ಇ-ಪೌತಿ ಖಾತೆ ಆಂದೋಲನ ಸದುಪಯೋಗಕ್ಕೆ ತಹಸೀಲ್ದಾರ್‌ ಕರೆ

| Published : Jul 10 2025, 01:45 AM IST

ಸಾರಾಂಶ

ಎರಡು ಮೂರು ತಲೆಮಾರುಗಳಿಂದ ಮುತ್ತಾತ, ತಾತ, ತಂದೆಯ ಹೆಸರಿನಲ್ಲಿರುವ ಭೂಮಿಯ ಹಕ್ಕನ್ನು ಮಕ್ಕಳಿಗೆ ಅಥವಾ ವಾರಸುದಾರರಿಗೆ ಕಾನೂನಾತ್ಮಕವಾಗಿ ವರ್ಗಾವಣೆಯಾಗಿರುವುದಿಲ್ಲ. ಇದರಿಂದ ಜನರಿಗೆ ಸರ್ಕಾರದ ಯಾವುದೇ ಸೌಲತ್ತುಗಳನ್ನು ಪಡೆಯಲು ಸಾಧ್ಯವಾಗಿಲ್ಲ. ಹೀಗಾಗಿ ರಾಜ್ಯ ಸರ್ಕಾರದ ಮಹತ್ವದ ಯೋಜನೆಯಾದ ಇ ಪೋತಿ ಖಾತೆ ಆಂದೋಲನದ ಸದುಪಯೋಗವನ್ನು ಸಾರ್ವಜನಿಕರು ಪಡೆಯಬೇಕೆಂದು ಮುಂಡರಗಿ ತಹಸೀಲ್ದಾರ್‌ ಎರಿಸ್ವಾಮಿ ಪಿ.ಎಸ್. ಹೇಳಿದರು.

ಡಂಬಳ: ಎರಡು ಮೂರು ತಲೆಮಾರುಗಳಿಂದ ಮುತ್ತಾತ, ತಾತ, ತಂದೆಯ ಹೆಸರಿನಲ್ಲಿರುವ ಭೂಮಿಯ ಹಕ್ಕನ್ನು ಮಕ್ಕಳಿಗೆ ಅಥವಾ ವಾರಸುದಾರರಿಗೆ ಕಾನೂನಾತ್ಮಕವಾಗಿ ವರ್ಗಾವಣೆಯಾಗಿರುವುದಿಲ್ಲ. ಇದರಿಂದ ಜನರಿಗೆ ಸರ್ಕಾರದ ಯಾವುದೇ ಸೌಲತ್ತುಗಳನ್ನು ಪಡೆಯಲು ಸಾಧ್ಯವಾಗಿಲ್ಲ. ಹೀಗಾಗಿ ರಾಜ್ಯ ಸರ್ಕಾರದ ಮಹತ್ವದ ಯೋಜನೆಯಾದ ಇ ಪೋತಿ ಖಾತೆ ಆಂದೋಲನದ ಸದುಪಯೋಗವನ್ನು ಸಾರ್ವಜನಿಕರು ಪಡೆಯಬೇಕೆಂದು ಮುಂಡರಗಿ ತಹಸೀಲ್ದಾರ್‌ ಎರಿಸ್ವಾಮಿ ಪಿ.ಎಸ್. ಹೇಳಿದರು.

ಮುಂಡರಗಿ, ಡಂಬಳ ಹೋಬಳಿಯ ವಿವಿಧ ಗ್ರಾಮದಲ್ಲಿ ಇ ಪೋತಿ ಖಾತೆ ಆಂದೋಲನ ಕಾರ್ಯಕ್ರಮದ ಕುರಿತು ತಿಳಿವಳಿಕೆ ನೀಡಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಜಮೀನುಗಳ ಉತಾರದಲ್ಲಿ ಪೋತಿಯಾದ ವಾರಸುದಾರರ ಹೆಸರು ಸೇರ್ಪಡೆ ಮಾಡುವ ಕುರಿತು ರಾಜ್ಯ ಸರ್ಕಾರದ ಇ ಪೋತಿ ಖಾತೆ ಆಂದೋಲನ ಅಡಿಯಲ್ಲಿ ಪೋತಿಯಾದ ವ್ಯಕ್ತಿಯ ಅವರ ಮರಣದಾಖಲೆ, ವಂಶಾವಳಿ, ಫೋನ್ ನಂಬರ್ ಲಿಂಕ್ ಆಗಿರುವ ಆಧಾರ ಕಾರ್ಡ್ ಎಲ್ಲಾ ಅಗತ್ಯ ದಾಖಲೆಯನ್ನು ಸಂಬಂಧಿಸಿದ ಗ್ರಾಮ ಆಡಳಿತಾಧಿಕಾರಿಗಳಿಗೆ ಸಲ್ಲಿಸಲು ಸೂಚಿಸಲಾಯಿತು.

ಡಂಬಳ ನಾಡ ಕಾರ್ಯಾಲಯದ ಉಪತಸೀಲ್ದಾರ್ ಎಸ್.ಎಸ್. ಬಿಚ್ಚಾಲಿ ಮಾತನಾಡಿ, ಪೌತಿಯಾದವರ ಕುಟುಂಬದ ಸದಸ್ಯರಿಗೆ, ಖಾತೆಯಾಗದಿರುವುದನ್ನು ಗಮನಿಸಿ ಸರ್ಕಾರವೇ ಪೌತಿ ಖಾತೆ ಆಂದೋಲನದ ಮೂಲಕ ಅನುಕೂಲ ಕಲ್ಪಿಸುತ್ತಿದ್ದು ಸಾರ್ವಜನಿಕರು ಇದರ ಸಂಪೂರ್ಣ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಮುಂಡರಗಿ, ಡಂಬಳ ಹೋಬಳಿಯ ವಿವಿಧ ಗ್ರಾಮದಲ್ಲಿ ಈ ಕುರಿತು ಡಂಗೂರದ ಮೂಲಕ ಸಾರ್ವಜನಿಕರಿಗೆ ಜಾಗ್ರತೆ ಮೂಡಿಸಲಾಯಿತು.

ಈ ಸಮಯದಲ್ಲಿ ಡಂಬಳ ನಾಡ ಕಾರ್ಯಲಯದ ಕಂದಾಯ ನಿರೀಕ್ಷಕ ಪ್ರಭು ಬಾಗಲಿ, ಗ್ರಾಮ ಆಡಳಿತಾಧಿಕಾರಿಗಳು ಇದ್ದರು.