ಅರಸೀಕೆರೆ : ವಕ್ಫ್‌ ಮಂಡಳಿಯ ಹೆಸರಿನಲ್ಲಿ ರೈತರು ಜಮೀನು, ಮಠಮಾನ್ಯಗಳ ಆಸ್ತಿ ನಮೂದು ಮಾಡುವುದನ್ನು ನಿಲ್ಲಿಸಲಿ

| Published : Nov 09 2024, 01:19 AM IST / Updated: Nov 09 2024, 10:47 AM IST

ಅರಸೀಕೆರೆ : ವಕ್ಫ್‌ ಮಂಡಳಿಯ ಹೆಸರಿನಲ್ಲಿ ರೈತರು ಜಮೀನು, ಮಠಮಾನ್ಯಗಳ ಆಸ್ತಿ ನಮೂದು ಮಾಡುವುದನ್ನು ನಿಲ್ಲಿಸಲಿ
Share this Article
  • FB
  • TW
  • Linkdin
  • Email

ಸಾರಾಂಶ

ವಕ್ಫ್‌ ಮಂಡಳಿಯ ಹೆಸರಿನಲ್ಲಿ ರಾಜ್ಯಾದ್ಯಂತ ರೈತರು ಜಮೀನು, ಮಠಮಾನ್ಯಗಳ ಆಸ್ತಿ, ಸರ್ಕಾರಿ ಜಾಗವನ್ನು ವಕ್ಫ್‌ ಆಸ್ತಿ ಎಂದು ನಮೂದು ಮಾಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿ ಬಿಜೆಪಿ ನಗರ ಹಾಗೂ ಗ್ರಾಮಾಂತರ ಘಟಕದ ಪದಾಧಿಕಾರಿಗಳು ತಾಲೂಕು ಕಚೇರಿಯ ಬಳಿ ಪ್ರತಿಭಟನೆ ನಡೆಸಿದರು.  

 ಅರಸೀಕೆರೆ : ವಕ್ಫ್‌ ಮಂಡಳಿಯ ಹೆಸರಿನಲ್ಲಿ ರಾಜ್ಯಾದ್ಯಂತ ರೈತರು ಜಮೀನು, ಮಠಮಾನ್ಯಗಳ ಆಸ್ತಿ, ಸರ್ಕಾರಿ ಜಾಗವನ್ನು ವಕ್ಫ್‌ ಆಸ್ತಿ ಎಂದು ನಮೂದು ಮಾಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿ ಬಿಜೆಪಿ ನಗರ ಹಾಗೂ ಗ್ರಾಮಾಂತರ ಘಟಕದ ಪದಾಧಿಕಾರಿಗಳು ತಾಲೂಕು ಕಚೇರಿಯ ಬಳಿ ಪ್ರತಿಭಟನೆ ನಡೆಸಿದರು.

ತಾಲೂಕು ಕಚೇರಿಯ ಆವರಣದಲ್ಲಿ ಜಮಾಯಿಸಿದ ನೂರಾರು ಬಿಜೆಪಿ ಕಾರ್ಯಕರ್ತರು ರಾಜ್ಯ ಕಾಂಗ್ರೆಸ್‌ ಸರ್ಕಾರ ಹಾಗೂ ಸಚಿವ ಜಮೀರ್‌ ವಿರುದ್ದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ನಗರಧ್ಯಕ್ಷ ಅವಿನಾಶ್‌ ನಾಯ್ಡು ಮಾತನಾಡಿ, ವಕ್ಫ್‌ ಮಂಡಳಿಯ ಹೆಸರಿನಲ್ಲಿ ರೈತರ ಜಮೀನು, ಮಠ, ಮಂದಿರಗಳ ಆಸ್ತಿಯನ್ನು ಕಬಳಿಸುವ ಹುನ್ನಾರ ನಡೆಯುತ್ತಿದೆ. ಪಹಣಿಗಳಲ್ಲಿ ವಿನಾಕಾರಣ ವಕ್ಫ್‌ ಮಂಡಳಿ ಹೆಸರು ನಮೂದು ಮಾಡಿದ್ದು ಅಕ್ಷಮ್ಯ ಅಪರಾಧವಾಗಿದೆ. ರೈತರ ಜಮೀನು ಲಪಟಾಯಿಸಲು ರಾಜ್ಯ ಕಾಂಗ್ರೆಸ್‌ ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದರು.

ಗ್ರಾಮಾಂತರ ಅಧ್ಯಕ್ಷ ಯತೀಶ್‌ ಮಾತನಾಡಿ, ರಾಜ್ಯದಲ್ಲಿ ವಕ್ಫ್‌ ಕಾಯ್ದೆಯ ದುರ್ಬಳಕೆಯ ಕಾರಣಕ್ಕಾಗಿ ರೈತರು ಮಠಗಳು ಹಿಂದೂ ದೇವಾಲಯಗಳಿಗೆ ಆತಂಕ ಎದುರಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ದಿನದಿಂದಲೂ ಒಂದಲ್ಲ ಒಂದು ರೀತಿಯ ಹಗರಣದಲ್ಲಿ ಮುಳುಗಿದೆ. ಓಲೈಕೆ ರಾಜಕೀಯದಿಂದಾಗಿ ಸರ್ಕಾರ ಅನ್ನದಾತನಿಗೆ ಅನ್ಯಾಯ ಮಾಡುತ್ತಿದೆ ಸರ್ಕಾರ ವಕ್ಫ್‌ ಕಾಯ್ದೆ ನಿಲ್ಲಿಸಬೇಕು ಎಂದು ಒತ್ತಾಯಿಸಿದರು. ನಂತರ ನೂರಾರು ಬಿಜೆಪಿ ಕಾರ್ಯಕರ್ತರು ತಹಸೀಲ್ದಾರ್‌ ಸಂತೋಷ್‌ ಕುಮಾರ್‌ರವರಿಗೆ ಮನವಿ ಪತ್ರ ಸಲ್ಲಿಸಿದರು.ಗ್ರಾಮಾಂತರ ತಾಲೂಕು ಪ್ರಧಾನ ಕಾರ್ಯದರ್ಶಿ ಕಿರಣ್‌ವಿರುಪಾಕ್ಷಪ್ಪ, ನಗರ ಪ್ರಧಾನ ಕಾರ್ಯದರ್ಶಿ ಮಂಜುಕುಮಾರ್‌, ನಿಕಟಪೂರ್ವ ಅಧ್ಯಕ್ಷ ದುಮ್ಮೇನಹಳ್ಳಿ ರಮೇಶ್‌, ಮುಖಂಡರಾದ ಎನ್‌ ಡಿ ಪ್ರಸಾದ್‌, ಹರಳಕಟ್ಟ ರಮೇಶ್‌, ಡಿ.ಬಿ.ಗಂಗಣ್ಣ, ಬಾಣಾವಾರ ಜಯಣ್ಣ, ಸುನೀಲ್‌ ರಾಂಪುರ, ಸಿಂಧು ಇನ್ನಿತರರು ಇದ್ದರು.