ಕಾಯಕ ಶರಣರ ಜಯಂತಿಗೆ ತಹಸೀಲ್ದಾರ ಗೈರು: ಪ್ರತಿಭಟನೆ

| Published : Feb 16 2024, 01:52 AM IST

ಕಾಯಕ ಶರಣರ ಜಯಂತಿಗೆ ತಹಸೀಲ್ದಾರ ಗೈರು: ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಸಮಯ, ದಿನಾಂಕ ನಿಗದಿಪಡಿಸಿದ್ದರೂ ಕಾರ್ಯಕ್ರಮಕ್ಕೆ ಹಾಜರಾಗದೇ ಅಪಮಾನಿಸಿದ್ದಾರೆ

ಹುಬ್ಬಳ್ಳಿ: ಕಾಯಕ ಶರಣರ ಜಯಂತ್ಯುತ್ಸವಕ್ಕೆ ಹಾಜರಾಗದ ಹುಬ್ಬಳ್ಳಿಯ ಶಹರ ತಹಸೀಲ್ದಾರ ವಿರುದ್ಧ ವಿವಿಧ ದಲಿತ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಗುರುವಾರ ಪ್ರತಿಭಟನೆ ನಡೆಸಿದರು.

ಇಲ್ಲಿಯ ತಹಸೀಲ್ದಾರ ಕಚೇರಿ ಎದುರು 1ಗಂಟೆಗೂ ಅಧಿಕ ಕಾಲ ಪ್ರತಿಭಟನೆ ನಡೆಸಿ,ತಹಸೀಲ್ದಾರ ವಿರುದ್ಧ ಕಿಡಿಕಾರಿದರು. ರಾಜ್ಯ ಸರ್ಕಾರ ದಲಿತ, ಶೋಷಿತ ಸಮುದಾಯದ ವಚನಕಾರರನ್ನು ಗೌರವಿಸುವ ಜತೆಗೆ ಸಮುದಾಯವನ್ನು ಮುನ್ನೆಲೆಗೆ ತರುವ ಉದ್ದೇಶದಿಂದ ಕಾಯಕ ಶರಣರ ಜಯಂತ್ಯುತ್ಸವ ಆಚರಿಸುತ್ತಿದೆ.ಅದಕ್ಕಾಗಿ ಸಮಯ, ದಿನಾಂಕ ನಿಗದಿಪಡಿಸಿದ್ದರೂ ಕಾರ್ಯಕ್ರಮಕ್ಕೆ ಹಾಜರಾಗದೇ ಅಪಮಾನಿಸಿದ್ದಾರೆ ಎಂದು ದೂರಿದರು.

ಪ್ರತಿಭಟನೆ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ ಕಾರ್ಯಕ್ರಮಕ್ಕೆ ಬಂದು ಹಾಜರಾದರು. ಬಳಿಕ ಪ್ರತಿಭಟನಾಕಾರರು ಪ್ರತಿಭಟನೆ ಹಿಂಪಡೆದರು.

ಈ ವೇಳೆ ಸಂಘಟನೆಯ ಗುರುನಾಥ ಉಳ್ಳಿಕಾಶಿ, ಶಂಕರ ಅಜಮನಿ, ಪರಶುರಾಮ ಅರಕೇರಿ, ಲೋಹಿತ ಗಾಮನಗಟ್ಟಿ, ಪ್ರೇಮನಾಥ ಚಿಕ್ಕತುಂಬಳ, ಚಂದ್ರು ಯಾತಗಿರಿ, ಸದಾನಂದ, ಧರ್ಮರಾಜ ಸಾಬೋಜಿ, ವಸಂತ ಬೆಟಗೇರಿ ಇತರರು ಇದ್ದರು.