- ಯುಬಿಡಿಟಿ ಕಾಲೇಜಿನಿಂದ ಯುಜಿ ಸಿಇಟಿ -2026 ಕೌನ್ಸೆಲಿಂಗ್ ಕಾರ್ಯಾಗಾರ
- - -ದಾವಣಗೆರೆ: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ತಮ್ಮ ಆಸಕ್ತಿ ಮತ್ತು ಸಾಮರ್ಥ್ಯಕ್ಕೆ ತಕ್ಕಂತೆ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳುವುದು ಬಹುಮುಖ್ಯ. ಕೌನ್ಸೆಲಿಂಗ್ ಪ್ರಕ್ರಿಯೆ ಬಗ್ಗೆ ಸ್ಪಷ್ಟತೆ ಇಲ್ಲದಿದ್ದರೆ, ಅನೇಕ ವಿದ್ಯಾರ್ಥಿಗಳು ಸೂಕ್ತ ಅವಕಾಶಗಳಿಂದ ವಂಚಿತರಾಗುತ್ತಾರೆ. ಈ ಕಾರ್ಯಾಗಾರ ವಿದ್ಯಾರ್ಥಿಗಳಿಗೆ ಕೇವಲ ಮಾಹಿತಿ ನೀಡುವುದಲ್ಲದೇ, ಅವರ ಭವಿಷ್ಯಕ್ಕೆ ಸ್ಪಷ್ಟ ದಿಕ್ಸೂಚಿ ಒದಗಿಸುವ ಉದ್ದೇಶ ಹೊಂದಿದೆ ಎಂದು ಪಿಡಬ್ಲ್ಯುಡಿ ಸಹಾಯಕ ಎಂಜಿನಿಯರ್ ಕೆ.ಜೆ.ಚೇತನ್ ಕುಮಾರ್ ನಾಯ್ಕ್ ಹೇಳಿದರು.
ನಗರದ ಯುಬಿಡಿಟಿ ಕಾಲೇಜಿನ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಸೆಮಿನಾರ್ ಹಾಲ್‌ನಲ್ಲಿ ಸೋಮವಾರ ಯುಬಿಡಿಟಿ ಎಂಜಿನಿಯರಿಂಗ್ ಕಾಲೇಜಿನ ಆಶ್ರಯದಲ್ಲಿ ಆಯೋಜಿಸಲಾಗಿದ್ದ ''''ಯುಜಿ ಸಿಇಟಿ -2026 ಕೌನ್ಸೆಲಿಂಗ್ ಕಾರ್ಯಾಗಾರ'''' ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಗುರಿಗಳನ್ನು ತಲುಪಲು ಕೇವಲ ಅಂಕಗಳು ಮಾತ್ರವೇ ಸಾಕಾಗುವುದಿಲ್ಲ, ಸೂಕ್ತ ಕೋರ್ಸ್ ಆಯ್ಕೆ ಮತ್ತು ತಾಂತ್ರಿಕ ಜ್ಞಾನದ ಸರಿಯಾದ ಅರಿವು ಅತ್ಯಗತ್ಯ ಎಂದರು.ಕಾಲೇಜಿನ ಪ್ರಾಚಾರ್ಯ ಡಾ. ಡಿ.ಪಿ. ನಾಗರಾಜಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಓದಿಗೆ ಸೀಮಿತವಾಗದೇ, ಸಮಾಜದ ಸಮಸ್ಯೆಗಳಿಗೆ ತಾಂತ್ರಿಕ ಪರಿಹಾರಗಳನ್ನು ಕಂಡುಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು. ಪೋಷಕರು ಮತ್ತು ಶಿಕ್ಷಕರ ಮಾರ್ಗದರ್ಶನ ವಿದ್ಯಾರ್ಥಿಗಳ ಬದುಕಿಗೆ ಉತ್ತಮ ದಿಕ್ಕನ್ನು ನೀಡುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಡಾ.ಈರಪ್ಪ ಸೊಗಲದ್, ಡಾ.ಎಸ್.ಬಿ.ಮಲ್ಲೂರು, ಡಾ.ಮಂಜಾ ನಾಯ್ಕ್, ಡಾ.ಹರೀಶ್ ಸೇರಿದಂತೆ ಕಾಲೇಜಿನ ಇತರು ಇದ್ದರು. ನೂರಾರು ವಿದ್ಯಾರ್ಥಿಗಳು ಮತ್ತು ಪೋಷಕರು ಪಾಲ್ಗೊಂಡು ಮಾರ್ಗದರ್ಶನ ಪಡೆದರು.
- - -
-25ಕೆಡಿವಿಜಿ37: ದಾವಣಗೆರೆಯ ಯುಬಿಡಿಟಿ ಕಾಲೇಜಿನಲ್ಲಿ ನಡೆದ ಯುಜಿ ಸಿಇಟಿ -2026 ಕೌನ್ಸಿಲಿಂಗ್ ಕಾರ್ಯಾಗಾರವನ್ನು ಕೆ.ಜೆ.ಚೇತನ್ ಕುಮಾರ್ ನಾಯ್ಕ್ ಉದ್ಘಾಟಿಸಿದರು.