ಸಾರಾಂಶ
ರಾಮನಾಥಪುರದ ಕಾವೇರಿ ನದಿ ದಂಡೆಯಲ್ಲಿರುವ ಶ್ರೀ ಚತುರ್ಯಗ ಮೂರ್ತಿ ಶ್ರೀ ರಾಮೇಶ್ವರಸ್ವಾಮಿ ದೇವಾಲಯಕ್ಕೆ ತಹಸೀಲ್ದಾರ್ ಕೆ.ಸಿ. ಸೌಮ್ಯ ಅವರು ಭೇಟಿ ನೀಡಿ ಪೂಜೆ ಸಲ್ಲಿಸಿದರು. ರಾಮನಾಥಪುರದಲ್ಲಿ ಹತ್ತಾರು ದೇವಾಲಯಗಳು ಇದ್ದು, ಇಂತಹ ಪುಣ್ಯಕ್ಷೇತ್ರದಲ್ಲಿ ಇರುವವರು ಬಹಳ ಪುಣ್ಯವಂತರು. ಇಂತಹ ಪುಣ್ಯಕ್ಷೇತ್ರ ಇರುವುದು ಅಪೂರೂಪ ಎಂದು ಕೆ.ಸಿ.ಸೌಮ್ಯ ಸಂತೋಷ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ರಾಮನಾಥಪುರ
ಇಲ್ಲಿಯ ಕಾವೇರಿ ನದಿ ದಂಡೆಯಲ್ಲಿರುವ ರಾಮನಾಥಪುರದಲ್ಲಿ ಹತ್ತಾರು ದೇವಾಲಯಗಳು ಇದ್ದು, ಇಂತಹ ಪುಣ್ಯಕ್ಷೇತ್ರದಲ್ಲಿ ಇರುವವರು ಬಹಳ ಪುಣ್ಯವಂತರು. ಇಂತಹ ಪುಣ್ಯಕ್ಷೇತ್ರ ಇರುವುದು ಅಪೂರೂಪ ಎಂದು ಕೆ.ಸಿ.ಸೌಮ್ಯ ಅವರು ಸಂತೋಷ ವ್ಯಕ್ತಪಡಿಸಿದರು.ರಾಮನಾಥಪುರದ ಕಾವೇರಿ ನದಿ ದಂಡೆಯಲ್ಲಿರುವ ಶ್ರೀ ಚತುರ್ಯಗ ಮೂರ್ತಿ ಶ್ರೀ ರಾಮೇಶ್ವರಸ್ವಾಮಿ ದೇವಾಲಯಕ್ಕೆ ತಹಸೀಲ್ದಾರ್ ಕೆ.ಸಿ. ಸೌಮ್ಯ ಅವರು ಭೇಟಿ ನೀಡಿ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ದೇವಾಲಯದ ಮುಖ್ಯ ಅರ್ಚಕರು ಶ್ರೀನಿವಾಸ್, ಸಹ ಅರ್ಚಕರು ಸಮಿತಿಯ ಸದಸ್ಯರಾದ ಎಂ.ಎನ್. ಕುಮಾರಸ್ವಾಮಿ, ಸಿದ್ದರಾಜು ಮುಂತಾದವರು ಇದ್ದರು.