ಕಲಾಂ ಜನ್ಮದಿನ ಅಂಗವಾಗಿ ಚಿತ್ರರಚನೆ ಮತ್ತು ಪೋಸ್ಟರ್ ರಚನೆ ಸ್ಪರ್ಧೆ

| Published : Oct 29 2024, 12:58 AM IST

ಸಾರಾಂಶ

ಅಬ್ದುಲ್ ಕಲಾಂ ಅವರು ಮೊದಲು ಇಸ್ರೋ ವಿಜ್ಞಾನಿಯಾಗಿ ಸೇವೆ ಪ್ರಾರಂಭಿಸಿ ನಂತರ ಡಿ.ಆರ್‌.ಡಿ.ಒ ಸಂಸ್ಥೆಗೆ ಸೇರಿದರು.

ಕನ್ನಡಪ್ರಭ ವಾರ್ತೆ ಮೈಸೂರು

ಟೀಂ ಮೈಸೂರು ತಂಡವು ಭಾನುವಾರ ದೇಶ ಕಂಡ ಶ್ರೇಷ್ಠ ವಿಜ್ಞಾನಿ, ಮಾಜಿ ರಾಷ್ಟ್ರಪತಿ ದಿವಂಗತ ಡಾ.ಎಪಿಜೆ ಅಬ್ದುಲ್ ಕಲಾಂ ಅವರ 94ನೇ ಜನ್ಮದಿನದ ಅಂಗವಾಗಿ ಭಾರತದ ಬಾಹ್ಯಾಕಾಶ ತಂತ್ರಜ್ಞಾನಕ್ಕೆ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಕೊಡುಗೆ ವಿಷಯಕ್ಕೆ ಸಂಬಂಧಿಸಿದಂತೆ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಚಿತ್ರಬಿಡಿಸುವ ಮತ್ತು ಪೋಸ್ಟರ್‌ ರಚಿಸುವ ಸ್ಪರ್ಧೆ ಏರ್ಪಡಿಸಲಾಗಿತ್ತು.

8, 9, 10ನೇ ತರಗತಿ ವಿದ್ಯಾರ್ಥಿಗಳು ಚಿತ್ರಪಟ (ಪೋಸ್ಟರ್) ರಚಿಸಿ, ಅಧ್ಯಯನ ಮಾಡಿ, ತೀರ್ಪುಗಾರರ ಎದುರು ವಿಚಾರ ಮಂಡಿಸುವ ಮೂಲಕ ಸ್ಪರ್ಧೆಯನ್ನು ಬಿಎಸ್ಎಸ್ ವಿದ್ಯೋದಯ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವಿಜ್ಞಾನಿ ಡಾ. ನವೀನ್ ಶಿವಣ್ಣ ಮಾತನಾಡಿ, ಅಬ್ದುಲ್ ಕಲಾಂ ಅವರು ಮೊದಲು ಇಸ್ರೋ ವಿಜ್ಞಾನಿಯಾಗಿ ಸೇವೆ ಪ್ರಾರಂಭಿಸಿ ನಂತರ ಡಿ.ಆರ್‌.ಡಿ.ಒ ಸಂಸ್ಥೆಗೆ ಸೇರಿದರು. ಅದಕ್ಕೆ ಸಂಬಂಧಿಸಿದ ಡಿ.ಎಫ್‌.ಆರ್‌.ಎಲ್‌ಮೈಸೂರಿನಲ್ಲಿಯೇ ಇದೆ ಎಂದರು.

ಉರಗ ತಜ್ಞ ಸ್ನೇಕ್ ಶ್ಯಾಮ್ ಮಾತನಾಡಿ, ವಿದ್ಯಾರ್ಥಿಗಳು ವಿಜ್ಞಾನ ತಂತ್ರಜ್ಞಾನದ ಅಧ್ಯಯನದ ಜೊತೆಗೆ ಪರಿಸರ, ಜನ್ಮ ನೀಡಿದ ತಂದೆ, ತಾಯಿ, ರೈತ ಮತ್ತು ಯೋಧರನ್ನು ಮರೆಯದೆ ನೆನೆಯಬೇಕು ಎಂದು ಕಿವಿಮಾತು ಹೇಳಿದರು.

ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ. ರಾಜೇಂದ್ರ ಮಾತನಾಡಿ, ಟೀಂ ಮೈಸೂರು ತಂಡದ ಕಾರ್ಯಕ್ರಮವನ್ನು ಅನೇಕ ವರ್ಷಗಳಿಂದ ನೋಡುತ್ತಾ ಬಂದಿದ್ದೇನೆ. ಅವರ ಸಾಮಾಜಿಕ ಕಳಕಳಿ ಮತ್ತು ಸೇವೆ ಶ್ಲಾಘನೀಯ. ಇಂತಹ ಕಾರ್ಯಕ್ರಮ ಆಯೋಜಿಸಿರುವುದಕ್ಕೆ ತಂಡಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.

ತೀರ್ಪುಗಾರರಾಗಿ ಉಪನ್ಯಾಸಕ ಪ್ರಶಾಂತ್, ಗೌರಿ ರಾಯ್ ಹಾಗೂ ಬಸವರಾಜು ಪಾಲ್ಗೊಂಡಿದ್ದರು.

ಸ್ಪರ್ಧೆಯಲ್ಲಿ 70 ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಶಾರ್ವಣ್ಯ (ತೆರಳುಬಾಳು ಎಜುಕೇಶನ್ ಸೆಂಟರ್) ಪ್ರಥಮ ಸ್ಥಾನ ಪಡೆದರು. ವಿದ್ಯಾರ್ಥಿನಿಗೆ 3 ಸಾವಿರ ನಗದು ಹಾಗೂ ಪ್ರಶಸ್ತಿ ನೀಡಲಾಯಿತು. ಪೂರ್ವಿಕಾ (ವಿಜಯವಿಠಲ ಶಾಲೆ) ದ್ವಿತೀಯ ಸ್ಥಾನಕ್ಕೆ 2 ಸಾವಿರ ನಗದು, ಬಹುಮಾನ ಹಾಗೂ ನೆನಪಿನ ಕಾಣಿಕೆ, ಹಂಸಿಕಾ (ಸರ್ಕಾರಿ ಆದರ್ಶ ಶಾಲೆ) ಮೂರನೇ ಬಹುಮಾನ ಪಡೆದರು. ಈಕೆಗೆ 1 ಸಾವಿರ ನಗದು, ನೆನೆಪಿನಕಾಣಿಕೆ ಮತ್ತು 4 ಮತ್ತು 5 ಸ್ಥಾನವನ್ನು ಕ್ರಮವಾಗಿ ನಮನ (ಸಿ.ಎಫ್‌.ಟಿ.ಆರ್‌.ಐ ಶಾಲೆ) ಹಾಗೂ ಬಿ.ಕೆ. ರೋಹಿಣಿ (ಕ್ರೈಸ್ಟ್‌ ಶಾಲೆ) ವಿದ್ಯಾರ್ಥಿಗಳು ಕ್ರಮವಾಗಿ 4 ಮತ್ತು 5ನೇ ಸ್ಥಾನ ಪಡೆದರು. ಇವರಿಗೆ 500 ರೂ. ನಗದು ಮತ್ತು ಸಮಾಧಾನಕರ ಬಹುಮಾನ ನೀಡಲಾಯಿತು.

ಕಾರ್ಯಕ್ರಮದಲ್ಲಿ ಸಂಚಾಲಕ ಗೋಕುಲ್ ಗೋವರ್ಧನ್, ಸಹ ಸಂಚಾಲಕ ಯಶವಂತ್ ಕುಮಾರ್, ಕಾರ್ಯಕ್ರಮದ ಸಂಯೋಜಕ ಕಿರಣ್ ಜೈರಾಮ್ ಗೌಡ, ಅನಿಲ್, ಹಿರಿಯಣ್ಣ, ಶಿವಪ್ರಸಾದ್, ಯತೀಶ್, ಅಮರ್, ಮುರಳಿ, ಪ್ರಸನ್ನ ರಾಜಗುರು, ಆನಂದ್, ಮನೋಹರ್, ಹೇಮಂತ್ ಕುಮಾರ್, ನವೀನ್, ಸುನಿಲ್ ಕುಮಾರ್, ರಾಮಪ್ರಸಾದ್, ಮಂಜು, ಬಾಲಕೃಷ್ಣ, ಮಂಜು ಹುಣಸೂರು, ಹರೀಶ್ ಶೆಟ್ಟಿ, ಹರೀಶ್ ಬಾಬು, ಸಹನಾ, ಸುಕೃತಾ, ಕಲ್ಯಾಣಿ, ಜ್ಯೋತಿ ಲಕ್ಷ್ಮಿ, ವಿದ್ಯಾರ್ಥಿ ಪೋಷಕರು ಇದ್ದರು.