ಸಾರಾಂಶ
ರಾಮಾಯಣದ ಬಾಲಕಾಂಡದಲ್ಲಿ ಭಗೀರಥ ಮಹರ್ಷಿಯ ಕತೆ ಬರಲಿದೆ. ಗುರುಭಕ್ತಿಗೆ ಏಕಾಗ್ರತೆ, ತಪೋನಿಷ್ಠೆಯಿಂದಾಗಿ ಭಗೀರಥ ಕಂಗೊಳಿಸುತ್ತಾರೆ. ಶಿವನ ಜಟೆಯಲ್ಲಿದ್ದ ಗಂಗೆಯನ್ನು ಧರೆಗೆ ತಂದ ಕೀರ್ತಿಗೆ ಪಾತ್ರರಾಗಿರುವ ಭಗೀರಥ ಅವರ ಪ್ರಯತ್ನಶೀಲತೆಯು ಭಗೀರಥ ಪ್ರಯತ್ನವೆಂಬ ನುಡಿಗಟ್ಟಾಗಿ ಕನ್ನಡಿಗರೆಲ್ಲರ ಸ್ಫೂರ್ತಿಯ ನೆಲೆಯಾಗಿದೆ.
ಕನ್ನಡಪ್ರಭ ವಾರ್ತೆ ಟಿ. ನರಸೀಪುರ
ಜೀವನದಲ್ಲಿ ಬದ್ಧತೆ ಇದ್ದಲ್ಲಿ ಯಾವುದೇ ಕಾರ್ಯದಲ್ಲಿ ಸಾಧನೆ ಸಾಧ್ಯ ಎಂಬುದಕ್ಕೆ ಶ್ರೀ ಭಗೀರಥ ಮಹರ್ಷಿಯೇ ಸೂಕ್ತ ನಿದರ್ಶನ ವ್ಯಕ್ತಿಯಾಗಿದ್ದಾರೆ ಎಂದು ತಹಸೀಲ್ದಾರ್ ಟಿ.ಜೆ. ಸುರೇಶ್ ಆಚಾರ್ ಹೇಳಿದರು.ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ತಾಲೂಕು ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಭಗೀರಥ ಉಪ್ಪಾರ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.
ರಾಮಾಯಣದ ಬಾಲಕಾಂಡದಲ್ಲಿ ಭಗೀರಥ ಮಹರ್ಷಿಯ ಕತೆ ಬರಲಿದೆ. ಗುರುಭಕ್ತಿಗೆ ಏಕಾಗ್ರತೆ, ತಪೋನಿಷ್ಠೆಯಿಂದಾಗಿ ಭಗೀರಥ ಕಂಗೊಳಿಸುತ್ತಾರೆ. ಶಿವನ ಜಟೆಯಲ್ಲಿದ್ದ ಗಂಗೆಯನ್ನು ಧರೆಗೆ ತಂದ ಕೀರ್ತಿಗೆ ಪಾತ್ರರಾಗಿರುವ ಭಗೀರಥ ಅವರ ಪ್ರಯತ್ನಶೀಲತೆಯು ಭಗೀರಥ ಪ್ರಯತ್ನವೆಂಬ ನುಡಿಗಟ್ಟಾಗಿ ಕನ್ನಡಿಗರೆಲ್ಲರ ಸ್ಫೂರ್ತಿಯ ನೆಲೆಯಾಗಿದೆ. ಉಪ್ಪಾರ ಜನಾಂಗದವರು ಭಗೀರಥರನ್ನು ತಮ್ಮ ಕುಲದ ಮೂಲ ಪುರುಷನೆಂದು ಭಾವಿಸಿ, ಭಕ್ತಿ, ಶ್ರದ್ಧೆಯಿಂದ ಆರಾಧಿಸುತ್ತಿದ್ದಾರೆ ಎಂದರು.ಉಪ್ಪಾರ ಮಹಾಸಭಾದ ಅಧ್ಯಕ್ಷ ಮಹದೇವಶೆಟ್ಟಿ ಮಾತನಾಡಿ, ದೇವಲೋಕದ ಗಂಗೆಯನ್ನು ಭಗೀರಥರು ಧರೆಗೆ ಹರಿಸುವಂತೆ ಮಾಡಿದರು. ನೀರಿನಿಂದ ಉಪ್ಪು ತಯಾರಿಸಿದವರು ಉಪ್ಪಾರ ಜನಾಂಗದವರಾದರು, ಗಂಗೆಯನ್ನು ತನ್ನ ತಪಸ್ಸಿನ ಫಲವಾಗಿ ಭೂ ಲೋಕಕ್ಕೆ ಕರೆತಂದಂತಹ ಮಹಾನ್ ಪುರುಷ ಭಗೀರಥ ಮಹರ್ಷಿ ಎಂಬ ಐತಿಹಾಸಿಕ ಹಿನ್ನೆಲೆ ಇದೆ ಎಂದು ತಿಳಿಸಿದರು.
ಭಗೀರಥ ಉಪ್ಪಾರ ಜನ ಕಲ್ಯಾಣ ಟ್ರಸ್ಟಿನ ಅಧ್ಯಕ್ಷ ಸಿದ್ದಪ್ಪಸ್ವಾಮಿ, ಕಾರ್ಯಾಧ್ಯಕ್ಷ ರಾಮಶೆಟ್ಟಿ, ಪ್ರಧಾನ ಕಾರ್ಯದರ್ಶಿ ಶಾಂತರಾಜು, ಕೆ. ಮಹದೇವಶೆಟ್ಟಿ, ಚಿನ್ನಸ್ವಾಮಿ, ನಟರಾಜು, ತೊಟ್ಟವಾಡಿ ನಾಗಶೆಟ್ಟಿ, ಕೊತ್ತೇಗಾಲ ಮಹದೇವು, ಬೆಳ್ಳಿ, ಗ್ರಾಪಂ ಸದಸ್ಯ ರಾಜೇಂದ್ರ, ಸಿದ್ದಶೆಟ್ಟಿ, ಮಾವಿನಹಳ್ಳಿ ಮಾದೇಶ್, ಮಣಿಕಂಠ, ವಾಟಾಳು ವೆಂಕಟರಾಮು, ಉಮಾಪತಿ ಇದ್ದರು.