಮತ್ತು ಉಳಿತಾಯ ಖಾತೆ ಹೊಂದಿದ್ದು ದಾಖಲೆ ಮೂಲಕ ಗೊತ್ತಾಗಿದೆ. ಅಲ್ಲದೇ ದೂರುದಾರರಿಗೆ ಹಣದ ಅವಶ್ಯಕತೆ ಇದ್ದು ಮರಳಿಸದೇ ಇರುವುದು ಗ್ರಾಹಕರ ರಕ್ಷಣಾ ಕಾಯ್ದೆಯಡಿ ಸೇವಾ ನ್ಯೂನತೆ. ಎಫ್.ಡಿ ಮತ್ತು ಉಳಿತಾಯ ಖಾತೆ ಹಾಗೂ ಕ್ಯಾಶ್ ರ‍್ಟಿಫಿಕೇಟ್‌ನಲ್ಲಿದ್ದ ₹ 37 ಲಕ್ಷವನ್ನು ಬಡ್ಡಿಯೊಂದಿಗೆ ಲೆಕ್ಕ ಹಾಕಿ ದೂರುದಾರರಿಗೆ ತಿಂಗಳ ಒಳಗಾಗಿ ಹಿಂದಿರುಗಿಸುವಂತೆ ಆಯೋಗ ಆದೇಶಿಸಿದೆ. ಜತೆಗೆ ದೂರುದಾರರಿಗೆ ಆಗಿರುವ ಅನಾನುಕೂಲ, ತೊಂದರೆ ಹಾಗೂ ಮಾನಸಿಕ ತೊಂದರೆಗಾಗಿ ₹ 50 ಸಾವಿರ ಪರಿಹಾರ ಮತ್ತು ₹ 10 ಸಾವಿರ ಪ್ರಕರಣದ ವೆಚ್ಚ ಕೊಡುವಂತೆ ಆಯೋಗ ಸೊಸೈಟಿ ಅಧ್ಯಕ್ಷ ವಿರೂಪಾಕ್ಷಿ ಸಾಧುನವರವರಿಗೆ ನಿರ್ದೇಶಿಸಿದೆ.